ನಯಾ ಸವೇರ ಸಂಘಟನೆಯಿಂದ ಸಂವಿಧಾನ ದಿನಾಚರಣೆ: ಹಲವರಿಗೆ ಸನ್ಮಾನ

0
83

ಕಲಬುರಗಿ: ನಿನ್ನೆ ಬಸವೇಶ್ವರ ಕಾಲೋನಿಯ ಮಕ್ಕ ಫಂಕ್ಷನ್ ಹಾಲ್ ನಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ಪಜಿಲತ್ ಮಾಬ ಹಜರತ್ ಸೈಯದ್ ಷಾ ಹಿಸಾಮುದ್ದಿನ ಮೋಹಮ್ಮದ್ ಅಲ್ ಹುಸೇನಿ ಉರ್ಫ್ ಹಾಸಂ ಪೀರ್ ಸಹಬ್ ಕಿಬ್ಲ ಸಜ್ಜಾದ ನಶೀನ್ ರೋಜಾ ಹಜರತ್ ಬೃಹನ್ ಉದ್ದಿನ್ ದರ್ಗಾ ಹಾಗೂ ಶ್ರೀ ಗುರುಬಸವ ಮಹಾಸ್ವಾಮಿಗಳು ಶಿವಾಚಾರ್ಯರು ನೇತೃತ್ವದಲ್ಲಿ  ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು.

ಈ ವೇಳೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ್, ಹಿರಿಯ ಪತ್ರಕರ್ತ ಹಾಗೂ ಕೆಬಿಎನ್ ಉರ್ದು ಪತ್ರಿಕೆಯ ಸಂಪಾದಕರಾದ ಅಜಿಜುಲ್ಲಾ ಸರಮಸ್ತ್, ಗ್ರಾಹಕರ ಹಕ್ಕುಗಳ ಸಂಸ್ಥೆ ಮತ್ತು ವೀರಶೈವ ಲಿಂಗಾಯಿತ ಸಮಾಜದ ರಾಜ್ಯಧ್ಯಕ್ಷರಾದ ಮಹೇಶ್ವರಿವಾಲಿ, ಚಿತಾಪುರ್ ಮುಖ್ಯ ಖಾಜಿ ಆಜಮ, ಮಾಜಿ ಮಹಾನಗರ ಪಾಲಿಕೆ ಸದಸ್ಯ ಶೇಕ್ ಯುನುಸ್ ಅಲಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೈಯದ್ ಏಜಾಜ್ ಅಲ್ ಇನಾಮ್ದಾರ್,

Contact Your\'s Advertisement; 9902492681

ಕಲಬುರಗಿ ಜಿಲ್ಲಾ ಖಾಜಿ ಸಂಘದ ಅಧ್ಯಕ್ಷರಾದ ಡಾ. ಖಾಜಿ ಹಾಮಿದ್ ಫೈಸಲ್ ಸಿದ್ದಿಕಿ, ಮೋದಿ ಪಟೇಲ್ ಅಣಬಿ ಕಾರ್ಯಕ್ರಮದ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಪದಕ ವಿಜೇತರಾದ ಪೊಲೀಸ್ ಅಧಿಕಾರಿ ಎಸಿಪಿ (ಸಿ) ಜೆ.ಎಚ್ ಇನಾಮ್ದಾರ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ಅಧಿಕಾರಿ ಮುನವ್ವರ್ ದೋಲಾ, ಹಿರಿಯ ಪತ್ರಕರ್ತ ಅಜಿಜುಲ್ಲಾ ಸರಮಸ್ತ್, ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಭಾರತಿ ಬಾಯಿ ಧನ್ನಿ, ಪೊಲೀಸ್ ಸಿಬ್ಬಂದಿ ಹುಸೇನ್ ಬಾದಶಾ, ಕೇಶವ ಬಿರಾದಾರ್ ಮತ್ತು ವೈದ್ಯಕ್ಷೇತ್ರದ ಡಾ. ಅಸ್ಲಾಂ ಸೈಯದ್, ಡಾ. ರಿಜ್ವಾನ್ ಸಾಬ್, ಅಂತರಾಷ್ಟ್ರೀಯ ಛಾಯಾಗ್ರಾಹಕ ಮೊಹಮ್ಮದ್ ಆಯಾಜುದ್ದಿನ್ ಪಟೇಲ್, ಡಾ. ರಹಿಮಾನ್ ಪಾಟೀಲ್ , ಸಮಾಜ ಸೇವೆ ಮತ್ತು ಕೋವಿಡ್ ವಾರಿಯರ್ ಕ್ಷೇತ್ರದ ನೂರಾನಿ ಮಸ್ಜಿದ್ ಇಮಾಮ್ ಓ ಖತೀಬ್ ಮೌಲಾನಾ ಮಹಮ್ಮದ್ ಮಜರ್ ಖಾದ್ರಿ, ಸ್ಪೋಕನ್ ಇಂಗ್ಲೀಷ್ ಶಿಕ್ಷಣ ತಜ್ಞರು ಮೊಬಿನೋದ್ದಿನ್ ಮುಬಿನ್, ಮೊಹಮ್ಮದ್ ಮೈನುದ್ದೀನ್, ಸಮಾಜಸೇವಕ ಹಾಗೂ ಮಾನವ ಹಕ್ಕು ಸಂಘಟನೆ ಸದಸ್ಯರಾದ ರಿಯಾಜ್ ಖತೀಬ್, ಮಹಮ್ಮದ್ ಶಾಫಿ ಮಲ್ಲಿಕ,  ಅಬಿದ್ ಹುಸೇನ್ ಪಟೇಲ್,  ಶಂಶುದ್ದೀನ್ ಖತೀಬ್, ಕೂರಸಿದ್ ಅಲಿ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ನಿರೂಪಣೆ ಮತ್ತು ಸ್ವಾಗತ ಭಾಷಣವನ್ನು ಸಂಘಟನೆಯ ಅಧ್ಯಕ್ಷರಾದ  ಮೋದಿನ ಪಟೇಲ ಮಾಡಿದ್ದು, ಹೈದರ್ ಅಲಿ ಇನಾಮ್ದಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಲೀಂ ಅಹಮದ್ ಚಿತಾಪುರ್ ಕಾರ್ಯಕ್ರಮದ ವಂದನಾರ್ಪಣೆ ಮಾಡಿದರು.

ಸಾಜಿದ್ ಅಲಿ ರಂಜೋಳ್ವಿಸ್ವಾಗತ ಕೋರಿದರು.  ಮೊಹಮ್ಮದ್ ಖಾಲಿಕ್ , ಸಲೀಂ ಸಗರಿ, ಖಾಜಾ ಪಾಟೀಲ್ ಸರಡಗಿ, ಡಾ. ರಫೀಕ್ ಕಮಲಾಪುರ್,  ಮಹಿಬೂಬ್ ಖಾನ್ ರಾವೂರ್, ಅಹ್ಮದಿ ಬೇಗಂ, ಸೈರಾ ಬಾನು, ರಾಫಿಯ ಶಿರಿನ್ ಖಾನ್, ಗೀತಾ ಮುದುಗಲ್,   ಬಾಬಾ ಫಕ್ರುದ್ದಿನ್ ಅನ್ಸಾರಿ, ಯುನುಸ್ ಪಟೇಲ್, ಮೋಬಿನ್ ಅನ್ಸಾರಿ, ಸಲ್ಮಾನ್ ಪಟೇಲ್, ವಿಜಯ ಹಬನೂರ್, ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here