ಕಲಬುರಗಿ: ತೊಗರಿ ನಾಡು ಕಲಬುರ್ಗಿಯಲ್ಲಿ ತೊಗರಿ ಬೆಳೆ ರಾಶಿಮಾಡುತ್ತಿದ್ದು ಕೂಡಲೇ ಖರೀದಿ ಕೇಂದ್ರ ಆರಂಭ ಮಾಡಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಭಾರಿ ಮಳೆಗೆ ತೊಗರಿ ಬೆಳೆ ಹಾಳಾಗಿದ್ದು, ಇಳುವರಿ ಕಡಿಮೆಯಾಗುತ್ತಿದೆ.ಎಕರೆಗೆ 4 ರಿಂದ 5 ಕ್ವಿಂಟಾಲ್ ಬರುತ್ತಿದ್ದ ಬೆಳೆ ಎಕರೆಗೆ ಕೇವಲ 1ರಿಂದ 2 ಕ್ವಿಂಟಾಲ್ ಇಳುವರಿ ಬರುತ್ತಿದೆ.ಇದರಿಂದ ರೈತರು ಕಂಗಾಲಾಗಿದ್ದಾರೆ.ಕಸ ಕಳೆ ಖರ್ಚು ಈ ಬಾರಿ ಅಧೀಕವಾಗಿದೆ ಇದರಿಂದ ರೈತರು ಆರ್ಥಿಕವಾಗಿ ಜರ್ಜೀತಗೊಂಡಿದ್ದಾರೆ.
ಇದ್ದ ಬದ್ಧ ತೊಗರಿ ಬೆಳೆ ಮಾತ್ರ ರೈತರ ಜೀವನಕ್ಕೆ ಆಸರವಾಗಿದೆ.ಮೇಲಿಂದ ಪ್ರವಾಹ ಸೃಷ್ಟಿಯಾಗಿ ಜಮೀನುಗಳು ಹಾಳಾಗಿವೆ.ಸರಕಾರ ಪರಿಹಾರ ಹಣ ನೀಡಿಲ್ಲ.ಕೂಡಲೇ ಸರ್ಕಾರ ತೊಗರಿ ಖರೀದಿ ಕೇಂದ್ರ ಆರಂಭ ಮಾಡಬೇಕು.ಬೆಂಬಲ ಬೆಲೆ ನೀಡಿ ಕ್ವೀಂಟಾಲ್ ಗೆ 8 ಸಾವಿರ ನಿಗದಿ ಮಾಡಿ ಖರೀದಿಸಬೇಕು.ಕೂಡಲೇ ರೈತರ ಖಾತೆಗೆ ಜಮಾ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.