ಪ್ರಧಾನಮಂತ್ರಿ ಫಸಲ ಬಿಮಾ ಯೋಜನೆ: ಅಧಿಸೂಚಿತ ಮುಖ್ಯ ಬೆಳೆಗಳ ವಿವರ

0
112

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ 2019-20ನೇ ಸಾಲಿನ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರವು 2019ರ ಏಪ್ರಿಲ್ 12ರಂದು ಆದೇಶ ಹೊರಡಿಸಿದೆ. ಈ ಯೋಜನೆಯಡಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮುಖ್ಯ ಬೆಳೆಗಳನ್ನು ಜಿಲ್ಲೆಯ ಎಲ್ಲಾ ತಾಲೂಕುವಾರು, ಗ್ರಾಮ ಪಂಚಾಯಿತಿ ಮಟ್ಟಕ್ಕೆ ಹಾಗೂ ಉಳಿದ ಬೆಳೆಗಳನ್ನು ಹೋಬಳಿ ಮಟ್ಟದಲ್ಲಿ ಅನುಷ್ಠಾನಗೊಳಿಸಲು ಆದೇಶಿಸಲಾಗಿದೆ. ಈ ಯೋಜನೆ ಅನುಷ್ಠಾನಗೊಳಿಸಲು ಬೆಂಗಳೂರಿನ ಫ್ಯೂಚರ್ ಜನರಲಿ ಜನರಲ್ ಇನ್ಸುರೆನ್ಸ್ ಕಂಪನಿ ಲಿ. ವಿಮಾ ಸಂಸ್ಥೆಯನ್ನು ನಿಗದಿಪಡಿಸಲಾಗಿದೆ ಎಂದು ಕಲಬರಗಿ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಭತ್ತ ಹಾಗೂ ಮುಸುಕಿನ ಜೋಳ (ನೀರಾವರಿ) ಬೆಳೆಗಳಿಗೆ ನೋಂದಣಿ ಮಾಡಿಕೊಳ್ಳಲು 2019ರ ಆಗಸ್ಟ್ 22 ಕೊನೆಯ ದಿನವಾಗಿದೆ. ಮುಸುಕಿನ ಜೋಳ (ಮಳೆಯಾಶ್ರಿತ), ತೋಗರಿ (ನೀರಾವರಿ ಮತ್ತು ಮಳೆಯಾಶ್ರಿತ), ನೆಲಗಡಲೆ ಶೇಂಗಾ (ಮಳೆಯಾಶ್ರಿತ) ಬೆಳೆಗಳಿಗೆ ನೋಂದಣಿ ಮಾಡಿಕೊಡಲು 2019ರ ಆಗಸ್ಟ್ 16 ಕೊನೆಯ ದಿನವಾಗಿದೆ. ಸೂರ್ಯಕಾಂತಿ (ನೀರಾವರಿ ಮತ್ತು ಮಳೆಯಾಶ್ರಿತ), ಈರುಳ್ಳಿ ಹಾಗೂ ಕೆಂಪು ಮೆಣಸಿನಕಾಯಿ (ನೀರಾವರಿ) ಬೆಳೆಗಳಿಗೆ ನೋಂದಣಿ ಮಾಡಿಕೊಳ್ಳಲು ೨೦೧೯ರ ಆಗಸ್ಟ್ ೧೪ ಕೊನೆಯ ದಿನವಾಗಿದೆ.

Contact Your\'s Advertisement; 9902492681

ಜೋಳ (ನೀರಾವರಿ ಮತ್ತು ಮಳೆಯಾಶ್ರಿತ), ಸಜ್ಜೆ, ಉದ್ದು, ಹೆಸರು, ಸೋಯಾ ಅವರೆ, ಎಳ್ಳು (ಮಳೆಯಾಶ್ರಿತ), ನೆಲಗಡಲೆ (ಶೇಂಗಾ) (ನೀರಾವರಿ), ಹತ್ತಿ (ನೀರಾವರಿ ಮತ್ತು ಮಳೆಯಾಶ್ರಿತ) ಹಾಗೂ ಟೊಮ್ಯಾಟೋ ಬೆಳೆಗಳಿಗೆ ನೋಂದಣಿ ಮಾಡಿಕೊಳ್ಳಲು ೨೦೧೯ರ ಜುಲೈ ೩೧ ಕೊನೆಯ ದಿನವಾಗಿದೆ. ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ವಿಮಾ ಮೊತ್ತವು ಒಂದೇ ಆಗಿರುತ್ತದೆ.

ತಾಲೂಕುವಾರು ಮುಖ್ಯ ಬೆಳೆಗಳ ಹಾಗೂ ಇತರೆ ಬೆಳೆಗಳ ವಿವರ ಇಂತಿದೆ. ಅಫಜಲಪುರ ತಾಲೂಕು: ಮುಖ್ಯ ಬೆಳೆಗಳು-ತೊಗರಿ (ನೀರಾವರಿ ಮತ್ತು ಮಳೆಯಾಶ್ರಿತ), ನೆಲೆಗಡಲೆ(ಶೇಂಗಾ)-ಮಳೆಯಾಶ್ರಿತ, ಮುಸುಕಿನಜೋಳ (ನೀರಾವರಿ ಮತ್ತು ಮಳೆಯಾಶ್ರಿತ). ಇತರೆ ಬೆಳೆಗಳು-ಈರುಳ್ಳಿ (ನೀರಾವರಿ), ಉದ್ದು (ಮಳೆಯಾಶ್ರಿತ), ಎಳ್ಳು (ಮಳೆಯಾಶ್ರಿತ), ಕೆಂಪು ಮೆಣಸಿನಕಾಯಿ (ನೀರಾವರಿ), ಟೊಮ್ಯಾಟೋ, ಸಜ್ಜೆ (ಮಳೆಯಾಶ್ರಿತ), ಸೂರ್ಯಕಾಂತಿ (ನೀರಾವರಿ ಮತ್ತು ಮಳೆಯಾಶ್ರಿತ), ಹತ್ತಿ (ನೀರಾವರಿ ಮತ್ತು ಮಳೆಯಾಶ್ರಿತ), ಹೆಸರು (ಮಳೆಯಾಶ್ರಿತ) ಬೆಳೆಗಳು.

ಆಳಂದ: ಮುಖ್ಯ ಬೆಳೆಗಳು-ತೊಗರಿ ಮತ್ತು ಮುಸುಕಿನ ಜೋಳ (ಮಳೆಯಾಶ್ರಿತ). ಇತರೆ ಬೆಳೆಗಳು-ಈರುಳ್ಳಿ (ನೀರಾವರಿ), ಉದ್ದು, ಎಳ್ಳು, ಜೋಳ, ಸಜ್ಜೆ (ಮಳೆಯಾಶ್ರಿತ), ಸೂರ್ಯಕಾಂತಿ (ನೀರಾವರಿ ಮತ್ತು ಮಳೆಯಾಶ್ರಿತ), ಸೋಯಾ ಅವರೆ, ಹೆಸರು (ಮಳೆಯಾಶ್ರಿತ) ಬೆಳೆಗಳು. ಕಲಬುರಗಿ: ಮುಖ್ಯ ಬೆಳೆಗಳು-ತೊಗರಿ (ನೀರಾವರಿ ಮತ್ತು ಮಳೆಯಾಶ್ರಿತ), ಭತ್ತ (ನೀರಾವರಿ), ಮುಸುಕಿನ ಜೋಳ (ಮಳೆಯಾಶ್ರಿತ ಮತ್ತು ನೀರಾವರಿ). ಇತರೆ ಬೆಳೆಗಳು-ಉದ್ದು, ಎಳ್ಳು, ಸಜ್ಜೆ, ಸೂರ್ಯಕಾಂತಿ, ಸೋಯಾಅವರೆ, ಹತ್ತಿ, ಹೆಸರು (ಮಳೆಯಾಶ್ರಿತ). ಕಲಬುರಗಿ ಉತ್ತರ: ಇತರೆ ಬೆಳೆಗಳು-ಉದ್ದು, ಎಳ್ಳು, ಜೋಳ, ಸಜ್ಜೆ, ಸೂರ್ಯಕಾಂತಿ, ಸೋಯಾಅವರೆ, ಹೆಸರು (ಮಳೆಯಾಶ್ರಿತ). ಕಾಳಗಿ: ಇತರೆ ಬೆಳೆಗಳು-ಉದ್ದು, ಎಳ್ಳು, ಜೋಳ, ಸಜ್ಜೆ, ಸೂರ್ಯಕಾಂತಿ, ಹತ್ತಿ, ಹೆಸರು (ಮಳೆಯಾಶ್ರಿತ) ಬೆಳೆಗಳು. ಚಿಂಚೋಳಿ: ಮುಖ್ಯ ಬೆಳೆಗಳು-ತೊಗರಿ ಮತ್ತು ಮುಸುಕಿನ ಜೋಳ (ಮಳೆಯಾಶ್ರಿತ). ಇತರೆ ಬೆಳೆಗಳು-ಉದ್ದು, ಎಳ್ಳು, ಜೋಳ, ಸಜ್ಜೆ, ಸೂರ್ಯಕಾಂತಿ, ಹತ್ತಿ, ಹೆಸರು (ಮಳೆಯಾಶ್ರಿತ) ಬೆಳೆಗಳು.
ಚಿತ್ತಾಪುರ: ಮುಖ್ಯ ಬೆಳೆಗಳು-ತೊಗರಿ (ಮಳೆಯಾಶ್ರಿತ), ಭತ್ತ (ನೀರಾವರಿ). ಇತರೆ ಬೆಳೆಗಳು-ಉದ್ದು, ಎಳ್ಳು, ಜೋಳ, ಸಜ್ಜೆ, ಸೂರ್ಯಕಾಂತಿ, ಹತ್ತಿ, ಹೆಸರು (ಮಳೆಯಾಶ್ರಿತ) ಬೆಳೆಗಳು. ಜೇವರ್ಗಿ: ಮುಖ್ಯ ಬೆಳೆಗಳು-ತೊಗರಿ (ನೀರಾವರಿ ಮತ್ತು ಮಳೆಯಾಶ್ರಿತ), ನೆಲಗಡಲೆ(ಶೇಂಗಾ)-(ಮಳೆಯಾಶ್ರಿತ), ಭತ್ತ (ನೀರಾವರಿ), ಮುಸುಕಿನ ಜೋಳ (ನೀರಾವರಿ ಮತ್ತು ಮಳೆಯಾಶ್ರಿತ). ಇತರೆ ಬೆಳೆಗಳು-ಉದ್ದು, ಎಳ್ಳು, ಜೋಳ, ಸಜ್ಜೆ, ಸೂರ್ಯಕಾಂತಿ, ಹತ್ತಿ, ಹೆಸರು (ಮಳೆಯಾಶ್ರಿತ) ಬೆಳೆಗಳು.

ಯಡ್ರಾಮಿ: ಇತರೆ ಬೆಳೆಗಳು-ಉದ್ದು, ಎಳ್ಳು, ಜೋಳ, ಸಜ್ಜೆ, ಸೂರ್ಯಕಾಂತಿ, ಹತ್ತಿ, ಹೆಸರು (ಮಳೆಯಾಶ್ರಿತ) ಬೆಳೆಗಳು. ಸೇಡಂ: ಮುಖ್ಯ ಬೆಳೆಗಳು-ತೊಗರಿ (ಮಳೆಯಾಶ್ರಿತ), ಭತ್ತ (ನೀರಾವರಿ). ಇತರೆ ಬೆಳೆಗಳು-ಉದ್ದು, ಎಳ್ಳು, ಜೋಳ, ಸಜ್ಜೆ, ಸೂರ್ಯಕಾಂತಿ, ಹತ್ತಿ, ಹೆಸರು (ಮಳೆಯಾಶ್ರಿತ) ಬೆಳೆಗಳು.
ಸ್ಥಳ, ನಿರ್ದಿಷ್ಟ, ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂ ಕುಸಿತ ಮತ್ತು ಬೆಳೆ ಮುಳುಗಡೆ, ಮೇಘ ಸ್ಫೋಟ ಮತ್ತು ಗುಡುಗು ಮಿಂಚಿಗಳಿಂದಾಗಿ ಉಂಟಾಗುವ ಬೆಂಕಿ ಅವಗಡ ಸಂದರ್ಭದಲ್ಲಿ ಬೆಳೆ ನಷ್ಟ ಉಂಟಾದರೆ ವೈಯಕ್ತಿಕ ನಷ್ಟದ ನಿರ್ಧರಣೆಗಾಗಿ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಅಧಿಸೂಚಿಸಿದೆ.

ಪ್ರಸ್ತುತ ಸಾಲಿನ ಮುಂಗಾರು ಹಂಗಾಮಿನಲ್ಲಿ ವಿವಿಧ ವಿಮಾ ಘಟಕಗಳಲ್ಲಿ ಅಧಿಸೂಚಿಸಿದ ಬೆಳೆಗಳಿಗೆ ಇಚ್ಛೆಯುಳ್ಳ ಬೆಳೆಸಾಲ ಪಡೆಯದ ರೈತರು ಯೋಜನೆಯಡಿ ಭಾಗವಹಿಸಬಹುದಾಗಿದೆ. ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ, ಖಾತೆ, ಪಾಸ್ ಪುಸ್ತಕ, ಕಂದಾಯ ರಸೀದಿಯನ್ನು ನೀಡಬೇಕು.

ಕಲಬುರಗಿ ಜಿಲ್ಲೆಯಲ್ಲಿ ೨೦೧೯ರ ಮುಂಗಾರು ಹಂಗಾಮಿನಲ್ಲಿ ವಿವಿಧ ಬೆಳೆಗಳಿಗೆ ನಿಗದಿಪಡಿಸಲಾದ ಇಂಡೆಮ್ನಿಟಿ ಮಟ್ಟ (ಶೇಕಡಾ), ಸಾಮಾನ್ಯ ವಿಮೆಗೆ ಪ್ರತಿ ಹೆಕ್ಟೇರ್‌ಗೆ (ಪ್ರಾರಂಭಿಕ ಇಳುವರಿಯ ಮೌಲ್ಯದವರೆಗೆ) ವಿಮಾ ಮೊತ್ತ ಮತ್ತು ರೈತರು ಪಾವತಿಸಬೇಕಾದ ವಿಮಾ ಮೊತ್ತದ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ ೧೮೦೦ ೪೨೫ ೭೯೧೯ ಹಾಗೂ ತಮ್ಮ ಸಮೀಪದ ತಾಲೂಕಿನ ಹತ್ತಿರದ ರೈತ ಸಂಪರ್ಕ ಕೇಂದ್ರವನ್ನು ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದಾಗಿದೆ.

ಬೆಂಗಳೂರಿನ ಫ್ಯೂಚರ ಜೆನೆರಲಿ ಜನರಲ್ ಇನ್ಸುರೆನ್ಸ ಕಂಪನಿ ಲಿಮಿಟೆಡ್‌ನ ತಾಲೂಕುವಾರು ವಿಮಾ ಪ್ರತಿನಿಧಿಗಳ ಮೊಬೈಲ್ ಸಂಖ್ಯೆಗಳ ವಿವರ ಇಂತಿದೆ. ಕಲಬುರಗಿ ಜಿಲ್ಲೆ ಮೊಬೈಲ್ ಸಂಖ್ಯೆ 9892402175, ಚಿತ್ತಾಪುರ ಮತ್ತು ಕಲಬುರಗಿ ಉತ್ತರ ಮೊಬೈಲ್ ಸಂಖ್ಯೆ 6362954334, ಅಫಜಲಪುರ ಮೊಬೈಲ್ ಸಂಖ್ಯೆ 9008484567, ಜೇವರ್ಗಿ ಮೊಬೈಲ್ ಸಂಖ್ಯೆ 8880441188, ಆಳಂದ ಮೊಬೈಲ್ ಸಂಖ್ಯೆ 9535483083, ಕಲಬುರಗಿ ಮೊಬೈಲ್ ಸಂಖ್ಯೆ 9892402175, ಚಿಂಚೋಳಿ ಮತ್ತು ಸೇಡಂ ಮೊಬೈಲ್ ಸಂಖ್ಯೆ 7760545692 ಹಾಗೂ ಯಡ್ರಾಮಿ ಮೊಬೈಲ್ ಸಂಖ್ಯೆ 9535483083 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here