ಕೋಲಾರ: ಜಿಲ್ಲೆಯಲ್ಲಿನ ಖಾಸಗಿ ಶಾಲೆ ಶಿಕ್ಷಕರ ಮತ್ತು ಉಪನ್ಯಾಸಕರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಂಸದರಾದ ಎಸ್ ಮುನಿಸ್ವಾಮಿರವರಿಗೆ ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗ ಕೋಲಾರ ಘಟಕದ ವತಿಯಿಂದ ಇಂದು ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗದ ಕೋಲಾರ ಜಿಲ್ಲಾಧ್ಯಕ್ಷರಾದ ಮಂಜುನಾಥ್.ಆರ್.ಎ. ಮಾತನಾಡಿ ಕಳೆದ ಎಂಟು ತಿಂಗಳುಗಳಿಂದ ಖಾಸಗಿ ಶಿಕ್ಷಕರುಗಳಿಗೆ, ವೇತನವಿಲ್ಲದೆ ಜೀವನ ನಡೆಸಲು
ದುಸ್ತರವಾಗಿದೆ. ಅವರ ಹಾಗು ಅವರ ಕುಟುಂಬಗಳು ಅವರ ದುಡಿಮೆಯನ್ನೇ ಅವಲಂಬಿಸಿವೆ, ಕೊವಿಡ್ 19 ರ ಈ ಸಮಯದಲ್ಲಿ ಶಿಕ್ಷಕರು ತರಕಾರಿಗಳನ್ನು ಮಾರುವುದು, ಗಾರೆ ಕೆಲಸ ಮಾಡುವುದು ಹಾಗು ಇತರೆ ಕೂಲಿಕೆಲಸಗಳನ್ನು ಮಾಡುತ್ತಿದ್ದರು ಸಹ ಅವರಿಗೆ ನಿಗಧಿತ ಕೆಲಸ ದೊರೆಯುತ್ತಿಲ್ಲ.
ಮಾನ್ಯ ಶಿಕ್ಷಣ ಸಚಿವರು ಖಾಸಗಿ ಶಿಕ್ಷಕರಿಗೆ ಸಹಾಯ ಧನ 10 ಸಾವಿರ ರೂಗಳನ್ನು ನೀಡುವುದಾಗಿ ಭರವಸೆ ನೀಡಿದರು. ಆದರೆ ಇದುವರೆಗೂ ಯಾವೊಬ್ಬ ಖಾಸಗಿ ಶಿಕ್ಷಕರಿಗೆ ಈ ಧನ ಸಹಾಯ ಅವರ ಕೈ ಸೇರಿಲ್ಲ. ಖಾಸಗಿ ಶಾಲೆಗಳನ್ನೇ ನಂಬಿಕೊಂಡಿದ್ದ ಸಮಾರು 1.ಲಕ್ಷದ 48, ಸಾವಿರ ಖಾಸಗಿ ಶಿಕ್ಷಕರ ಬದುಕು ಇಂದು ಬೀದಿಗೆ ಬಂದಿವೆ. ಕೂಡಲೇ ಸರ್ಕಾರ ಖಾಸಗಿ ಶಿಕ್ಷಕರ ನೆರವಿಗೆ ಬರಬೇಕೆಂದು ತಿಳಿಸಿದರು.
ಮಾನ್ಯ ಸಂಸದರಾದ ಎಸ್. ಮುನಿಸ್ವಾಮಿರವರು ಮಾತನಾಡಿ ಕೂಡಲೇ ಖಾಸಗಿ ಶಿಕ್ಷಕರ ಸಮಸ್ಯೆಗಳನ್ನು ಮಾನ್ಯ ಶಿಕ್ಷಣ ಸಚಿವರಾದ ಎಸ್. ಸುರೇಶ್ ಕುಮಾರ್ ಅವರ ಗಮನಕ್ಕೆ ತಂದು ಪರಿಹಾರ ಕೊಡಿಸುವುದಾಗಿ ತಿಳಿಸಿದರು.
ಅಲ್ಲದೆ ಕೊರೊನದಿಂದ ಜೀವನ ನಡೆಸಲು ಸಹ ಕಷ್ಟ ಪಡುತ್ತಿರುವ ಜಿಲ್ಲೆಯಲ್ಲಿನ ಖಾಸಗಿ ಶಿಕ್ಷಕರಿಗೆ ಮತ್ತು ಉಪನ್ಯಾಸಕರಿಗೆ ವೈಯುಕ್ತಿಕವಾಗಿ ಸಹಾಯ ಮಾಡುವುದಾಗಿ ಸಂಸದರಾದ ಎಸ್.ಮುನಿಸ್ವಾಮಿರವರು ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕೋಲಾರ ಖಾಸಗಿ ಶಿಕ್ಷಕರ ಬಳಗದ ಜಿಲ್ಲಾಧ್ಯಕ್ಷರಾದ ಮಂಜುನಾಥ್.ಆರ್.ಎ. ರಾಜ್ಯ ಖಾಸಗಿ ದೈಹಿಕ ಶಿಕ್ಷಣ ಸಂಘದ ರಾಜ್ಯಾಧ್ಯಕ್ಷರಾದ ಸಂಪತ್ ಕುಮಾರ್, ಪದಾಧಿಕಾರಿಗಳಾದ ಸುಕುಮಾರ್, ನಿಶಾಂತ್, ಅಮರನಾಥ್ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.