ಹೈದರಾಬಾದ್ ಕರ್ನಾಟಕ

“ಅಕ್ಷರ ಬೀಜ ಬಿತ್ತೋಣ ಬನ್ನಿ” ವಿಚಾರ ವಿನಿಮಯ ಕಾರ್ಯಕ್ರಮ

ಕಲಬುರಗಿ: ಇಂದು ನಗರದ  ಕನ್ನಡ ಭವನದಲ್ಲಿ ಪ್ರಬುದ್ಧ ಭಾರತ ಸಂಘರ್ಷ ಸಮಿತಿ, ಯಶ್ವಂತ ರೂರಲ್ ಆ್ಯಂಡ್ ಅರ್ಬನ್ ಡೆವಲಪ್ಮೆಂಟ್ ಆರ್ಗನೈಸೇಶನ್ ವತಿಯಿಂದ ಆಯೋಜಿಸಿದ್ದ ಅಕ್ಷರ ಬೀಜ ಬಿತ್ತೋಣ ಬನ್ನಿ ವಿಚಾರ ವಿನಿಮಯ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮವನ್ನು ಸಾಹಿತಿಗಳಾದ ವೀರಪ್ಪ ತಾಳದವರ ಚಾಲನೆ ನೀಡಿ ಮಾತಮಾಡಿದ ಅವರು, ಹಿರಿಯರು ಹಾಕಿಕೊಟ್ಟ ಬುನಾದಿಯ ಮೇಲೆ ಮುಂದಿನ ಪೀಳಿಗೆಗೆ ತಲುಪುವಂತಹ ವಿಚಾರಗಳನ್ನು ಅವರ ದಾಟಿಯಲ್ಲಿ ರೂಪುಗೊಳಿಸುವ ಕೆಲಸ ಮಾಡಬೇಕಾಗಿದೆ. ನಾವು ಮೊದಲು ಒಗ್ಗಟ್ಟಾಗಿ ಸ್ಪಷ್ಟವಾದ ಗುರಿಯೊಂದಿಗೆ ಮುನ್ನಡೆಯಬೇಕಾಗಿದೆ. ಬರೀ ನೋವುಗಳನ್ನು ಮಾತ್ರ ಚರ್ಚಿಸದೆ ಅವುಗಳ ನಡುವೆ ಇರುವ ಪರಿಹಾರವನ್ನು ಹುಡುಕಿದಾಗ ಮಾತ್ರ ನಮ್ಮ ಬದುಕಿನ ಭವಿಷ್ಯವನ್ನು ಬದಲಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.

ರಂಗಾಯಣದ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ಸಿಗಲಿ

ಅತಿಥಿಗಳಾಗಿ ಆಗಮಿಸಿದ ರವಿಚಂದ್ರ ಅತ್ನೂರ್  ಮಾತನಾಡುತ್ತಾ ತಂದೆ-ತಾಯಿಗಳು ಬಹಳ ಕಷ್ಟಪಟ್ಟು ನಮಗೆ ಶಾಲೆ ಕಲಿಸುತ್ತಾರೆ ಅದರಂತೆ ನಾವು ಚೆನ್ನಾಗಿ ಓದಿ ವಿದ್ಯಾವಂತರಾಗಿ ಪ್ರಬುದ್ಧ ಭಾರತ ಕಟ್ಟಲಿಕ್ಕೆ ಪಣ ತೊಡಬೇಕು. ಬುದ್ಧ ಬಸವ ಬಾಬಾಸಾಹೇಬರ ಚಿಂತನೆಗಳನ್ನು ಫೋಟೋದಲ್ಲಿ ಮೆರವಣಿಗೆಯಲ್ಲಿ ಮಾಡುವುದಕ್ಕಿಂತ ಹೆಚ್ಚಾಗಿ ವಿಚಾರದಲ್ಲಿ ಮಾಡಬೇಕಾಗಿದೆ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದಂತಹ ವಿಟ್ಟಲ್ ಚಿಕಣಿ, ಭಾರತದಲ್ಲಿ ಸಾಕಷ್ಟು ಸಮಸ್ಯೆಗಳಿವೆ ಮಕ್ಕಳನ್ನು ಮೌಡ್ಯದಿಂದ ಹೊರತಂದು ಮಹಿಳಾ ಹಕ್ಕುಗಳ ಜಾಗೃತಿ ಮೂಡಿಸಿ ಅಕ್ಷರ ಕಲಿತು ನವಸಮಾಜ ನಿರ್ಮಿಸಬೇಕಾಗಿದೆ ಎಂದು ತಿಳಿಸಿದರು.

ITI ವಿದ್ಯಾರ್ಥಿಗಳಿಗೆ ದ್ವಿತೀಯ ವರ್ಷಕ್ಕೆ ವಿನಾಯಿತಿಗೆ ಆಗ್ರಹಿಸಿ ಪ್ರತಿಭಟನೆ

ಭವಾನಿ ಪ್ರಸಾದ್ ಪ್ರಸ್ತಾವಿಕವಾಗಿ ಮಾತನಾಡಿ, ವ್ಯಕ್ತಿಗಳಿಂದ ಮೂರು ರೀತಿಯ ಸಂಪನ್ಮೂಲಗಳನ್ನು ಅಪೇಕ್ಷೆ ಮಾಡುತ್ತೇವೆ. ಜ್ಞಾನ ಸಮಯ ಮತ್ತು ಹಣ. ಈ ಸಮಾಜಕ್ಕೆ ಮರಳಿ ನಾನೇನಾದರೂ ಕೊಡಬೇಕು ಎನ್ನುವ ನಿಟ್ಟಿನಲ್ಲಿ ಪ್ರಬುದ್ಧ ಸಮಾಜ ನಿರ್ಮಿಸಲಿಕ್ಕೆ ಹಣ ಇರುವವರು ಹಣ ಕೊಡಬಹುದು ಸಮಯ ಇರುವವರು ಸಮಯ ಕೊಡಲಾಗುವುದು, ಜ್ಞಾನ ಇರುವವರು ತಮ್ಮಲ್ಲಿರುವ ವಿದ್ಯೆಯನ್ನು ಇನ್ನೊಬ್ಬರಿಗೆ ತಿಳಿಸುವುದು ಈ ಒಂದು ಕಲ್ಪನೆಯಡಿಯಲ್ಲಿ ಪ್ರಬುದ್ಧ ಭಾರತ ಸಂಘರ್ಷ ಸಮಿತಿಯು ಮುಂದಾಗುತ್ತಿದೆ ಎಂದು ಹೇಳಿದರು.

ಇಂದಿನ ನವಪೀಳಿಗೆ ಅಕ್ಷರ ಕಲಿಯುವುದು ಬಹಳ ಅವಶ್ಯಕವಿದೆ ಈ ಸಮಾಜಕ್ಕೆ ತಿಳಿಸುವುದೇನೆಂದರೆ ನಮಗೆ ರೊಟ್ಟಿ ಕೊಡಬೇಡಿ ಅಕ್ಷರ ಕೊಡಿ ಎಂದು ಪೂಜಾ ಸಿಂಗ್ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿಕೊಂಡು ಮಾತಮಾಡಿದರು.

ಕನ್ನಡದ ಗಜಲ್ ಪರಂಪರೆ ಶ್ರೀಮಂತವಾಗಲಿ: ಪ್ರಾಧ್ಯಾಪಕ ಡಾ. ವಿಕ್ರಮ ವಿಸಾಜಿ

ಕೊನೆಯಲ್ಲಿ ಹಳ್ಳಿಗಳಿಗೆ ತೆರಳಿ ಪ್ರಾರಂಭಿಸಿದ 22 ಅಧ್ಯಯನ ಕೇಂದ್ರಗಳ ಪದಾಧಿಕಾರಿಗಳಿಗೆ ಕಲಿಕಾ ಸಾಮಗ್ರಗಳನ್ನು ವಿತರಿಸಲಾಯಿತು.

ಅಶ್ವಿನಿ ಮದನ್ ಕರ್ ನಿರೂಪಿಸಿದರು ರಾಹುಲ್ ಸಿಂಗೆ ಸ್ವಾಗತಿಸಿದರು ಸೈಬಣ್ಣ ವಂದಿಸಿದರು. ಲುಂಬಿಣಿ ಹೋಟೆಲ್ ನವರು ಊಟ ನೀಡಿದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

6 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

6 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

6 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

23 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago