ಶಹಾಬಾದ:ನಗರದ ಬಿಜೆಪಿ ಕಾರ್ಯಯಾಲಯದಲ್ಲಿ ಮಂಗಳವಾರ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ವತಿಯಿಂದ ಶ್ರೀ ಸ್ವಾಮಿ ವಿವೇಕಾನಂದರವರ 158ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜ್ಯೋತಿ ಶರ್ಮಾ ಮಾತನಾಡಿ, ಯುವ ಜನಾಂಗಕ್ಕೆ ದೇಶದ ಭವಿಷ್ಯವನ್ನೇ ಬದಲಾಯಿಸುವ ಶಕ್ತಿ ಇದ್ದು, ಆ ಶಕ್ತಿಯ ಮಹತ್ವವನ್ನು ಯುವ ಜನಾಂಗ ಅರಿಯಬೇಕಾಗಿದೆ.ನಮ್ಮೊಳಗೆ ಅಗಾಧವಾದ ಅತಿ ಅದ್ಭುತ ಶಕ್ತಿ ಇದೆ.ಅದನ್ನು ಅರಿತು ನಡೆದಾಗ ಮಾತ್ರ ನಮ್ಮ ವ್ಯಕ್ತಿತ್ವ ರೂಪಗೊಳ್ಳಲು ಸಾಧ್ಯ.ಹಾಗೇ ನಾವು ಅಂದುಕೊಂಡ ಕಾರ್ಯವು ಎಲ್ಲ ಫಲಿಸುತ್ತದೆ. ಜೀವನದಲ್ಲಿ ಧೈರ್ಯದಿಂದ ಮುನ್ನುಗ್ಗಬೇಕು.ಅಡೆತಡೆಗಳು ಬರುವುದು ಸಹಜ.ಅದನ್ನು ಮೆಟ್ಟಿ ನಿಂತಾಗ ಮಾತ್ರ ನಮ್ಮ ಗೆಲುವು ಮಾತ್ರ ಖಚಿತ.ಆದ್ದರಿಂದ ಆತ್ಮಬಲ,ಆತ್ಮ ವಿಶ್ವಾಸದ ಶಕ್ತಿ ಸ್ವಾರ್ಥಕ್ಕೆ ಬಲಿಯಾಗದೇ ಸಮಾಜ ಮುಖಿ ಚಿಂತನೆಗಳತ್ತ ವಾಲಿದರೆ ವಿವೇಕಾನಂದರ ಆಶಯಗಳು ಈಡೇರಲು ಸಾಧ್ಯ ಎಂದರು.
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ದಿನೇಶ ಗೌಳಿ ಯುವಕರಲ್ಲಿ ಆತ್ಮವಿಶ್ವಾಸ ಮತ್ತು ಸ್ವಾಭಿಮಾನದ ಕಿಚ್ಚು ಮೂಡಿದಾಗ ಮಾತ್ರ ಭಾರತ ದೇಶವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಮಾಡಲು ಸಾಧ್ಯ. ದೇಶದ ಸಂಸ್ಕೃತಿ ಮತ್ತು ಗೌರವವನ್ನು ವಿಶ್ವಕ್ಕೆ ಪರಿಚಯಿಸಿದ ಮಹಾನ್ ಸಾಧಕರಾದ ವಿವೇಕಾನಂದರ ದೇಶ ಪ್ರೇಮ ಮತ್ತು ಈ ಮಣ್ಣಿನ ಬಗ್ಗೆ ಅವರಿಗಿದ್ದ ಧನ್ಯತಾ ಭಾವನೆ ಇಂದಿನ ಯುವಕರಲ್ಲಿ ಬೆಳೆಯಬೇಕಿದೆ ಎಂದು ಹೇಳಿದರು.
ಪ್ರಮುಖರಾದ ಬಸವರಾಜ ಬಿರಾದಾರ, ಕನಕಪ್ಪ ದಂಡಗೂಲಕರ ಮಾತನಾಡಿದರು. ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಕೇಶ ಮಿಶ್ರ, ಮಂಡಲ ಉಪಾಧ್ಯಕ್ಷರಾದ ದುರ್ಗಪ್ಪ ಪವಾರ,ಶಶಿಕಲಾ ಸಜ್ಜನ,ನೀಲಗಂಗಮ್ಮ ಘಂಟ್ಲಿ, ಸಂಜಯ ಕೋರೆ, ಶಿವಾಜಿ ರೆಡ್ಡಿ,ಸಂಜಯ ವಿಟ್ಕರ, ಅಮರ ಕೋರೆ, ಜಗದೀಶ ಸುಬೇದಾರ,ಪವನ ಜಾಧವ,ಆಶಿಷ ಮಂತ್ರಿ, ಬಾಬುರಾವ ಕೋಬಾಳ,ರಿತೇಶ ಬೋರಗಾಂವಕರ,ಮಲ್ಲು ಹುಳಗೋಲ,ಅವಿನಾಶ ಸಾಳೂಂಕೆ,ಅನಿಲ ಕಲ್ಯಾಣಿ, ಮಲ್ಲು ಹವಾಲ್ದಾರ,ಶ್ರೀಧರ, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಮಂಡಲ ಪ್ರಧಾನ ಕಾರ್ಯದರ್ಶಿ ಸಿದ್ರಾಮ ಕುಸಾಳೆ ನಿರೂಪಿಸಿದರು, ಮಹಿಳಾ ಮೋರ್ಚಾ ಅಧ್ಯಕ್ಷೆ ಜಯಶ್ರೀ ಸೂಡಿ ವಂದಿಸಿದರು.