ಕಲಬುರಗಿ: ಭಾರತ ಸರ್ಕಾರವು ಸಣ್ಣ ಮತ್ತು ಅತಿ ಸಣ್ಣ ರೈತರ ಆದಾಯ ವೃದ್ಧಿಸಲು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN)” ಯೋಜನೆಯನ್ನು ಅಧಿಸೂಚಿಸಿದ್ದು, ಸದರಿ ಯೋಜನೆಯಡಿ ಭೂ ಒಡೆತನ ಹೊಂದಿರುವ ಪ್ರತಿ ರೈತರಿಗೆ ೩ ಕಂತುಗಳಲ್ಲಿ ವಾರ್ಷಿಕವಾಗಿ ಒಟ್ಟು 6000 ರೂ. ಗಳನ್ನು ನೀಡಲು ಉದ್ದೇಶಿಸಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅವರು ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಯ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ನಾಡ ಕಚೇರಿ / ಅಟಲ್ ಜೀ ಜನಸ್ನೇಹಿ ಕೇಂದ್ರಕ್ಕೆ ಅಥವಾ ಗ್ರಾಮ ಪಂಚಾಯತನಲ್ಲಿರುವ ಬಾಪೂಜಿ ಸೇವಾ ಕೇಂದ್ರಕ್ಕೆ ತೆರಳಿ ತಮ್ಮ ಬಳಿ ಲಭ್ಯವಿರುವ ಆಧಾರ ಕಾರ್ಡ, ಬ್ಯಾಂಕ ಪಾಸ ಪುಸ್ತಕ ಜಿರಾಕ್ಸ, ಜಮೀನಿನ ವಿವರ ಮುಂತಾದ ವಿವರಗಳನ್ನು ನಮೂದಿಸಿ ಸ್ವಯಂ ಘೋಷಣೆಯನ್ನು ನೀಡಬೇಕೆಂದು ಅವರು ಕೋರಿದ್ದಾರೆ.