ಮಲೇರಿಯಾ ಜಾಗೃತಿ: ಸೊಳ್ಳೆ ಪರದೆ ವಿತರಣೆ

0
102

ವಾಡಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಪ್ರಾಥಮಿಕ ಆರೋಗ್ಯ ಉಪ ಕೇಂದ್ರ ವತಿಯಿಂದ ಇಂಗಳಗಿ ಗ್ರಾಮದಲ್ಲಿ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮ ನಡೆಯಿತು. ಮಲೇರಿಯಾ ರೋಗದ ಕುರಿತು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವ ಜತೆಗೆ ಬಡ ಕುಟುಂಬಗಳಿಗೆ ಉಚಿತವಾಗಿ ಸೊಳ್ಳೆ ಪರದೆ ವಿತರಿಸಲಾಯಿತು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಗ್ರಾಪಂ ಅಭಿವೃದ್ಧಿ ಅಧಿಕಾರಿ ರೇಷ್ಮಾ ಕೊತ್ವಾಲ್, ಮಲೇರಿಯಾ ರೋಗವು ಬರಿ ಕಣ್ಣಿಗೆ ಕಾಣದ ಅನಾಥಿಲಸ್ ಜಾತಿಯ ಹೆಣ್ಣು ಸೊಳ್ಳೆ ಕಚ್ಚುವುದರಿಂದ ಹರಡುತ್ತದೆ. ಇದು ಒಬ್ಬರಿಂದ ಒಬ್ಬರಿಗೆ ಹರಡಿಸುವ ಸಣ್ಣ ಕ್ರಿಮಿಯಾಗಿದೆ. ಚಳಿ ಮತ್ತು ವಿಪರೀತ ಜ್ವರ, ಮೈಕೈ ನೋವು, ತಲೆ ನೋವು, ವಾಂತಿ, ನಿಶ್ಯಕ್ತಿ ಮಲೇರಿಯಾ ರೋಗದ ಲಕ್ಷಣಗಳಾಗಿವೆ. ಯಾವೂದೇ ರೋಗಗಳು ಕಂಡುಬಂದರೆ ರಕ್ತ ಪರೀಕ್ಷೆ ನಂತರವೇ ಚಿಕಿತ್ಸೆ ಪಡೆದುಕೊಳ್ಳಬೇಕು. ಮನೆಯ ಸುತ್ತಲ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳಬೇಕು ಎಂದು ಹೇಳಿದರು.

Contact Your\'s Advertisement; 9902492681

ಇಂಗಳಗಿ ಪ್ರಾಥಮಿಕ ಆರೋಗ್ಯ ಉಪ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ತ್ರೀವೇಣಿ ಜಾಧವ, ಆರೋಗ್ಯ ಮೇಲ್ವಿಚಾರಕ ಬಸವರಾಜ, ಅಬ್ದುಲ್ ಸಲೀಮ್, ಗ್ರಾಮದ ಮುಖಂಡರಾದ ರುದ್ರುಗೌಡ ಪಾಟೀಲ, ಆರೋಗ್ಯ ಸಹಾಯಕಿ ಡಿ.ಅಮೃತಾ, ಆಶಾ ಕಾರ್ಯಕರ್ತೆಯರಾದ ಮಲ್ಲಮ್ಮ, ಮಂಜುಳಾ ಗೋಪಾಲ, ಜಯಶ್ರೀ, ಶಕುಂತಲಾ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here