ಕಂಪ್ಲಿ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಗೆ ನೂತನ ಪದಾಧಿಕಾರಿಗಳ ಆಯ್ಕೆ!

0
204

ಕಂಪ್ಲಿ: ಡಿ.3 ರಂದು ಬಳ್ಳಾರಿ ಜಿಲ್ಲೆಯ ಕಂಪ್ಲಿ ನಗರದ 3ನೇ ವಾರ್ಡಿನ ಚಪ್ಪರದಲ್ಲಿಯ ಛಲವಾದಿ ಸಮುದಾಯ ಭವನದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಕಂಪ್ಲಿ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ (ರಿ) ನ ಉದ್ಘಾಟನೆ ಮತ್ತು ನೂತನ ಪದಾಧಿಕಾರಿಗಳ ನೇಮಕ ಕಾರ್ಯಕ್ರಮವನ್ನ ಕಂಪ್ಲಿಯ ಹಿರಿಯ ಕಬಡ್ಡಿ ಆಟಗಾರ ಹಾಗೂ ನಿವೃತ್ತ ಪೊಲೀಸ್ ಮುಖ್ಯ ಪೇದೆಗಳಾದ ಬಳೆಗಾರ ಗೋಪಾಲ್, ಡಿ. ಮುನಿಸ್ವಾಮಿ, ವಕೀಲ ಮೋಹನ್ ಕುಮಾರ್ ದಾನಪ್ಪ, ವಿ. ನಾರಾಯಣ ಸ್ವಾಮಿ, ಬೆಟ್ಟಪ್ಪ, ನಾಗಣ್ಣ, ಕುರಬರ ಸಿದ್ದಪ್ಪ ರವರು ಜ್ಯೋತಿ ಬೆಳಗಿಸುವ ಮುಖಾಂತರ ಉದ್ಘಾಟಿಸಿದರು.

ಇಂದಿನ ಪೀಳಿಗೆ ಪಾಶ್ಚಾತ್ಯ ದೇಶೀಯ ಕ್ರೀಡೆಗಳಿಗೆ ಮಾರುಹೋಗಿ ಅಪ್ಪಟ ದೇಶೀಯ ಹಾಗೂ ಗ್ರಾಮೀಣ ಕ್ರೀಡೆಯಾದ ಕಬಡ್ಡಿಯನ್ನು ನಿರ್ಲಕ್ಷ್ಯ ಮಾಡುತ್ತಿರುವುದು ಸರಿಯಲ್ಲಾ, ಹಿಂದೆ ಕಬಡ್ಡಿ ಆಟಗಾರರಿಗೆ ಯಾವುದೇ ಪ್ರೋತ್ಸಾಹ ಆರ್ಥಿಕ ಸಹಾಯಗಳು ಇಲ್ಲದೆ ಇದ್ದರೂ ಕಬಡ್ಡಿ ಆಟ ಅಂತರಾಷ್ಟ್ರೀಯ ಮಟ್ಟದವರೆಗೂ ತಲುಪಿತ್ತು, ಆದರೆ ಇಂದು ಎಲ್ಲಾ ಸೌಲಭ್ಯ, ಸೌಲತ್ತು, ಪ್ರೋತ್ಸಾಹ, ಆರ್ಥಿಕ ನೆರವುಗಳು ದೊರಕುತ್ತಿದ್ದರೂ ಕಬಡ್ಡಿ ಕ್ರೀಡೆಯಲ್ಲಿ ಯುವಕರು ತೊಡಗದೇ ಇರುವುದರಿಂದ ಕಬಡ್ಡಿ ಕ್ರೀಡೆಯು ಅವಸಾನದ ಅಂಚಿನಲ್ಲಿದೆ ಎಂದು ಬೇಸರ ವ್ಯಕ್ತಪಡಿಸಿ, ಪ್ರೋ ಕಬಡ್ಡಿ ಬಂದಾಗಿನಿಂದ ಮತ್ತೆ ರಾಜ್ಯ ಮತ್ತು ರಾಷ್ಟ್ರದಲ್ಲಿ ಕಬಡ್ಡಿಯ ಅಲೆ ಎದ್ದಿದ್ದು ಯುವಕರು ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ, ರಾಜ್ಯ ಮಟ್ಟದ ಕಬಡ್ಡಿ ಆಟಗಾರರ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಕಬಡ್ಡಿ ಆಟಗಾರ ಹಾಗೂ ಹೈ ಕೋರ್ಟಿನ ನ್ಯಾಯವಾದಿ ಮೋಹನ್ ಕುಮಾರ್ ದಾನಪ್ಪ ಕರೆ ನೀಡಿದರು.

Contact Your\'s Advertisement; 9902492681

ಇಂದಿನ ಪೀಳಿಗೆ ಮೊಬೈಲ್ ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದು ಕ್ರೀಡೆಯಲ್ಲಿ ಆಸಕ್ತಿ ತೋರದೆ ಇರುವುದರಿಂದ ಮಾನಸಿಕ ಖಿನ್ನತೆಗೆಗೋಳಗಾಗಿ ಅತಿ ಚಿಕ್ಕವಯಸ್ಸಿಗೆ ನಾನಾ ರೋಗಗಳಿಗೆ ತುತ್ತಾಗುತ್ತಿರುವುದು ದುರಂತದ ಸಂಗತಿಯಾಗಿದೆ ಎಂದು ಕಬಡ್ಡಿಯ ಹಿರಿಯ ಆಟಗಾರ ಹಾಗೂ ನಿವೃತ್ತ ಪೊಲೀಸ್ ಮುಖ್ಯ ಪೇದೆ ಬಳೆಗಾರ ಗೋಪಾಲ್ ರವರು ಬೇಸರ ವ್ಯಕ್ತಪಡಿಸಿದರು.

ನಂತರ ಕಾರ್ಯಕ್ರಮದಲ್ಲಿ ಸರ್ವ ಆಟಗಾರರ ಸಮ್ಮುಖದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಡಿ. ಮುನಿಸ್ವಾಮಿ, ಬಳೆಗಾರ ಗೋಪಾಲ್, ಬೆಟ್ಟಪ್ಪ, ಕಟ್ಟೆಮನೆ ಕರಿಯಪ್ಪ, ಅಧ್ಯಕ್ಷರಾಗಿ ಎಂ. ಮಾರುತಿ, ಉಪಾಧ್ಯಕ್ಷರಾಗಿ ಮಾನವಿ ಮಹೇಶ್,ಎಲೆಕ್ಟ್ರಿಷಿಯನ್ ರಾಜು, ಕ್ರಿಷ್ಣ (ಕಿಟ್ಟ), ಕೊಟ್ಟಲ್ ವೀರೇಶ್, ಪ್ರಧಾನ ಕಾರ್ಯದರ್ಶಿಯಾಗಿ ಸಿ. ರಾಮಪ್ಪ ಬೆಳಗೋಡು, ಸಂಘಟನಾ ಕಾರ್ಯದರ್ಶಿಯಾಗಿ ದುರಗೇಶ್ ಬೆಳಗೋಡು, ಜಂಟಿ ಕಾರ್ಯದರ್ಶಿಯಾಗಿ ಕೆ. ರಾಜ ಶೇಖರ್, ಗಾದಿಲಿಂಗ ಎಮ್ಮಿಗನೂರು, ಸಹ ಕಾರ್ಯದರ್ಶಿಯಾಗಿ ಜ್ಞಾನೇಶ್ವರ, ಖಜಾಂಚಿಯಾಗಿ ತೆಲುಗರ ಸುರೇಶ್, ಹಿರಿಯ ಸಲಹೆಗಾರರಾಗಿ ವಿ. ನಾರಾಯಣ ಸ್ವಾಮಿ, ಮೋಹನ್ ಕುಮಾರ್ ದಾನಪ್ಪ, ಜಿಂದಾಲ್ ತಿಪ್ಪೇಸ್ವಾಮಿ, ಪಿ.ಸಿ.ಅಶೋಕ್, ಪಿಸಿ.ಅಂಜಿನಪ್ಪ, ಕಾರ್ಯಕಾರಿಣಿ ಸದಸ್ಯರಾಗಿ ಕುರುಬರ ಸಿದ್ದಪ್ಪ, ಬುಶ್ ರಾಮಪ್ಪ, ಎಂ. ರಾಮಪ್ಪ, ವೀರೇಶ್, ಈರಣ್ಣ, ದಾದ ಖಲಂದರ್, ಜೆ. ಕಾಟo ರಾಜ್, ತರಬೇತುದಾರರಾಗಿ ಚಂದ್ರ ಶೇಖರ್ ರಾಮಸಾಗರರವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಪುಟಾಣಿ ಅಂಜಿನಪ್ಪ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here