ವಿದ್ಯಾರ್ಥಿಗಳಿಗೆ ನೆಟ್ ಸೌಲಭ್ಯ ಉಚಿತವಾಗಿ ನೀಡಲು ನಾಟೀಕಾರ ಆಗ್ರಹ

0
44

ಕಲಬುರಗಿ: ಮಾರ್ಚ ಏಪ್ರಿಲ್‌ನಲ್ಲಿ ನಡೆಯಲಿರುವ ಪರೀಕ್ಷೆಗಳಿಗೆ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ 2ಜಿಬಿ ಡೇಟಾದೊಂದಿಗೆ ನೆಟ್ ಸೌಲಭ್ಯವನ್ನು ಉಚಿತವಾಗಿ ನೀಡಬೇಕೆಂದು ರಾಜ್ಯ ಸರಕಾರಕ್ಕೆ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ) ಬಣ ದ ಕಲ್ಯಾಣ ಕರ್ನಾಟಕ ಪ್ರಧಾನ ಕಾರ್ಯದರ್ಶಿಯಾದ ಗೋಪಾಲ ನಾಟೀಕಾರ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ತಮಿಳುನಾಡು ಸರಕಾರ ಅಲ್ಲಿನ ವಿದ್ಯಾರ್ಥಿಗಳಿಗೆ ಪ್ರತಿದಿನ ಉಚಿತವಾಗಿ 2ಜಿಬಿ ಡೇಟಾದೊಂದಿಗೆ ನೆಟ್ ಸೌಲಭ್ಯ ಕಲ್ಪಿಸಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲಿನ ನಮ್ಮ ಎಲ್ಲಾ ವಿಧ್ಯಾರ್ಥಿಗಳಿಗೂ ಈ ಸೌಲಭ್ಯವನ್ನು ಒದಗಿಸಬೇಕು ಎಂದು ಅವರು ಮನವಿ ಮಾಡಿದರು.

Contact Your\'s Advertisement; 9902492681

ಕೋವಿಡ್-19 ರ ಪರಿಣಾಮವಾಗಿ ಬಹುತೇಕ ಖಾಸಗಿ ಹಾಗೂ ಸರಕಾರಿ ಶಾಲೆಗಳ ಆನಲೈನ್ ತರಗತಿಗಳ ಮೊರೆ ಹೋಗಿದ್ದು , ಇದು ಪಾಲಕರಿಗೆ ಹೊರೆಯಾಗಿದೆ‌. ಇನ್ನೂ ಮುಂದಿನ 6 ತಿಂಗಳು ಕಾಲ ಪ್ರತಿದಿನ 2ಜಿಬಿ ಡೇಟಾ ಉಚಿತವಾಗಿ ನೀಡಿದರೆ ವಿದ್ಯಾರ್ಥಿಗಳಿಗೆ ಅನೂಕೂಲವಾಗಲಿದೆ ಎಂದರು. ಪ್ರತಿ ವಿದ್ಯಾರ್ಥಿ ನೆಟ್ ಹಾಕಿಸಲು ರೂ.200 ರಿಂದ 300 ರವರೆಗೆ ಖರ್ಚು ಮಾಡುತ್ತಾರೆ.

ತಮಿಳುನಾಡಿನಲ್ಲಿ ಈಗಾಗಲೇ ವಿದ್ಯಾರ್ಥಿಗಳಿಗೆ ಡೇಟಾ ನೆಟ್ ಸೌಲಭ್ಯ ಕಲ್ಪಿಸಿದಂತೆ ನಮ್ಮ ರಾಜ್ಯದಲ್ಲಿಯೂ ಸಹ ವಿದ್ಯಾರ್ಥಿಗಳಿಗೆ ಈ ವ್ಯವಸ್ಥೆಯ ಸೌಲಭ್ಯವನ್ನು ನೀಡಿದರೆ, ಇಲ್ಲಿನ ಗ್ರಾಮೀಣ ಭಾಗದ ಹಾಗೂ ಹಿಂದುಳಿದ ಪ್ರದೇಶದ ವಿಧ್ಯಾರ್ಥಿಗಳಿಗೆ ಅನುಕೂಲವಾಗಲಿದೆ‌. ಇದು ಶಿಕ್ಷಣ ಕ್ಷೇತ್ರ ಸಂಪೂರ್ಣವಾಗಿ ಆನಲೈನ್ ವಾಗಿದೆ. ಈ ನಿಟ್ಟಿನಲ್ಲಿ ಸರಕಾರ ರಾಜ್ಯದ ವಿದ್ಯಾರ್ಥಿಗಳಿಗೆ ಕನಿಷ್ಠ 2ಜಿಬಿ ಡೇಟಾ ಸೌಲಭ್ಯವನ್ನು ಉಚಿತವಾಗಿ ನೀಡಬೇಕೆಂದು ರಾಜ್ಯ ಸರಕಾರಕ್ಕೆ ಕರವೇ (ಪ್ರವೀಣ್ ಶೆಟ್ಟಿ) ಬಣದ ಕಲ್ಯಾಣ ಕರ್ನಾಟಕ ಪ್ರಧಾನ ಕಾರ್ಯದರ್ಶಿಯಾದ ಗೋಪಾಲ ನಾಟೀಕಾರ ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here