ಸುರಪುರ ತಾಲೂಕು ಗ್ರಾಮ ಪಂಚಾಯತಿ ಫಲಿತಾಂಶ : ಕಾಂಗ್ರೆಸ್ ಬೆಂಬಲಿತರ ಮೇಲು ’ಗೈ’

0
66

ಸುರಪುರ: ತಾಲೂಕಿನ ಎಲ್ಲಾ ೨೧ ಗ್ರಾಮ ಪಂಚಾಯತಿಗಳ ೩೮೩ ಸ್ಥಾನಗಳ ಫಲಿತಾಂಶ ಪ್ರಕಟವಾಗಿದ್ದು ಈಬಾರಿ ಸುರಪುರ ತಾಲೂಕಿನ ಬಹುತೇಕ ಗ್ರಾಮ ಪಂಚಾಯತಿಗಳು ಕೈ ಬೆಂಬಲಿತರ ವಶವಾಗಿವೆ.

ಕಳೆದ ೨೨ ರಂದು ಚುನಾವಣೆ ನಡೆದಿದ್ದ ೨೦ ಗ್ರಾಮ ಪಂಚಾಯತಿಗಳಲ್ಲಿನ ೩೮೩ ಸ್ಥಾನಗಳಲ್ಲಿ ೨೧೪ ಸ್ಥಾನ ಕಾಂಗ್ರೆಸ್ ಬೆಂಬಲಿತರು ಗೆಲ್ಲುವ ಮೂಲಕ ಕಾಂಗ್ರೆಸ್ ೧೩ ಗ್ರಾಮ ಪಂಚಾಯತಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಮೇಲು ಗೈ ಸಾಧಿಸಿದೆ. ಅಲ್ಲದೆ ಒಟ್ಟು ೩೮೩ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ೨೧೪ ಸ್ಥಾನಗಳನ್ನು ಗೆಲ್ಲುವ ಮೂಲಕ ದೊಡ್ಡ ಶಕ್ತಿಯನ್ನು ಪ್ರದರ್ಶಿಸಿದೆ.

Contact Your\'s Advertisement; 9902492681

ಇನ್ನು ಆಡಳಿತರೂಢ ಬಿಜೆಪಿ ಪಕ್ಷದ ಬೆಂಬಲಿತರು ೧೨೧ ಜನರು ಆಯ್ಕೆಯಾಗಿದ್ದು ತಾಲೂಕಿನ ೦೬ ಗ್ರಾಮ ಪಂಚಾಯತಿಗಳನ್ನು ತನ್ನದಾಗಿಸಿಕೊಂಡಿದೆ.ಅಲ್ಲದೆ ಬಿಜೆಪಿ ಪಕ್ಷದ ಬೆಂಬಲಿಗರು ತಾಲೂಕಿನ ೬ ಗ್ರಾಮ ಪಂಚಾಯತಿಗಳಲ್ಲಿ ಒಂದೂ ಸ್ಥಾನವನ್ನು ಗೆಲ್ಲದಿರುವುದು ಆಶ್ಚರ್ಯಕರ ಎನಿಸಿದೆ.

ಅಲ್ಲದೆ ಜೆಡಿಎಸ್ ಕೂಡ ಕೆಲವು ಗ್ರಾಮ ಪಂಚಾಯತಿಗಳಲ್ಲಿ ತನ್ನ ಪಾರುಪತ್ಯ ಮೆರೆದಿದ್ದು ಯಕ್ತಾಪುರ ಗ್ರಾಮ ಪಂಚಾಯತಿಯ ೨೫ ಸ್ಥಾನಗಳಲ್ಲಿ ೨೩ ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರ ಹಿಡಿಯುವಲ್ಲಿ ಸಫಲವಾಗಿದೆ.ತಾಲೂಕಿನಲ್ಲಿ ಒಟ್ಟು ೪೮ ಜನ ಜೆಡಿಎಸ್ ಬೆಂಬಲಿಗರು ಜಯ ಸಾಧಿಸಿದ್ದಾರೆ.

ಇನ್ನು ತಾಲೂಕಿನ ಅರಳಹಳ್ಳಿ ಗ್ರಾಮದ ಶ್ರವಣಕುಮಾರ ಎಂಬುವವರು ಒಂದು ಮತದ ಅಂತರದಿಂದ ಜಯಗಳಿಸಿದರೆ ತಾಲೂಕಿನ ಬಾದ್ಯಾಪುರ ಗ್ರಾಮದ ಮಹಿಳೆ ಶಿವಮಗ್ಗೆಮ್ಮ ಚೆನ್ನೂರ ಎಂಬುವವರು ಸತತ ೩ನೇ ಬಾರಿ ಗೆಲುವು ಸಾಧಿಸುವ ಮೂಲಕ ಹಳ್ಳಿ ರಾಜಕಾರಣದಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇನ್ನು ನೂತನ ಗ್ರಾಮ ಪಂಚಾಯತಿಯಾದ ಬಾದ್ಯಾಪುರ ಗ್ರಾಮ ಪಂಚಾಯತಿಯಲ್ಲಿ ಕಾಂಗ್ರೆಸ್ ಬೆಂಬಲಿತರು ೭ ಜನ ಹಾಗು ಬಿಜೆಪಿ ಬೆಂಬಲಿತ ೭ ಜನರು ಆಯ್ಕೆಯಾಗುವ ಮೂಲಕ ಸಮಬಲ ಸಾಧಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here