ದೇಶಕ್ಕಾಗಿ ಪ್ರಾಣವನ್ನೇ ಅರ್ಪಣೆ ಮಾಡಿದ ಮಹಾನ ವೀರರು ರಾಮಪ್ರಸಾದ್ ಬಿಸ್ಮಿಲ್ ಮತ್ತು ಅಶ್ಫಕುಲ್ಲಾ ಖಾನ

0
80

ಶಹಾಬಾದ:ರಾಮಪ್ರಸಾದ್ ಬಿಸ್ಮಿಲ್ ಮತ್ತು ಅಶ್ಫಕುಲ್ಲಾ ಖಾನ ಎಂಬ ಅಪ್ಪಟ ದೇಶಪ್ರೇಮಿಯು ತನ್ನ ದೇಶಕ್ಕಾಗಿ ಪ್ರಾಣವನ್ನೇ ಅರ್ಪಣೆ ಮಾಡಿದ ಮಹಾನ ವೀರರು. ರಾಮಪ್ರಸಾದ್ ಬಿಸ್ಮಿಲ್ ಸಾವಿನ ಅಂತಿಮ ಕ್ಷಣದಲ್ಲೂ ದೇಶಪ್ರೇಮವನ್ನೇ ಕನವರಿಸಿದ ಕ್ರಾಂತಿವೀರ ಎಂದು ಎಸ್ಯುಸಿಐ ಕಾರ್ಯದರ್ಶಿ ಗಣಪತರಾವ ಮಾನೆ ಹೇಳಿದರು.

ಅವರು ಆಲ್ ಇಂಡಿಯಾ ಡೆಮಾಕ್ರಟಿಕ್ ಯುಥ್ ಆರ್ಗನೈಜೇಷನ್ ಸ್ಥಳಿಯ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ರಾಮಪ್ರಸಾದ್ ಬಿಸ್ಮಿಲ್ಲ್ ಮತ್ತು ಅಶ್ಫಕುಲ್ಲಾಖಾನ ಅವರ 93ನೇ ಹುತಾತ್ಮ ದಿನಾಚರಣೆಯ ಮುಖ್ಯಭಾಷಣಾಕಾರರಾಗಿ ಮಾತನಾಡಿದರು.

Contact Your\'s Advertisement; 9902492681

ಸಮಾಜವಾದದ ವಿಚಾರಕ್ಕೆ ಆಕರ್ಷಿತರಾಗಿ ತರಾಗಿ ಹೆಚ್.ಆರ್.ಎ. ಕ್ರಾಂತಿಕಾರಿ ಸಂಘಟನೆಯನ್ನು ಕಟ್ಟಿದವರು.ಇಂದು ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿಗಳ ಜೀವನ ಚರಿತ್ರೆಗಳು ಸರಕಾರ ಪಠ್ಯ ಪುಸ್ತಕಗಳಲ್ಲಿ ಅಳವಡಿಸದೇ ಇರುವುದನ್ನು ತೀವ್ರವಾಗಿ ವಿರೋಧಿಸಿದ ಅವರು ಎಲ್ಲರಿಗೂ ಶಿಕ್ಷಣ, ಆರೋಗ್ಯ, ಉದ್ಯೋಗ, ಸಮಾಜವಾದ ರಾಷ್ಟ್ರ ನಿರ್ಮಾಣ ರಾಮಪ್ರಸಾದ್ ಬಿಸ್ಮಿಲ್ ರವರ ಕನಸಾಗಿತ್ತು. ಆದರೆ ದೇಶ ಸ್ವಾತಂತ್ಯ್ರ ಪಡೆದು 70 ವರ್ಷ ಕಳೆದರೂ ಭೀಕರ ಸಮಸ್ಯೆಗಳನ್ನು ವಿದ್ಯಾರ್ಥಿ-ಯುವಜನರು ಎದುರಿಸುತ್ತಿದ್ದಾರೆ. ಇದರ ವಿರುದ್ಧ ಹೋರಾಡಲು ಹಾಗೂ ರಾಮಪ್ರಸಾದ್ ಬಿಸ್ಮಿಲ್ ರವರ ಕನಸು ನನಸು ಮಾಡಲು ಯುವಕರು ಮುಂದೆ ಬರಬೇಕೆಂದು ಕರೆ ನೀಡಿದರು.

ಎ.ಐ.ಡಿ.ವೈ.ಓ ಜಿಲ್ಲಾ ಕಾರ್ಯದರ್ಶಿ ಜಗನ್ನಾಥ.ಎಸ್.ಹೆಚ್ ಮಾತನಾಡಿ,ವಿದ್ಯಾರ್ಥಿಗಳು ಸಾಮಾನ್ಯ ಜೀವನ ಮಾಡದೇ ಸರಿಯಾದ ರಾಜಕೀಯ ವಿಚಾರ ಹಾಗೂ ನಿಸ್ವಾರ್ಥ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಮಹಾನ ಕ್ರಾಂತಿಕಾರಿಗಳಾದ ರಾಮಪ್ರಸಾದ್ ಬಿಸ್ಮಿಲ್, ಅಶ್ಫಕುಲ್ಲಾ ಖಾನ ರವರ ಜೀವನ ಆದರ್ಶಗಳು ವಿದ್ಯಾರ್ಥಿ-ಯುವಕರು ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಿಸಬೇಕೆಂದರು.
ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಹೀಮ್ ಕ್ರಾಂತಿಕಾರಿಗಳ ಭವಚಿತ್ರಕ್ಕೆ ಮಾಲಾರ್ಪಣೆ  ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಐಡಿವಾಯ್ಓ ಅಧ್ಯಕ್ಷ ಸಿದ್ದು ಚೌದ್ರಿ ವಹಿಸಿದ್ದರು. ಆಟೋ ಯುನಿಯನ್ನ ಜುಬೇರ್ ಪಟೇಲ್,ಮೈನೋದ್ದಿನ್,ಖಲೀಲ್, ಸಂತೋಷ ,ಮಂಜುನಾಥ ಖಾನಾಪೂರ್,ವಿಶ್ವ.ಎಮ್.ಸಿಂಘೆ, ಪ್ರವೀಣ ಬಣಮಿಕರ್, ಶ್ರೀನಿವಾಸ ,ತಿಮ್ಮಯ ಮಾನೆ , ನೀಲಕಂಠ ಎಮ್ .ಹುಲಿ ,ರಘು ಪವರ್ , ರಾಕೇಶ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here