ಸರಡಗಿ ಶ್ರೀಗಳಿಗೆ ಕರುನಾಡ ಪದ್ಮಶ್ರೀ ಪ್ರಶಸ್ತಿ ಪ್ರದಾನ

0
52

ಕಲಬುರಗಿ: ಕರ್ಮಭೂಮಿ ಕನ್ನಡ ಸಂಘ ಬಿಚ್ಚೋಲಿ, ಗೋವಾ ಹಾಗೂ ಬೆಂಗಳೂರಿನ ಕರ್ನಾಟಕ ಜಾಗೃತಿ ವೇದಿಕೆ ಜಂಟಿಯಾಗಿ ಗೋವಾದಲ್ಲಿ ಹೊರನಾಡು ಕನ್ನಡಿಗರ ಸಾಂಸ್ಕೃತಿಕ ಸಮಾವೇಶ ಮತ್ತು 11ನೇ ಸಾಂಸ್ಕೃತಿಕ ಸಮ್ಮೇಳನದಲ್ಲಿ ಜಿಲ್ಲೆಯ ಶ್ರೀನಿವಾಸ್ ಸರಡಗಿಯ ಶ್ರೀ ಗುರು ಚಿಕ್ಕವೀರೇಶ್ವರ್ ಸಂಸ್ಥಾನ ಮಠದ ಪೀಠಾಧಿಪತಿ ರೇವಣಸಿದ್ಧ ಶಿವಾಚಾರ್ಯ ಮಹಾಸ್ವಾಮೀಜಿ ಅವರಿಗೆ ಕರುನಾಡ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಹುಕ್ಕೇರಿಯ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮೀಜಿ ಸಾನಿಧ್ಯವನ್ನು ವಹಿಸಿದ್ದರು. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಶ್ರೀಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಕೇಂದ್ರದ ಆಯುಷ್ ಇಲಾಖೆಯ ಸಚಿವ ಶ್ರೀಪಾದ್ ನಾಯಕ್, ಗೋವಾ ವಿಧಾನಸಭೆಯ ಸಭಾಪತಿ ರಾಜೇಶ್ ಪಟ್ನೇಕರ್, ಕರ್ಮಭೂಮಿ ಕನ್ನಡ ಸಂಘದ ಹಣಮಂತರೆಡ್ಡಿ ಶಿರೂರ್, ಕರ್ನಾಟಕ ಜಾಗೃತ ವೇದಿಕೆ ಅಧ್ಯಕ್ಷ ಎಂ. ಶಿವಬಾಲ್ ಸ್ವಾಮಿ, ಗೋವಾ ಕನ್ನಡಿಗರ ಸಂಘದ ಅಧ್ಯಕ್ಷ ಸಿದ್ದಣ್ಣ ಮೇಟಿ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here