ಖ್ಯಾತ ಲೇಖಕ, ಚಿಂತಕ ಗಿರೀಶ್ ಕಾರ್ನಾಡ್ ನಿಧನಕ್ಕೆ ಸಂತಾಪ

0
75

ಕಲಬುರಗಿ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡದ ಹೆಸರಾಂತ ಜನಪ್ರಿಯ ಲೇಖಕ, ಪ್ರಗತಿಪರ ಚಿಂತಕ ಗಿರೀಶ್ ಕಾರ್ನಾಡ್ ಇಂದು ಮುಂಜಾನೆ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ.

ಹಲವಾರು ತಿಂಗಳುಗಳಿಂದ ಉಸಿರಾಟ ಹಾಗೂ ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಕಾರ್ನಾಡ್, ಸಾವನ್ನಪ್ಪಿದ್ದಾರೆ. ಜನಪ್ರಿಯ ನಾಟಕ ಬರೆದ ಅವರು ಸ್ಯಾಂಡಲ್ ವುಡ್, ಬಾಲಿವುಡ್ ಸಿನಿಮಾಗಳಿಗೆ ಸಂಭಾಷಣೆ ಮತ್ತು ಕಥೆಗಳು ಬರೆದುಕೊಟ್ಟಿದ್ದು, ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

Contact Your\'s Advertisement; 9902492681

ಅಲ್ಲದೇ ಇತ್ತೀಚಿಗೆ ಮಿಟೂ ಮುಮೆಂಟ್ ಹಾಗೂ ಅರ್ಬನ್ ನಕ್ಸಲ್ ಎಂಬತಂಹ ಹಲವು ಜನಪರ ಹೋರಾಟಗಳಲ್ಲಿ ಸಕ್ರೀಯವಾಗಿ ಭಾಗಿಯಾಗಿ ಗುರುತಿಸಿಕೊಂಡಿದ್ದರು.

ಕರ್ನಾಡ ನಿಧನಕ್ಕೆ ಪ್ರಧಾನ ಮಂತ್ರಿ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.

ಕಾರ್ನಾಡ್ ನಿಧನಕ್ಕೆ ಶೋಕ: ಕಾರ್ನಾಡ ನಿಧನಕ್ಕೆ ಕಲಬುರಗಿ ಜಿಲ್ಲಾ ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ, ನಿಕಟಪೂರ್ವ ಅಧ್ತಕ್ಷ ಮಹಿಪಾಲರೆಡ್ಡಿ ಮುನ್ನೂರ, ಸಾಹಿತಿಗಳಾದ ಡಾ. ಮೀನಾಕ್ಷಿ ಬಾಳಿ, ವಿಶ್ವಾರಾಧ್ಯ ಸತ್ಯಂಪೇಟೆ, ಡಾ. ಶ್ರೀಶೈಲ ನಾಗರಾಳ, ಡಾ. ಎಚ್.ಟಿ. ಪೋತೆ, ಶಿವರಂಜನ್ ಸತ್ಯಂಪೇಟೆ, ಕೆ.ನೀಲಾ,‌ ಆರ್.ಕೆ. ಹುಡಗಿ, ಡಾ. ಕಾಶಿನಾಥ ಅಂಬಲಗಿ ಇತರರು ಶೋಕ ವ್ಯಕ್ತಪಡಿಸಿದ್ದಾರೆ.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here