ಸುರಪುರ ನಗರಸಭೆಯಲ್ಲಿ ಸಾಮಾನ್ಯ ಸಭೆ: ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅಧ್ಯಕ್ಷರೆ ಬೇಸರ

0
48

ಸುರಪುರ: ನಗರದ ಜನತೆ ಕುಡಿಯುವ ನೀರಿನ ಬಗ್ಗೆ ಹಿಡಿಶಾಪ ಹಾಕುವಂತ ಪರಸ್ಥಿತಿ ನಿರ್ಮಾಣವಾಗುತ್ತಿದೆ,ಕುಡಿಯುವ ನೀರಿನ ವ್ಯವಸ್ಥೆಗೆ ಶೀಘ್ರವೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಗರಸಭೆ ಅಧ್ಯಕ್ಷರಾದ ಸುಜಾತಾ ವೇಣುಗೋಪಾಲ ಜೇವರ್ಗಿ ಪೌರಾಯುಕ್ತ ಮತ್ತು ಅಧಿಕಾರಿಗಳಿಗೆ ತಾಕೀತು ಮಾಡಿದರು.

ನಗರಭೆಯ ಸಭಾಂಗಣದಲ್ಲಿ ನಡೆದ ಸಾಮಾನು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ,ಜನರು ನಿತ್ಯವು ಕುಡಿಯುವ ನೀರಿಗಾಗಿ ದೂರು ಸಲ್ಲಿಸುತ್ತಾರೆ,ಇದರಿಂದ ನಗರಸಭೆಯ ಬಗ್ಗೆ ಜನರಲ್ಲಿ ಒಳ್ಳೆ ಭಾವನೆ ಮೂಡುವುದಿಲ್ಲ.ಆದ್ದರಿಂದ ಶೀಘ್ರದಲ್ಲಿಯೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ತಿಳಿಸಿದರು.ಇದಕ್ಕೆ ಉತ್ತರಿಸಿದ ಪೌರಾಯುಕ್ತ ಜೀವನಕುಮಾರ್ ಕಟ್ಟಿಮನಿ ಈಗಾಗಲೆ ಶಾಸ್ವತ ಕುಡಿಯುವ ನೀರಿನ ಯೋಜನೆಗಾಗಿ ಸರಕಾರ ೫.೧೦ ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ,ಶೀಘ್ರವೆ ಶೆಳ್ಳಗಿಯಿಂದ ಪೌಪಲೈನ್ ಕಾಮಗಾರಿ ಆರಂಭಗೊಳ್ಳಲಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಅಲ್ಲದೆ ಪಂಪಾಪುರ ಬಳಿಯಲ್ಲಿ ಜಾಕ್‌ವೆಲ್ ನಿರ್ಮಿಸಿ ತಳವಾರಗೇರಾ ಕೆರೆಗೆ ನೀರು ತುಂಬಿಸಿ ನಗರಕ್ಕೆ ಸರಬರಾಜು ಮಾಡುವ ೨೪೦ ಕೋಟಿ ರೂಪಾಯಿಗಳ ಕ್ರೀಯಾಯೋಜನೆಯನ್ನು ಮಾಡಲಾಗಿದೆ ಎಂದು ತಿಳಿಸಿದರು. ನಂತರ ನಗರಸಭೆ ಸದಸ್ಯ ವೇಣುಮಾಧವ ನಾಯಕ ಮಾತನಾಡಿ,ಕುಡಿಯುವ ನೀರಿನ ಅಭಾವ ಉಂಟಾಗಲು ಜೆಸ್ಕಾಂ ಇಲಾಖೆಯ ನಿರ್ಲಕ್ಷ್ಯ ಕಾರಣ,ಇಂದಿನ ಸಭೆಗೆ ಜೆಸ್ಕಾಂ ಎಇಇ ಯಾಕೆ ಬಂದಿಲ್ಲ ಅವರ ಮೇಲೆ ಕ್ರಮಕ್ಕೆ ಒತ್ತಾಯಿಸಿದರು.ಅಲ್ಲದೆ ನಗರದಲ್ಲಿ ಸಾರ್ವಜನಿಕ ಶೌಚಾಲಯಗಳಿಲ್ಲದೆ ಜನರು ಮೂತ್ರ ವಿಸರ್ಜನೆಗೆ ಪರದಾಡುವ ಸ್ಥಿತಿಯಿದೆ ಕೂಡಲೆ ಸುಲಭ ಶೌಚಾಲಗಳನ್ನು ನಿರ್ಮಿಸಲು ಆಗ್ರಹಿಸಿದರು.

ರಂಗಂಪೇಟೆಯ ಸದಸ್ಯರಾದ ಮಹ್ಮದ ಗೌಸ್ ಕಿಣ್ಣಿ ಹಾಗು ನಾಸೀರ್ ಕುಂಡಾಲೆ ಮಾತನಾಡಿ,ರಂಗಂಪೇಟೆಯಲ್ಲಿ ಮಾಸ್ಟರ್ ಪ್ಲ್ಯಾನ್ ಮಾಡಿ ವರ್ಷಗಳಾದರು ಕೆಲಸ ಮಾತ್ರ ಶೂನ್ಯವಾಗಿದೆ ಎಂದು ಆರೋಪಿಸಿದರು.ಇದಕ್ಕೆ ಪೌರಾಯುಕ್ತ ವಿವರಣೆ ನೀಡಿ, ಈಗಾಗಲೆ ನೀಲನಕ್ಷೆ ತಯಾರಾಗಿದೆ ಗ್ರಾಮ ಪಂಚಾಯತಿ ಚುನಾವಣೆ ನಂತರದಲ್ಲಿ ಲೋಕಪಯೋಗಿ ಇಲಾಖೆ ಮತ್ತು ನಗರಾಭಿವೃಧ್ಧಿ ಇಲಾಖೆ ಜಂಟಿಯಾಗಿ ೪೦ ಫೀಟ್ ಗುರುತು ಹಾಕಿ ಅಗಲೀಕರಣ ಆರಂಭಿಸುವುದಾಗಿ ತಿಳಿಸಿದರು.

ಅನೇಕ ಜನ ನಗರಸಭೆ ಸದಸ್ಯರು ಮಾತನಾಡಿ,ಎಲ್ಲಾ ವಾರ್ಡುಗಳಲ್ಲಿ ಬೀದಿ ದೀಪಗಳಿಲ್ಲ, ಚರಂಡಿ ಸ್ವಚ್ಛತೆಯಿಲ್ಲ,ಅನೇಕ ಬೋರವೆಲ್‌ಗಳು ಕೆಟ್ಟು ವರ್ಷಗಳಾದರು ಕೇಳುವವರಿಲ್ಲ ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವಂತೆ ಒತ್ತಾಯಿಸಿದರು.ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಮಹೇಶ ಪಾಟೀಲ್ ಸದಸ್ಯರಾದ ಸೋಮನಾಥ ಡೊಣ್ಣಿಗೇರಾ ರಾಜಾ ಪಿಡ್ಡನಾಯಕ ತಾತಾ ಅಯ್ಯಪ್ಪ ಕುಂಬಾರಪೇಟೆ ಶಿವಕುಮಾರ ಕಟ್ಟಿಮನಿ ನರಸಿಂಹಕಾಂತ ಪಂಚಮಗಿರಿ ಖಮರುಲ್ ನಾರಾಯಣಪೇಠ ಜುಮ್ಮಣ್ಣ ಕೆಂಗುರಿ ಹಾಗು ಎಇಇ ಶಾಂತಪ್ಪ ಹೊಸೂರು ವ್ಯವಸ್ಥಾಪಕ ಯಲ್ಲಪ್ಪ ನಾಯಕ,ಜೆಇ ಮಹೇಶ ಮಾಳಗಿ,ಯೂಸೂಫ್ ರವಿಕುಮಾರ ಸೇರಿದಂತೆ ಇತರೆ ಸದಸ್ಯರು ಉಪಸ್ಥಿತರಿದ್ದರು.

ಸುರಪುರ ನಗರಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ರಾಜಾ ಪಿಡ್ಡ ನಾಯಕ ತಾತಾ ಅವರನ್ನು ಅವಿರೋಧವಾಗಿ ಆಯ್ಕೆಗೊಳಿಸಿ ಕಾಂಗ್ರೆಸ್ ಸದಸ್ಯರು ನಗರಸಭೆಗೆ ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here