ಕಲಬುರಗಿ: ರಾಜ್ಯದ ವಿವಿಧ ವಿಭಾಗದಲ್ಲಿ 2017 ಮತ್ತು 2018ನೇ ಸಾಲಿನಲ್ಲಿ ಉತ್ತಮ ಸೇವೆ, ಹಾಗೂ ಯಶಸ್ವಿ ಕಾರ್ಯ ನಿರ್ವಹಣೆ ನಡೆಸಿದ ಪೊಲೀಸ್ ಅಧಿಕಾರಿ, ಸಿಬ್ಬಂದಿ ಹಾಗೂ ನಿವೃತ ಪೊಲೀಸರಿಗೆ ಮುಖ್ಯಮಂತ್ರಿ ಪದಕ ಪ್ರದಾನ ಮಾಡಲಾಗಿದ್ದು, ರಾಜ್ಯದ 243 ಪೊಲೀಸ್ ಅಧಿಕಾರಿಗಳು ಪದಕ ಪಡೆದಿದ್ದಾರೆ.
ನ. 20 ರಂದು ಬೆಂಗಳೂರುನ ವಿಕಾಸ ಸೌಧದಲ್ಲಿ ಪದಕ ವಿತರಣೆ ಕಾರ್ಯಕ್ರಮ ಜರುಗಿದ್ದು, ಈ ಕಾರ್ಯಾಕ್ರಮದಲ್ಲಿ ಕಲಬುರಗಿ ಜಿಲ್ಲೆಯ 9 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಮುಖ್ಯಮಂತ್ರಿ ಪದಕ ಸ್ವೀಕರಿಸಿದರು.
2017 ನೇ ಸಾಲಿನ ಆರ್.ಪಿ.ಐ, ಡಿ.ಎ.ಆರ್ ಇಲಾಖೆಯ ಶರಣಪ್ಪ ಎಚ್. ಸೂಳಿಭಾವಿ, ಎಆರ್.ಎಸ್.ಐ, ಪಿ.ಟಿ.ಸಿ ಇಲಾಖೆಯ ನಿವೃತ ಪೊಲೀಸ್ ಅಧಿಕಾರಿ ಬಸಪ್ಪ ಎಲ್ ಖೋತ್ ಹಾಗೂ ಸಿ.ಎಚ್.ಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿದ ಹುಸೇನ್ ಬಾದಶಾ ಗೌಂಡಿ ಅವರಿಗೆ ಮುಖ್ಯಮಂತ್ರಿ ಪದಕ ಪಡೆದಿದ್ದಾರೆ.
ಕಲಬುರಗಿ ಉಪ ವಿಭಾಗದ ಡಿ.ವೈ.ಎಸ್.ಪಿ.ಸಿ. ಜಿ.ಎಚ್. ಇನಾಮಾದರ್, ಪಿ.ಐ, ಸಿಟಿ ಎಸ್.ಬಿ ಎಂ ವಸಂತ ಕುಮಾರ್, ಸಂಚಾರಿ ವಿಭಾಗದ ಪಿ.ಎಸ್.ಐ ಭಾರತಿ ಬಾಯಿ, ಮಹಗಾವು ಪೊಲೀಸ್ ಠಾಣೆಯ ಪಿ.ಎಸ್.ಐ ಹುಸೇನ್ ಬಾಷಾ, ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಸಿ ಕೇಸುರಾವ್ ಬಿರಾದಾರ್ ಹಾಗೂ 5ನೇ ಕೆ.ಎಸ್.ಆರ್.ಪಿ ತಿಮ್ಮಪ್ಪ ಅವರಿಗೆ 2018ನೇ ಸಾಲಿನ ಸೇವೆಗೆ ಮುಖ್ಯಮಂತ್ರಿ ಪದಕ ನೀಡಲಾಗಿದೆ.
2017ನೇ ಸಾಲಿನಲ್ಲಿ ಜಿಲ್ಲೆಯ 3 ಹಾಗೂ 2018ನೇ ಸಾಲಿನಲ್ಲಿ 6 ಸೇರಿ ಒಟ್ಟು 9 ಪೊಲೀಸ್ ಕರ್ಮಚಾರಿಗಳಿಗೆ ಈ ಪದಕ ಪ್ರದಾನ ಮಾಡಲಾಯಿತು.
ಜಿಲ್ಲೆಯ 9 ಪೊಲೀಸ್ ಸಿಬ್ಬಂದಿಗಳಿಗೆ ಮುಖ್ಯಮಂತ್ರಿ ಪದಕ ಸಿಕ್ಕಿರುವುದಕ್ಕೆ ವಿವಿಧ ಸಂಘಟನೆಗಳು ಸನ್ಮಾನ ಕಾರ್ಯಕ್ರಮಗಳು ಆಯೋಜಿಸಲಾಗುತ್ತಿದ್ದು, ಜಿಲ್ಲಾ ಪೊಲೀಸ್ ಇಲಾಖೆಯು ಮುಖ್ಯಮಂತ್ರಿ ಪದಕ ಪಡೆದ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.