ಕಿರದಳ್ಳಿ ದೇವತೆಗಳ ಜಾತ್ರೆ ಹೆಸರಲ್ಲಿ ಕೋಣ-ಕುರಿ ಬಲಿ ತಡೆಯಲು ಒತ್ತಾಯ

0
30

ಸುರಪುರ: ತಾಲೂಕಿನ ಕೆಂಭಾವಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿನ ಕಿರದಳ್ಳಿ ಗ್ರಾಮದಲ್ಲಿ ಜ೧೨ ರಂದು ನಡೆಯಲಿರುವ ದ್ಯಾವಮ್ಮ,ಕೆಂಚಮ್ಮ,ಮರೆಮ್ಮ ದೇವತೆಗಳ ಹೆಸರಿನಲ್ಲಿ ನಡೆಯಲಿರುವ ಕೋಣ-ಕುರಿ ಬಲಿ ಆಚರಣೆಯನ್ನು ತಡೆ ಹಿಡಿಯಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮ ಘರ್ಜನೆ) ತಾಲೂಕು ಸಮಿತಿ ಮುಖಂಡರು ಒತ್ತಾಯಿಸಿದ್ದಾರೆ.

ಜ೧೨ ರಿಂದ ೧೩ವರೆಗೆ ನಡೆಯಲಿರುವ ಜಾತ್ರೆಯ ಅಂಗವಾಗಿ ದೇವತೆಗಳ ಗುಡಿಗಳ ಮುಂದುಗಡೆ ಅಂದು ೨೦೦-೩೦೦ ಕೋಣ ಮತ್ತು ಕುರಿ ಬಲಿ ನೀಡಲಾಗುವುದು ಹಾಗೂ ಕೆಲವೊಂದು ಅನಿಷ್ಠ ಪದ್ಧತಿಗಳನ್ನು ಆಚರಿಸಲಾಗುವುದು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಕೋಣ-ಕುರಿ ಬಲಿ ಕೊಡುವ ಅನಿಷ್ಠ ಪದ್ದತಿಗಳನ್ನು ತಡೆ ಹಿಡಿಯಲು ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಅಂದು ಯಾವುದೇ ಗಲಭೆ ಆಗದಂತೆ ಪೋಲಿಸ್ ಬಂದೋಬಸ್ತು ಒದಗಿಸಬೇಕು ಎಂದು ಸಮಿತಿಯ ಮುಖಂಡರು ಡಿವೈಎಸ್‌ಪಿರವರಿಗೆ ಬರೆದ ಮನವಿಯನ್ನು ಹುಣಸಗಿ ಸಿಪಿಐ ದೌಲತ್ ಎನ್.ಕೆ ಅವರ ಮೂಲಕ ಸಲ್ಲಿಸಿ ಆಗ್ರಹಿಸಿದ್ದಾರೆ.

Contact Your\'s Advertisement; 9902492681

ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಸಂಚಾಲಕ ನಾಗಣ್ಣ ಕಲ್ಲದೇವನಹಳ್ಳಿ,ತಾಲೂಕು ಸಂಚಾಲಕ ಶಿವಶಂಕರ ಹೊಸಮನಿ,ಮಲ್ಲಿಕಾರ್ಜುನ ತಳವಾರಗೇರಿ,ಮಲ್ಲಿಕಾರ್ಜುನ ಜಾಲಿಬೆಂಚಿ,ಶರಣಪ್ಪ ತೆಗ್ಗೆಳ್ಳಿ,ಹಣಮಂತ ಸತ್ಯಂಪೇಟ ಇತರರು ಮನವಿ ಪತ್ರ ಸಲ್ಲಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here