ಸಂಸತ್ ಅಧಿವೇಶನಕ್ಕೆ 50 ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡಿರುವೆ: ಡಾ. ಜಾಧವ್

0
557

ಕಲಬುರಗಿ: ಸೋಮವಾರದಿಂದ ಆರಂಭವಾಗಲಿರುವ ಸಂಸತ್ ಅಧಿವೇಶನದಲ್ಲಿ ನಾನು ಕ್ಷೇತ್ರಕ್ಕೆ ಸಂಬಂಧಿಸಿದ ಸುಮಾರು ೫೦ ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡಿರುವುದಾಗಿ ಕಲಬುರ್ಗಿ ಮೀಸಲು ಲೋಕಸಭಾ ಕ್ಷೇತ್ರದ ನೂತನ ಸದಸ್ಯ ಡಾ. ಉಮೇಶ್ ಜಾಧವ್ ಅವರು ಹೇಳಿದ್ದಾರೆ.

ಸಂಸತ್ ಅಧಿವೇಶನಕ್ಕೆ ಭಾಗವಹಿಸಲು ದೆಹಲಿಗೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಸಂಸತ್ ಅಧಿವೇಶನದಲ್ಲಿ ಮೊದಲು ಪ್ರಮಾಣ ವಚನ ಸ್ವೀಕರಿಸುವೆ. ಅಲ್ಲದೇ ಚುನಾವಣೆಯ ಸಂದರ್ಭದಲ್ಲಿ ನಾನು ಮತದಾರರಿಗೆ ಕೊಟ್ಟ ಭರವಸೆಗಳನ್ನು ಇಡೇರಿಸುವತ್ತ ಗಮನಹರಿಸುವೆ ಎಂದರು.

Contact Your\'s Advertisement; 9902492681

ಚುನಾವಣೆಯ ಸಂದರ್ಭದಲ್ಲಿ ಕಲಬುರ್ಗಿ ರೈಲ್ವೆ ವಿಭಾಗೀಯ ಕಚೇರಿ, ವಿಮಾನ ನಿಲ್ದಾಣ, ಹೊಸ ಕೈಗಾರಿಕೆಗಳ ಸ್ಥಾಪನೆ, ರೋಗಗ್ರಸ್ಥ ಕಾರ್ಖಾನೆಗಳ ಪುನಶ್ಚೇತನ, ಚಿಂಚೋಳಿ ಸಕ್ಕರೆ ಕಾರ್ಖಾನೆ ಪ್ರಾರಂಭ ಸೇರಿದಂತೆ ಹಲವಾರು ಭರವಸೆಗಳನ್ನು ಡಾ. ಜಾಧವ್ ಅವರು ನೀಡಿದ್ದು, ಪ್ರಸ್ತುತ ಅಧಿವೇಶನದಲ್ಲಿ ಯಾವ ಭರವಸೆಗಳು ಇಡೇರುತ್ತವೆ ಎಂಬ ಆಶಾಭಾವನೆಯನ್ನು ಕ್ಷೇತ್ರದ ಜನರು ಹೊಂದಿದ್ದಾರೆ.

ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ 371(ಜೆ) ಕಲಂ ಜಾರಿಗೆ ಬಂದಿದ್ದರೂ ಸಹ ಕೇಂದ್ರದಿಂದ ಅನುದಾನ ತರುವಲ್ಲಿ ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಚುನಾವಣೆಯ ಸಂದರ್ಭದಲ್ಲಿ ಡಾ. ಜಾಧವ್ ಅವರು ಟೀಕಿಸಿದ್ದು, ಈಗ ಸಂಸದರಾಗಿರುವುದರಿಂದ ೩೭೧(ಜೆ)ಯಡಿ ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಕೇಂದ್ರದಿಂದ ವಿಶೇಷ ಅನುದಾನ ದೊರಕಿಸುವ ಮುನ್ಸೂಚನೆಯನ್ನು ಸಹ ಅವರು ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here