ಕಲಬುರಗಿ: ನಗರದ ಡಾ. ಅಂಬೇಡ್ಕರ ಕಲಾ ವಾಣಿಜ್ಯ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಕರ್ನಾಟಕ ಪೀಪಲ್ಸ್ ಎಜುಕೇಶನ ಸೊಸೈಟಿ ಕಲಬುರಗಿ ಹಮ್ಮಿಕೊಂಡ ೭೨ ನೇ ಗಣರಾಜ್ಯೋತ್ಸವದ ನಿಮಿತ್ಯ ಹಮ್ಮಿಕೊಂಡ ವಿಶೇಷ ಉಪನ್ಯಾಸದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾ. ಐ.ಎಸ್. ವಿದ್ಯಾಸಾಗರ ಅವರು ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಭಾರತದ ಸಂವಿಧಾನ ರಚನೆಯಲ್ಲಿ ಬಾಬಾ ಸಾಹೇಬ ಡಾ. ಬಿ.ಆರ್ ಅಂಬೇಡ್ಕರ್ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ೩ ವರ್ಷಗಳ ಕಾಲ ಎಲ್ಲಾ ಕಷ್ಟಗಳನ್ನು ಸಹಿಸಿಕೊಂಡು ಸಂವಿಧಾನ ರಚನೆ ಮಾಡಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಪಡೆಯುವುದು ಎಷ್ಟು ಮುಖ್ಯವೋ ಅಷ್ಟೆ ಮುಖ್ಯ ಸಂವಿಧಾನ ರಚಿಸುವುದಾಗತ್ತು. ಸಂವಿಧಾನ ದೇಶದ ಶ್ರೇಷ್ಟ ಕಾನೂನು, ಸಂವಿಧಾನ ಮೀರುವ ಅಧಿಕಾರ ಯಾರಿಗೂ ಇಲ್ಲ ನಮ್ಮ ಸಂವಿಧಾನ ಅನುವಂಶಿಕೆ ಆಳ್ವಿಕೆಗೆ ಅಂತ್ಯ ಹೇಳಿದೆ.
ಸ್ವಾತಂತ್ರ್ಯ ಸಮಾನತೆ ಮತ್ತು ಭಾತ್ರುತ್ವದ ಪರಿಕಲ್ಪನೆಯ ಮೂಲಕ ಸಾರ್ವಭೌಮ, ಜಾತ್ಯಾತೀತ, ಪ್ರಜಾಪ್ರಭುತ್ವದ ದೇಶವಾಗಿದೆ. ಡಾ. ಅಂಬೇಡ್ಕರರವರು ಸಂವಿಧಾನದ ಮೂಲಕ ಸಾಮಾಜಿಕ, ಆರ್ಥಿಕ, ರಾಜಕೀಯ ಜೊತೆಗೆ ಪ್ರತಿಯೊಬ್ಬರಿಗೂ ವೈಚಾರಿಕ ಸ್ವಾತಂತ್ರ್ಯ ನೀಡಿದರು. ಭಾರತದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಿದರು. ಭಾರತದ ಸಂವಿಧಾನವು ಸರ್ವ ಕಾಲಕ್ಕು ಯೋಗ್ಯವಾದ ಮತ್ತು ವೈಜ್ಞಾನಿಕ ತಳಹದಿಯ ಮೇಲೆ ರೂಪಿತಗೊಂಡ ನಮ್ಮ ಸಂವಿಧಾನ ಎಂದು ಹೇಳಿದರು.
೭೨ ನೇ ಗಣರಾಜ್ಯೋತ್ಸವದ ಧ್ವಜಾರೋಹಣನ್ನು ನೇರವೇರಿಸಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕೆಪಿಇ ಸಂಸ್ಥೆಯ ಪ್ರಧಾನ ಕಾರ್ಯಾದರ್ಶಿಗಳಾದ ಡಾ. ಮಾರುತಿರಾವ ಡಿ. ಮಾಲೆ ಮಾತನಾಡುತ್ತ ಭಾರತ ದೇಶದ ಸಂವಿಧಾನವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಮೊದಲು ಡಾ. ಅಂಬೇಡ್ಕರರವರನ್ನು ಅರ್ಥಮಾಡಿಕೊಳ್ಳಬೇಕು ಭಾರತದ ಸಂವಿಧಾನವು ಬೌದ್ಧ ಧರ್ಮ್ಮದ ತಳಹದಿಯಲ್ಲಿ ರಚನೆಗೊಂಡಿದೆ ಎಂದರು.
ಸಮಾರಂಭದಲ್ಲಿ ಕೆಪಿಇ ಸಂಸ್ಥೆಯ ಸದಸ್ಯರಾದ ಶಾಂತಪ್ಪ ಸೂರನ, ಡಾ. ಅಂಬೆಡ್ಕರ ಕಾಲೇಜಿನ ನಿವೃತ್ತ ಪ್ರಾಚಾರ್ಯಾರಾದ ಡಾ. ಚಂದ್ರಶೇಖರ ಶೀಲವಂತ, ಸಿದ್ಧಾರ್ಥ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯಾರಾದ ಡಾ. ಚಂದ್ರಶೇಖರ ಹಾಗೂ ಕೆಪಿಇ ಸಂಸ್ಥೆಯ ವಿವಿಧ ಶಾಲಾ ಕಾಲೇಜಿನ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳು ಭಾಗವಹಿಸಿದರು.
ಕಾಲೇಜಿನ ಇತಿಹಾಸ ಪ್ರಾಧ್ಯಾಪಕರಾದ ಡಾ. ಗಾಂಧಿಜಿ ಮೋಳಕೆರೆ ರವರು ನಿರೂಪಿಸಿದರು. ಸ್ವಾಗತ ಮತ್ತು ಪ್ರಾಸ್ಥಾವಿಕ ನಾಗಭೂಷಣ, ಸುರೇಖಾ ಇಂಗನ್ ವಂದಿಸಿದರು.