ಎಸ್ಸಿ ವಿದ್ಯಾರ್ಥಿಗಳಿಗೆ 59,000 ಕೋಟಿ ರೂ. ವಿದ್ಯಾರ್ಥಿವೇತನಕ್ಕೆ ಕೇಂದ್ರ ಸರ್ಕಾರ ಅನುಮೋದನೆ : ಅಷ್ಠಗಿ

0
46

ಕಲಬುರಗಿ: 59048 ಕೋಟಿ ರೂ.ವಿಧ್ಯಾರ್ಥಿವೇತನ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನುಮೋದನೆ ನೀಡಿ 4 ಕೋಟಿ ವಿಧ್ಯಾರ್ಥಿಗಳ ಮೆಟ್ರಿಕ ನಂತರದ ಶಿಕ್ಷಣಕ್ಕೆ ನೆರವು ಘೋಷಿಸಿರುವುದಕ್ಕೆ ಬಿಜೆಪಿ ಮುಖಂಡ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಅಂಬಾರಾಯ ಅಷ್ಠಗಿ ಹರ್ಷ ವ್ಯಕ್ತಪಡಿಸಿದ್ದಾರೆ.

ಐದು ವರ್ಷಗಳ ಅವಧಿಗೆ ಸುಮಾರು 4 ಕೋಟಿಗಿಂತಲೂ ಅಧಿಕ ವಿಧ್ಯಾರ್ಥಿಗಳಿಗೆ ಅನುಕೂಲ ಒದಗಿಸಲು ರೂಪಿಸಲಾಗಿರುವ ಈ ಯೋಜನೆಗೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೋರೆತಿದೆ.ಅರ್ಹ ವಿಧ್ಯಾರ್ಥಿಗಳ 10ನೇ ತರಗತಿ ನಂತರದ ವಿದ್ಯಾಭ್ಯಾಸದ ಖರ್ಚನ್ನು ಈ ಯೋಜನೆಯ ಮೂಲಕ ಸರ್ಕಾರವೆ ಭರಿಸಲಿದ್ದು, ಈ ಯೋಜನೆಯ ಸಂಪೂರ್ಣ ಆನ್ ಲೈನ್ ಯೋಜನೆಯಾಗಿದ್ದು, ಹಣವು ನೇರವಾಗಿ ವಿಧ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮೆಯಾಗಲಿದ್ದು, ಇದರ ಸಂಪೂರ್ಣ ಲಾಭವನ್ನು ಎಸ್ಸಿ ವಿಧ್ಯಾರ್ಥಿಗಳು ಪಡೆದುಕೊಳ್ಳಬೇಕೇಂದು ಅಷ್ಠಗಿ ಕರೆ ನೀಡಿದ್ದಾರೆ.

Contact Your\'s Advertisement; 9902492681

ಅಲ್ಲದೆ ಈ ಯೋಜನೆಯು ಸುಮಾರು 1,36 ಕೋಟಿ ವಿಧ್ಯಾರ್ಥಿಗಳು ಹಣದ ಕೊರತೆಯಿಂದ ಶಿಕ್ಷಣ ತೊರೆದಿದ್ದಾರೆಂದು ಅಂದಾಜಿಸಲಾಗಿದ್ದು,ಅಂಥವರನ್ನು ಈ ಯೋಜನೆಗೆ ನೊಂದಾಯಿಸಿ, ಅವರ ಶಿಕ್ಷಣ ಮುಂದುವರೆಸಲು ವಿಶೇಷ ಅಭಿಯಾನ ನಡೆಸಲು ಉದ್ದೇಶಿಸಿರುವುದು ಕೇಂದ್ರ ಸರ್ಕಾರದ ದಲಿತಪರ ಕಾಳಜಿಯನ್ನು ಎತ್ತಿ ತೋರಿಸುತ್ತದೆ ಎಂದು ಅಂಬಾರಾಯ ಅಷ್ಠಗಿ ಅಭಿಪ್ರಾಯಪಟ್ಟಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here