ಕಲಬುರಗಿ: ಜೇವರ್ಗಿ ತಾಲೂಕಿನ ಜೈನಾಪುರದಲ್ಲಿ ಪಂಚಾಯ್ತಿ ಚುನಾವಣೆ ಹಿನ್ನೆಲೆಯಲ್ಲಿನ 2 ಗುಂಪುಗಳ ನಡುವಿನ ಜಗಳ, ಪೊಲೀಸ್ ಮಧ್ಯ ಪ್ರವೇಶ ಹಾಗೂ ನಂತರದ ಬೆಳವಣಿಗೆಗಳಲ್ಲಿ ಸಾವನ್ನಪ್ಪಿರುವ 3 ವರ್ಷದ ಮಗು ಭಾರತಿಯ ನೊಂದ ಕುಟುಂಬ ವರ್ಗಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು, ರಾಜ್ಯ ಸರ್ಕಾರ, ಜಿಲ್ಲಾಡಳಿತ ಹಾಗೂ ಪೆÇಲೀಸ್ ಇಲಾಖೆ ಈ ಪ್ರಕರಣದಲ್ಲಿ ಸಂತ್ರಸ್ತ ಕುಟುಂಬ ವರ್ಗಕ್ಕೆ ಎಲ್ಲ ರೀತಿಯ ನೆರವು ನೀಡುವಲ್ಲಿ ಆದಷ್ಟು ಬೇಗ ಸ್ಪಂದಿಸುವ ಮೂಲಕ ಮಾನವೀಯತೆ ಮೆರೆಯಬೇಕೆಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ, ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಆಗ್ರಹಿಸಿದ್ದಾರೆ.
ಪುಟ್ಟ ಮಗುವಿನ ಸಾವು ತೀವ್ರ ನೋವಿನ ಪ್ರಸಂಗವಾಗಿ ದಾಖಲಾಗಿದೆ. ಆ ಕುಟುಂಬಕ್ಕಷ್ಟೇ ಅಲ್ಲ, ನಮ್ಮೆಲ್ಲರಿಗೂ ನೋವು ಉಂಟು ಮಾಡಿದೆ. ಪೆÇಲೀಸರ ವಶದಲ್ಲಿರುವಾಗಲೇ ಮಗು ಸಾವನ್ನಪ್ಪಿರುವುದಾಗಿ ಕುಟುಂಬಸ್ಥರು ಹೇಳುತ್ತಾರೆ. ಮೇಲ್ನೋಟಕ್ಕೆ ಇದು ನಿಜವೂ ಅನ್ನಿಸುತ್ತಿದೆ. ಅಮಾಯಕರ ಮೇಲೆ ರಾಜಕೀಯ ಪ್ರೇರಿತವಾಗಿ ಪೆÇಲೀಸರು ನಡೆಸಿರುವ ದೌರ್ಜನ್ಯ ಈ ಬೆಳವಣಿಗೆ ನೋವು ಇನ್ನಷ್ಟು ಹೆಚ್ಚಿಸಿದೆ. ಇದು ಅತ್ಯಂತ ಖಂಡನೀಯ ಘಟನೆ. ಸದರಿ ಘಟನೆಯಲ್ಲಿ ಸೂಕ್ಷ್ಮವಾಗಿ- ನಿಷ್ಪಕ್ಷಪಾತವಾಗಿ ಹೆಜ್ಜೆ ಇಡುವಂತೆ ಖುದ್ದಾಗಿ ಹೇಳಿದ್ದರೂ ಜೇವರ್ಗಿ ಪೆÇಲೀಸರ ಅತಿರೇಕದ ವರ್ತನೆ ಜೇವರ್ಗಿಯಲ್ಲಿ ಇಂತಹ ನಡೆಯಬಾರದಂತಹ ಘಟನೆಗೆ ಕಾರಣವಾಯ್ತು.
ಮಹಿಳೆಯರನ್ನು ಬಂಧಿಸಿ ರಾತ್ರಿ ಹೊತ್ತು ಜೈಲಿಗೆ ಅಟ್ಟಲಾಗಿದೆ. ಪುಟ್ಟ ಮಕ್ಕಳನ್ನು ಜೊತೆಗೆ ಕರೆದೊಯ್ಯಲಾಗಿದೆ. ಮಹಿಳೆಯರನ್ನೂ ಬಂಧಿಸುವ ಜೊತೆಗೆ ಮಕ್ಕಳನ್ನೂ ವಶಕ್ಕೆ ಪಡೆಯುವ ಅನಿವಾರ್ಯತೆ ಪೆÇಲೀಸರಿಗೆ ಏನಿತ್ತು? ಮಗು ಭಾರತಿ ಆರೋಗ್ಯದ ಬಗ್ಗೆ ಪೆÇಲೀಸರು ಲಕ್ಷ ವಹಿಸಲಿಲ್ಲ ಯಾಕೆ? ಸದರಿ ಘಟನೆಗೆ ಪೆÇಲೀಸರ ಅತಿರೇಕದ ವರ್ತನೆಯೇ ಕಾರಣ ಎಂದಿರುವ ಡಾ. ಅಜಯ್ ಸಿಂಗ್ ಈ ಘಟನೆಯಲ್ಲಿ ಪೆÇಲೀಸರು ಜೈನಾಪುರ ಕುಟುಂಬದ ಮೇಲೆ ಹಾಕಿರುವ ಕೇಸ್‍ಗಳನ್ನೆಲ್ಲ ಬೇಷರತ್ತಾಗಿ ಹಿಂದಕ್ಕೆ ಪಡೆಯಬೇಕು. ಸಾವನ್ನಪ್ಪಿರುವ ಮಗುವಿಗೆ ಬೇಗ ಪರಿಹಾರ ದೊರಕುವಂತೆ ಮಾಡಬೇಕೆಂದು ಆಗ್ರಹಿಸಿದ್ದಾರೆ.