ವೀರಶೈವ ಮಹಾಸಭೆ ನೂತನ ಪದಾಧಿಕಾರಿಗಳಿಗ ಅಭಿನಂದನಾ ಸಮಾರಂಭ

0
52

ಕಲಬುರಗಿ: ಅಖಿಲ ಭಾರತ ಶಿವಾಚಾರ್ಯ ಸಂಸ್ಥೆಯ ಕಲಬುರ್ಗಿ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳಿಗೆ ಅಖಿಲ ಭಾರತ ವೀರಶೈವ ಮಹಾಸಭೆ ವತಿಯಿಂದ ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೂಜ ಶ್ರೀ ಬಸವರಾಜಪ್ಪ ಅಪ್ಪಅವರ ತೋಟದ ಮನೆಯಲ್ಲಿ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು.

ಶಿವಾಚಾರ್ಯ ಸಂಘದ ಜಿಲ್ಲಾಧ್ಯಕ್ಷರಾದ ಶಖಾಪುರ ತಪೋವನದ ಡಾ. ಸಿದ್ದರಾಮ ಶಿವಾಚಾರ್ಯರು ಪ್ರಧಾನ ಕಾರ್ಯದರ್ಶಿಗಳಾಗಿ ಪಾಳ ಮಠದ ಡಾ. ಗುರುಮೂರ್ತಿ ಶಿವಾಚಾರ್ಯರು ಮತ್ತು ಶಿವಶಂಕರ ಶಿವಾಚಾರ್ಯರು ಸೇಡಂ ಮಠ ಮತ್ತು ಷಟಸ್ಥಲ ಬ್ರಹ್ಮ ಅಭಿನವ ಚನ್ನಮಲ್ಲೇಶ್ವರ್ ಶಿವಾಚಾರ್ಯರು ಬಡದಾಳ ಮತ್ತು ಶ್ರೀ ಷಟಸ್ಥಲ ಬ್ರಹ್ಮ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು  ಸಂಸ್ಥಾನ ಮಠ ಕಡಕೋಳ ಶ್ರೀಗಳಿಗೆ ಭಕ್ತಿಪೂರ್ವಕ ಗೌರವವನ್ನು ಸಲ್ಲಿಸಿ.ಸನ್ಮಾನಿಸಿ ಗೌರವಿಸಿ ಅಭಿನಂದಿಸಲಾಯಿತು.

Contact Your\'s Advertisement; 9902492681

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಕಾಪುರ ಶ್ರೀಗಳು ಮಠಗಳು ಧಾರ್ಮಿಕ ಕೇಲಸದ ಜೂೕತೆಗೆ ಅನ್ನದಾತನ ಕಡೆಗೆ ಕೃಷಿ ಕಡೆಗೆ ಗಮನ ಕೊಡಬೇಕಾಗಿದೆ ಹಿಂದಿನ ದಿನಗಳಲ್ಲಿ ಮಠ ಗಳಿಂದಲೇ ಒಳ್ಳೆಯ ಬೀಜಗಳನ್ನು ಪಡೆದು ಒಳ್ಳೆ ಬೆಳೆ ಬೆಳೆಯುತ್ತಿದ್ದ ಅನ್ನದಾತ ಇಂದು ಕಷ್ಟದಲ್ಲಿದ್ದಾನೆ ಇದನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಮಠಗಳಿಂದ ಎಲ್ಲ ತರಹದ ಬೀಜಗಳನ್ನು ಮಠದಲ್ಲಿ ಸಂಗ್ರಹಣೆ ಮಾಡಿ  ಮಠದಲ್ಲಿ ಅನ್ನದಾತನಿಗೆ ಬಿಜ ವಿತರಣೆ ಮಾಡುವಂತ ಕೆಲಸ ಮಠಮಾನ್ಯಗಳು ಮಾಡಬೇಕಾಗಿದೆ ಆ ನಿಟ್ಟಿನಲ್ಲಿ ಶಿವಾಚಾರ್ಯರ ಸಂಸ್ಥೆ ಕೆಲಸ ಮಾಡುತ್ತದೆ ಅನ್ನದಾತನಿಗೆ ಅನುಕೂಲವಾಗುವಂತೆ ಹಲವಾರು ಯೋಜನೆಗಳನ್ನು ರೂಪಿಸುವತ್ತ ಗಮನ ಹರಿಸುತ್ತಿದ್ದೇವೆ ಎಂದು ಹೇಳಿದರು.

ಸಾನಿಧ್ಯ ವಹಿಸಿ ಮಾತನಾಡಿದ ಪೂಜಶ್ರೀ ಲಿಂಗರಾಜಪ್ಪ ಮಠಗಳು ಧಾರ್ಮಿಕ ಮತ್ತು ಶಿಕ್ಷಣಕ್ಕೆ ನೀಡಿರುವ ಕೊಡುಗೆ ಅಪಾರ ಮುಂದಿನ ದಿನಗಳಲ್ಲಿ ಭಕ್ತರ ಆರೋಗ್ಯದ ಕಡೆಗೂ ಮಠಮಾನ್ಯಗಳು ಗಮನಹರಿಸಬೇಕಾಗಿದೆ ಮಠದಲ್ಲಿ ಆಯುರ್ವೇದಿಕ್ ಕೇಂದ್ರ ಸ್ಥಾಪನೆ ಮಾಡಿ ಜನರಿಗೆ ಆರೋಗ್ಯ ಭಾಗ್ಯ ಕೋಡುವ ಕೆಲಸ ಕೂಡ ಮಠಮಾನ್ಯಗಳು ಮಾಡಬೇಕಾಗಿದೆ ಆಯುರ್ವೇದಿಕ್ ಚಿಕಿತ್ಸೆ ಪರಿಣಾಮ ಬೀರುವಲ್ಲಿ ಸ್ವಲ್ಪ ತಡವಾದರೂ ಕೂಡ ಒಳ್ಳೆಯ ಫಲಿತಾಂಶ ಇದೆ ಇಂದಿನ ದಿನಗಳಲ್ಲಿ ಆರೋಗ್ಯಸೇವೆ ಒಂದು ವ್ಯಾಪಾರವಾಗಿದೆ ಇದು ಒಳ್ಳೆಯ ಬೆಳವಣಿಗೆಯಲ್ಲ ಆ ದೃಷ್ಟಿಯಿಂದ ಮಠಮಾನ್ಯಗಳು ಆಯುರ್ವೇದಿಕ್ ಚಿಕಿತ್ಸಾಕೇಂದ್ರದ ಕಡೆಗೆ ಗಮನಹರಿಸಿ ಕಾರ್ಯರೂಪಕ್ಕೆ ತರುವಲ್ಲಿ ಪ್ರಯತ್ನಿಸಬೇಕು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸ್ಟೇಷನ್ ಬಜಾರ್ ಸಿಪಐ ಸಿದ್ದರಾಮ ಗಡಾದ್ ಶ್ರಿಗಳಿಗೆ ಶುಭಕೋರಿದರು ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಕಾರ್ಯಕಾರಣಿ ಸದಸ್ಯರು ಯುವಘಟಕ ಜಿಲ್ಲಾಗೌರವಾಧ್ಯಕ್ಷ ಎಂ ಎಸ್ ಪಾಟೀಲ್ ನರಿಬೋಳ ಮಾಹಾಸಬ ಉಪಾಧ್ಯಕ್ಷರಾದ ರಾಜುಗೌಡ ನಾಗನಹಳ್ಳಿ ಕಾರ್ಯದರ್ಶಿಗಳಾದ ಶೀಲ ಮುತ್ತಿನ ನಗರ ಯುವ ಜಿಲ್ಲಾಧ್ಯಕ್ಷರಾದ ಉದಯ ಪಾಟೀಲ ಕಾರ್ಯ ಕಾರಣಿಸದಸ್ಯರಾದ ಶಾರದಾ ವಿ ಪಾಟೀಲ್ ವಿ ಸಿ ಪಾಟೀಲ್ ಸದಸ್ಯರಾದ ಮಹೇಶ್ವರಿ ವಾಲಿ ತಾತ ಗೌಡ ಪಾಟೀಲ್ ಮಲಾ ದನ್ನೂರ್ ವೀರೇಂದ್ರ ಮಂಟಾಳೆ ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here