ವಿಧಾನ ಪರಿಷತ್ ನಲ್ಲಿ ಗದ್ದಲ ಪ್ರಕರಣ ರಾಜ್ಯಪಾಲರ ಮಧ್ಯ ಪ್ರವೇಶಕ್ಕೆ ಆಗ್ರಹ

0
24

ಕಲಬುರಗಿ: ವಿಧಾನ ಪರಿಷತ್ ನಲ್ಲಿ ಗದ್ದಲ ಪ್ರಕರಣ ಕುರಿತು ತನಿಖೆ ಆಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ( ಕನ್ನಡಿಗರ ಬಣ) ದ ಜಿಲ್ಲಾಧ್ಯಕ್ಷರಾದ ಆನಂದ ತೆಗನೂರ ಒತ್ತಾಯಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿದ ಅವರು, ನಿಯಮಾವಳಿ ಪ್ರಕಾರ ಉಪಾಸಭಾಪತಿಗಳು ಸಭಾಪಾತಿ ಸ್ಥಾನದ ಮೇಲೆ ಕುಳಿತುಕೊಳ್ಳಬೇಕು. ಅದರ ಪ್ರಕಾರ ಉಪಸಭಾಪತಿಗಳು ಪೀಠದ ಮೇಲೆ ಕುಳಿತಿದ್ದು ಸಿಂಧುವಾಗಿದೆ. ಆದರೆ ಉಪಾಸಭಾಪತಿಗಳು ಸದನವನ್ನು ಆರಂಭಿಸುತ್ತಿದಂತೆ ಕಾಂಗ್ರೆಸ್ ಸದಸ್ಯ ನಜೀರ ಬಂದು ಸದನದ ಬಾಗಿಲನ್ನು ಒದ್ದಿದ್ದಾರೆ. ಇದು ಜನತೆಗೆ ಮಾನಸಿಕವಾಗಿ ಘಾಸಿಯಾಗಿದೆ.

Contact Your\'s Advertisement; 9902492681

ಕೆಂಪೇಗೌಡರು ಇಂತಹ ಭವನ ಕೊಟ್ಟರು, ಕೆಂಗಲ್ ಹನುಮಂತಯ್ಯನವರು ವಿಧಾನಸೌದ ಕಟ್ಟಿದರೂ ಕೂಡಾ ಅವರು ಒಂದು ದಿನವೂ ಇಲ್ಲಿ ಕುಳಿತುಕೊಳ್ಳುಲಿಲ್ಲ. ಆದರೆ ಕೆಟ್ಟ ಘಟನೆಗೆ ಇಂದು ನಡೆದ ವಿಧಾನ ಪರಿಷತ್ ಸಾಕ್ಷಿಯಾಗಿದೆ. ಕೂಡಲೇ ರಾಜ್ಯಪಾಲರು ಮಧ್ಯಪ್ರವೇಶಿಸಿ ಗದ್ದಲದ ಪ್ರಕರಣವನ್ನು ಸೂಕ್ತ ತನಿಖೆಗೆ ಒಪ್ಪಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here