ಅಜಾತ ಶತ್ರು ಧರಂಸಿಂಗ್ 84 ನೇ ಹುಟ್ಟುಹಬ್ಬ ನಾಳೆ

ಕಲಬುರಗಿ: ಅಜಾತ ಶತ್ರು ಎಂದೇ ಹೆಸರುವಾಸಿಯಾಗಿದ್ದ, ಕರ್ನಾಟಕ ರಾಜ್ಯ ಕಂಡ ’ಬಡವರ’ ಮುಖ್ಯಮಂತ್ರಿ ದಿ. ಡಾ. ಎನ್ ಧರಂಸಿಂಗ್ ಡಿ. ೨೫, ೧೯೩೬ ರಲ್ಲಿ ಜೇವರ್ಗಿ ತಾಲೂಕಿನ ನೆಲೋಗಿಯಲ್ಲಿ ಜನಿಸಿದವರು. ಇಂದು ಅವರ ೮೪ ನೇ ಜನ್ಮದಿನ, ನಗರಸಬೆ ಸದಸ್ಯರಿಂದ ಹಿಡಿದು ರಾಜ್ಯದ ಸಿಎಂ ಗಾದಿಯವರೆಗೂ ೫೦ ವರ್ಷಗಳ ಸುದೀರ್ಘ ರಾಜಕೀಯ ಜೀವನವನ್ನು ನಡೆಸಿದವರು.

ಎಲ್ಲಾ ರಾಜಕಾರಣಿಗಂತಲ್ಲ ಧರಂಸಿಂಗ್ ರಾಜಕೀಯ ಬದುಕು, ಅವರ ರಾಜಕೀಯ ಜೀವನ ಬಲು ರೋಚಕ, ಜನಪರ ಹಾಗೂ ರಂಗು ರಂಗಿನದ್ದು ಎಂದು ಅವರನ್ನು ಹತ್ತಿರದಿಂದ ಕಂಡವರು ಇಂದಿಗೂ ಸ್ಮರಿಸುತ್ತಾರೆ.

ಹಿಂದಿ ಶಿಕ್ಷಕ ವೃತ್ತಿಯ ಜೊತೆಗೇ ವಕೀಲರಾಗಿದ್ದ ಧರಂಸಿಂಗ್ ೧೯೭೨ ರಲ್ಲಿ ಜೇವರ್ಗಿ ಅಸೆಂಬ್ಲಿಯಿಂದ ಸ್ಪರ್ಧಿಸಿ ಗೆದ್ದವರು ಹಿಂದಿರುಗಿ ನೋಡz ಇಲ್ಲ, ಸತತ ಗೆಲ್ಲುತ್ತಲೇ ಜನಾನುರಾಗಿ ಜನನಾಯಕರಾಗಿ ಸರ್ವರನ್ನು ಆವರಿಸಿದವರು.

ಕಲಬುರಗಿ ಜಿಯ ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮ ಹುಟ್ಟೂರು. ಪ್ರಾಥಮಿಕ, ಪ್ರೌಢ, ಉನ್ನತ ಶಿPಣ ಕಲಬುರಗಿಯಲ್ಲಿ ಮುಗಿಸಿ ನಂತರ ಹೈದರಾಬಾದ್ ನಲ್ಲಿ ಉನ್ನತ ಕಾನೂನು ಪದವಿ ಪಡೆದು ಕಲಬುರಗಿಯಲ್ಲೇ ವಕೀಲರಾಗಿಯೂ ಸೇವೆ ಸಲ್ಲಿಸಿದವರು.

ಕಾಂಗ್ರೆಸ್ ಪಕ್ಷದಲ್ಲಿ ದಿ. ಇಂದಿರಾ ಗಾಂಧಿಯವರಿಗೆ ಬಲು ಹತ್ತಿರದವರಾಗಿದ್ದ ಧರಂಸಿಂಗ್ ೧೯೭೨ ರಲ್ಲಿ ಜೇವರ್ಗಿ ಅಸೆಂಬ್ಲಿ ಕಣಕ್ಕಿಳಿದು ಗೆಲ್ಲುವುದರೊಂದಿಗೆ ಸತತ ೧೧ ಬಾರಿ ಗೆಲ್ಲುತ್ತಲೇ ನಡೆದರು. ಇದರಿಂದಾಗಿ ಅವರನ್ನು ಜನ ಗೆಲ್ಲುವ ಕುದುರೆ ಎಂದು ಪ್ರೀತಿಯಿಂದ ಕರೆಯುತ್ತಿದ್ದರು.

ಧರಂಸಿಂಗ್ ತಮ್ಮ ರಾಜಕೀಯ ಬದುಕಲ್ಲಿ ಎದುರಿಸಿದ ೧೩ ಸಾರ್ವತ್ರಿಕ ಚುನಾವಣೆಯಲ್ಲಿ ೧೧ ಬಾರಿ ಗೆಲುವು ಸಾಧಿಸಿದವರು. ೧೯೭೨ ರ ಪ್ರಥಮ ಚುನಾವಣೆಯಿಂದ ೧೦ ಚುನಾವಣೆ ಸತತ ಜೇವರ್ಗಿಯಿಂದಲೇ ಗೆಲುವು ಸಾಧಿಸಿ ಜನಮನ ಗೆದ್ದವರು.

ಕಲಬುರಗಿ ಮಹಾನಗರ ಪಾಲಿಕೆ ಸದಸ್ಯರಾಗಿ, ನಿರಂತರ ೮ ಬಾರಿ ಜೇವರ್ಗಿ ಶಾಸಕರಾಗಿ, ಕಲಬುರಗಿ, ಬೀದರ್ ಸಂಸದರಾಗಿ, ಕೆಪಿಸಿಸಿ ಅಧ್ಯPರಾಗಿ, ವಿರೋಧ ಪPದ ನಾಯಕರಾಗಿ ಕೆಲಸ ಮಾಡಿರುವ ಧರಂಸಿಂಗ್ ಸರ್ಕಾರದಲ್ಲಿ ಸಚಿವರಾಗಿ ಗೃಹ, ಲೋಕೋಪಯೋಗಿ, ಕಂದಾಯ, ಅಬಕಾರಿ, ಸಮಾಜ ಕಲ್ಯಾಣ ಮತ್ತು ನಗರಾಭಿವೃದ್ಧಿ ಸೇರಿದಂತೆ ಪ್ರಮುಖ ಖಾತೆ ನಿಭಾಯಿಸಿದವರು.

ಧರಂಸಿಂಗ್ ಸಾಧನೆ ಮೈಲಿಗಲ್ಲುಗಳು ಹಲವು: ಕಲ್ಯಾಣ ನಾಡಿಗೆ ಒಲಿದು ಬಂದಿರುವ ಸಂವಿಧಾನದ ಕಲಂ ೩೭೧ ಅನುಚ್ಚೇದದ ರೂವಾರಿಗಳೂ ಆಗಿದ್ದ ಧರಂಸಿಂಗ್ ಈ ಭಾಗದ ಹಿಂದುಳಿದಿರುವಿಕೆ ಹೋಗಲಾಡಿಸಲು ತಾವೇ ಅಧ್ಯಯನ ಮಾಡಿ ನೀಡದ್ದ ವರದಿಯಿಂದಲೇ ಹೈ- ಕ ಪ್ರದೇಶಾಭಿವೃದ್ಧಿ ಮಂಡಳಿ ರಚನೆಯಾಗಿ ಇದೀಗ ಅದು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಎಂದು ಅಸ್ತಿತ್ವದಲ್ಲಿದೆ. ಇದಲ್ಲದೆ ಕಲಬುರಗಿಗೆ ಹೈಕೋರ್ಟ್ ಬರುವಲ್ಲಿ ಧರಂಸಿಂಗ್ ಪಾತ್ರ ಬಲು ಹಿರಿದು. ಬೀದರ್- ಶ್ರೀರಂಗ ಪಟ್ಟಣ ರಾಷ್ಟ್ರೀಯ ಹೆದ್ದಾರಿ ಯೋಜನೆಯಲ್ಲೂ ಇವರ ಪಾತ್ರ ಹಿರಿದು.

ರಾಜಕೀಯದಲ್ಲಿ ಹಲವಾರು ಮಜಲುಗಳನ್ನು ಹತ್ತಿ ಜನಪರ ಕೆಲಸಗಳಿಗೆ ಚಾಲನೆ ನೀಡಿದ ಧರಂಸಿಂಗ್ ಅವರ ಧರ್ಮಪತ್ನಿ ಪ್ರಭಾವತಿ ಧರಂಸಿಂಗ್ ಅವರೂ ಪತಿಯೊಂದಿಗೆ ಸಾಧನೆ ದಾರಿಯಲ್ಲಿ ಜೊತೆಯಾಗಿಯೇ ಹೆಜ್ಜೆ ಹಾಕಿದವರು. ಇವರ ಪುತ್ರ ಡಾ. ಅಜಯ್ ಸಿಂಗ್ ತಂದೆಯ ಉತ್ತರಾಧಿಕಾರಿಯಾಗಿ ಜೇವರ್ಗಿ ಶಾಸಕರಾಗಿದ್ದು, ಇದೀಗ ಸದನದಲ್ಲಿ ವಿರೋಧ ಪಕ್ಷದ ಮುಖ್ಯ ಸಚೇತಕರು, ಇನ್ನೋರ್ವ ಪುತ್ರ ವಿಜಯ ಸಿಂಗ್ ಬೀದರ್ ಇಲ್ಲೆಯ ಸ್ಥಳೀಯ ಸಂಸ್ಥೆ ಕ್ಷೇತ್ರದಿಂದ ಆಯ್ಕೆಯಾಗಿ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ.

ತಮ್ಮ ಅನುಯಾಯಿಗಳೊಂದಿಗೆ ಸದಾಕಾಲ ನಗುತ್ತಲೇ ಕೆಲಸದಲ್ಲಿ ತೊಡಗುತ್ತಿದ್ದ ಧರಂಸಿಂಗ್ ಅವರಂತೆ ರಾಜಕೀಯ ಮಾಡೋದು ಒಂದು ಕಲೆ ಎಂದು ಈಗಲೂ ಅವರ ಓರಗೆಯ ರಾಜಕಾರಣಿಗಳು ಹೇಳುತ್ತಿರುತ್ತಾರೆ. ತಮ್ಮ ಬಳಿ ಬರುವ ಯಾರನ್ನೂ ನಿರಾಶೆಯಿಂದ ಕಳುಹಿಸಿದೆ ಅವರೊಂದಿಗೆ ಮಾತನಾಡುತ್ತ ಸಮಸ್ಯೆ ಆಲಿಸಿ ಕೈಲಾದಷ್ಟು ಪರಿಹಾರ ಹೇಳುವುದೇ ಧರಂಸಿಂಗ್ ಅವರ ಸುದೀರ್ಘ ರಾಜಕೀಯದ ಒಳಗುಟ್ಟು ಎಂಬುದು ಎಲ್ಲರೂ ಒಪ್ಪುತ್ತಾರೆ.

ಇಂದು ೮೪ ನೇ ಹುಟ್ಟುಹಬ್ಬ: ಡಾ. ಎನ್. ಧರಂಸಿಂಗ್ ಜನಿಸಿ (೨೫. ೧೨. ೧೯೩೬) ಇಂದಿಗೆ ೮೪ ವರ್ಷಗಳಾಗಿದ್ದು ಅವರ ಹುಟ್ಟೂರು ಜೇವರ್ಗಿ ತಾಲೂಕಿನ ನೆಲೋಗಿಯಲ್ಲಿ ಸರಳವಾಗಿ ಅವರ ಜನ್ಮದಿನೋತ್ಸವ ಕುಟುಂಬ ವರ್ಗದವರು, ಅಭಿಮಾನಿಗಳು ಆಚರಿಸುತ್ತಿದ್ದಾರೆ. ಸಾಮಾಜಿಕ ಅಂತರ ಕಾಪಾಡಿಕೊಂಡು, ಮಾಸ್ಕ್ ಧಾರಣೆಯೊಂದಿಗೆ, ಸ್ಯಾನಿಟೈಜರ್ ಇತ್ಯಾದಿ ಸುರಕ್ಷತಾ ಕ್ರಮಗಳನ್ನು ಬಳಸಿಯೇ ತಂದೆಯವರ ಹುಟ್ಟುಹಬ್ಬ ತುಂಬ ಸರಳವಾಗಿ ಕುಟುಂಬ ಸದಸ್ಯರೇ ಸೇರಿಕೊಂಡು ಆಚರಿಸಲಾಗುತ್ತಿದೆ ಎಂದು ಜೇವರ್ಗಿ ಶಾಸಕ, ಸದನದಲ್ಲಿ ವಿರೋಧ ಪಕ್ಷ ಮುಖ್ಯ ಸಚೇತಕ ಡಾ. ಅಜಯ್ ಸಿಂಗ್ ತಿಳಿಸಿದ್ದಾರೆ.

emedialine

Recent Posts

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

1 hour ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

2 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

2 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

2 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

2 hours ago

ನಮೋಶಿ ನೇತೃತ್ವದಲ್ಲಿ, ಕಲ್ಯಾಣ ಕರ್ನಾಟಕ ವಿಭಾಗದ ಪ್ರೌಢಶಾಲಾ ಶಿಕ್ಷಕರ ಸಭೆ

ಕಲಬುರಗಿ: ಈಶಾನ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ರವರ ನೇತೃತ್ವದಲ್ಲಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ…

2 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420