ಸುರಪುರ: ನಗರದ ಕಾರ್ಮಿಕರ ಇಲಾಖೆಗೆ ನೂತನ ನಿರೀಕ್ಷಕರಾಗಿ ಆಗಮಿಸಿದ ಸಬೀರಾ ಬೇಗಂ ಅವರಿಗೆ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾರ್ಮಿಕರ ಒಕ್ಕೂಟದ ಮುಖಂಡರು ಸನ್ಮಾನಿಸಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿದ ನಿರೀಕ್ಷಕರಾದ ಸಬೀರಾ ಬೇಗಂ ಮಾತನಾಡಿ,ಕಾರ್ಮಿಕ ಇಲಾಖೆಯಲ್ಲಿ ಅನೇಕ ಸೌಲಭ್ಯಗಳಿವೆ ಅವುಗಳನ್ನು ಕಾರ್ಮಿಕರು ಪಡೆದುಕೊಳ್ಳಬೇಕು,ಅಲ್ಲದೆ ಇಲಾಖೆಯಿಂದ ಮಾಡಬೇಕಾದ ಯಾವುದೇ ಕೆಲಸದ ಕುರಿತು ಕಾರ್ಮಿಕರು ಸಹಕಾರ ನೀಡಬೇಕು.ನನ್ನ ಸೇವೆಯಲ್ಲಿ ಯಾವುದೇ ಕರ್ತವ್ಯ ಲೋಪವಾಗದಂತೆ ನಿಷ್ಠೆಯಿಂದ ಕೆಲಸ ಮಾಡುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಸನ್ಮಾನಿಸಿದ ಒಕ್ಕೂಟದ ಅಧ್ಯಕ್ಷ ಮುಬೀನ್ ದಖನಿ ಮಾತನಾಡಿ,ಕಳೆದ ಕೆಲ ತಿಂಗಳುಗಳ ಹಿಂದೆ ಸರಕಾರ ಎಲ್ಲಾ ಕಟ್ಟಡ ಕಾರ್ಮಿಕರಿಗೆ ಕೋವಿಡ್-೧೯ ಪರಿಹಾರವಾಗಿ ತಲಾ ೫ ಸಾವಿರ ರೂಪಾಯಿಗಳನ್ನು ನೀಡುವುದಾಗಿ ತಿಳಿಸಿ ಅನೇಕ ಕಾರ್ಮಿಕರಿಗೆ ಪರಿಹಾರ ಹಣ ಬಂದಿದೆ,ಅಲ್ಲದೆ ಅನೇಕ ಕಾರ್ಮಿಕರಿಗೆ ಇನ್ನೂ ಪರಿಹಾರ ಧನ ಬಂದಿಲ್ಲ ಕೊಡಿಸುವಂತೆ ಹಾಗು ಇನ್ನೂ ಅನೇಕ ಕಾರ್ಮಿಕರಿಗೆ ಸದಸ್ಯತ್ವದ ಗುರುತಿನ ಚೀಟಿ ಬಂದಿರುವುದಿಲ್ಲ ತರಿಸಿ ಕೊಡುವಂತೆ ವಿನಂತಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ವೈಜನಾಥ ಹೊಸ್ಮನಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಮಂದಾಲೆ ಮಹ್ಮದ ಆರೀಫ್ ಆನಂದ ಅರಕೇರಿ ಶ್ರೀನಿವಾಸ ಜಾಲಗಾರ ಸೈಯದ್ ಹಜರ್ ಮಹಿಳಾ ಘಟಕದ ತಾಲೂಕು ಅಧ್ಯಕ್ಷರಾದ ಸರೋಜಾ ಪ್ರಭಾಕರ ನಗನೂರು ರಾಘವೇಂದ್ರ ಭಕ್ರಿ ಸೇರಿದಂತೆ ಇತರರಿದ್ದರು.