ಕಲಬುರಗಿ: ನಾಳೆ 28 ರಂದು ನಗರದ ಕನ್ನಡ ಭವನ ದಲ್ಲಿ ಕರ್ನಾಟಕ ರಕ್ಷಣ ವೇದಿಕೆ ( ಪ್ರವೀಣ ಶೆಟ್ಟಿ ಬಣ) ವತಿಯಿಂದಾ 15 ನೇ ಕಲ್ಲಾಣ ಕಲಬುರಗಿ ಉತ್ಸವ ಬೆಳ್ಳಿಗೆ 11.45 ಘಂಟೆಗೆ ಸರಳವಾಗಿ ಜರುಗಲಿದೆ ಎಂದು ಜಿಲ್ಲಾ ಕಾನೂನು ಘಟಕದ ಅಧ್ಯಕ್ಷರಾದ ಸಂಪತ್ ಜೆ ಹಿರೇಮಠ ತಿಳಿಸಿದ್ದಾರೆ .
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ನಾಳಿನ ಸಮಾರಂಭವನ್ನು ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯ ಅಧ್ಯಕ್ಷರಾದ ದತ್ತಾತ್ರೆಯ ಪಾಟೀಲ ರೇವೂರ ಅವರು ಉದ್ಗಾಟಿಸಲ್ಲಿದ್ದು, ವಿಧಾನ ಪರಿಷತ ಸದಸ್ಯರಾದ ಸಶೀಲ.ಜಿ.ನಮೋಶಿ ಜ್ಯೋತಿ ಬೆಳಗಿಸಲ್ಲಿದ್ದಾರೆ. ಭಾರತಾಂಬೆ ಹಾಗೂ ಕನ್ನಡಾಂಬೆಯ ಭಾವ ಚಿತ್ರಕ್ಕೆ ಶಾಸಕರಾದ ಬಸವರಾಜ ಮತ್ತಿಮೂಡ ಹಾಗೂ ಕನಿಜಾ ಫಾತೀಮಾ ಮಾಲಾರ್ಪಣೆ ಮಾಡಲ್ಲಿದ್ದಾರೆ. ಕರ್ನಾಟಕ ನವೀಕರಿಸಬಹುದಾದ ಇಂಧನ ನಿಗಮ ಅಧ್ಯಕ್ಷರಾದ ಚಂದು ಪಾಟೀಲ ಅಧ್ಯಕ್ಷತೆ ವಹಿಸಲ್ಲಿದ್ದಾರೆ.
ಕಲಬುರಗಿ ರಂಗಾಯಣ ನಿರ್ದೇಶಕರಾದ ಪ್ರಭಾಕರ ಜೋಶಿ, ಜಾನಪದ ಅಕಾಡಮಿ ಸದಸ್ಯರಾದ ಡಾ. ರಾಜೇಂದ್ರ ಎರನಾಳೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದು ಡಾ. ಶರಣು .ಬಿ.ಗದ್ದುಗೆ ನೇತೃತ್ವವ ವಹಿಸಿ ಪ್ರಾಸ್ತಾವಿಕ ಮಾತನಾಡಲ್ಲಿದ್ದಾರೆ.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಪದಕ ಪಡೆದ ಗಣ್ಯರಾದ, ಎ.ಸಿ.ಪಿ. ಜೆ ಹೆಚ್ ಇನ್ಮಾಮದಾರ , ಎಸಿಪಿ ಶರಣಪ್ಪ, ಮಹಾಗಂವ ಪೊಲೀಸ್ ಠಾಣೆಯ ಪಿಎಸ್.ಐ ಹೂಸೇನ ಪಾಶಾ, ಸಂಚಾರಿ ಪಿಎಸ್.ಐ ಭಾರತಿ ಎಮ್ ಧನಿ, ಮುಖ್ಯ ಪೇದೆ ಹೂಸೇನ ಬಾಷಾ, ಕೇಷವ ಬಿರಾದಾರಾ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯರಿಗೆ ಸನ್ಮಾನಿಸಲಾಗುವುದೆಂದು ಅವರು ತಿಳಿಸಿದ್ದಾರೆ.
ವಿಜಯ ಕುಮಾರ ಕೆ ಹಿರೇಮಠ, ಕಾಂಗ್ರೆಸ ಯುವ ಮುಂಖಡ ಶರಣ ಕುಮಾರ ಪಾಟೀಲ , ಆಲೂರಿ ವೆಂಟಕ, ನ್ಯಾಯವಾದಿ ನಿತೀಶ ಪಡಿಯಾಳ, ರವಿ ವೈ ಕಾಂಬಳೆ , ಗಿರೀಶ ಎನ ದೊಡ್ಡಮನಿ, ಉಪನ್ಯಾಸಕರಾದ ಡಾ.ಪ್ರವೀಣ ಕುಮಾರ ಮುಲಗೆ , ಚಂದ್ರಶೇಖರ ರಾಠೋಡ ಪರಿಸರ ಪ್ರೇಮಿ, ಸುರೇಷ ಸಾಗರ, ಸುರೇಖ ಜಗನಾಥ, ಶಾ ಬಂದರವಾಡ , ಸೇಂವತಾ ಪ್ರೇಮ ಸಿಂಗಾ ಚವಾಣ್ಣ ಸೇರಿದಂತೆ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.