ರಂಗಾಯಣದ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ಸಿಗಲಿ

1
28

ಕಲಬುರಗಿ: ಚಲನಚಿತ್ರದ ಕಲಾವಿದರು ಇನ್ನೊಬ್ಬರ ಅಣತಿಯಂತೆ ಕಾರ್ಯನಿರ್ವಹಿಸಿದರೆ ರಂಗ ಕಲಾವಿದರು ಸ್ವಾತಂತ್ರ್ಯವಾಗಿ ಅಭಿನಯಿಸುವ ಕಲಾವಿದರಾಗಿದ್ದಾರೆ. ದೇಶದ ತಳ ಸಮುದಾಯದ ಆಚಾರ-ವಿಚಾರ ಮತ್ತು ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವ ಇಂತಹ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಕರ್ನಾಟಕ  ಕಾರ್ಯನಿರತ  ಪತ್ರಕರ್ತರ ಸಂಘದ ರಾಜ್ಯ‌ ಸಮಿತಿ ಸದಸ್ಯ ದೇವಿಂದ್ರಪ್ಪ ಕಪನೂರ ಹೇಳಿದರು.

ಕಲಬುರಗಿ ರಂಗಾಯಣದಿಂದ ಶನಿವಾರ ಡಾ. ಸಿದ್ದಯ್ಯ ಪುರಾಣಿಕ್ ಸಾಂಸ್ಕೃತಿಕ ಸಮುಚ್ಛಯ ಆವರಣದಲ್ಲಿ 2020-21ನೇ ಸಾಲಿನ ವಿಶೇಷ ಘಟಕ ಯೋಜನೆಯಡಿಯಲ್ಲಿ ಸಾಮಾಜಿಕ ಅರಿವು ಸಂಸ್ಕೃತಿ ಉತ್ಸವದ ಅಂಗವಾಗಿ ಆಯೋಜಿಸಿದ ಜನಪರ-ಜಾನಪದ- ನೃತ್ಯ- ಕಲಾಮೇಳ ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ITI ವಿದ್ಯಾರ್ಥಿಗಳಿಗೆ ದ್ವಿತೀಯ ವರ್ಷಕ್ಕೆ ವಿನಾಯಿತಿಗೆ ಆಗ್ರಹಿಸಿ ಪ್ರತಿಭಟನೆ

ನಿರ್ಮಾಪಕ ಮತ್ತು ನಿರ್ದೇಶಕ ಹೇಳಿದಂತೆ ವಾಣಿಜ್ಯ ಚಲನಚಿತ್ರದಲ್ಲಿ ನಟಿಸುವ ಕಲಾವಿದರಿಗೂ ಹಾಗೂ ಗ್ರಾಮೀಣ ಜನರ ಧ್ವನಿಯಾಗಿ ಜಾನಪದ ಸಂಸ್ಕೃತಿ ಉಳಿಸುವ ರಂಗಾಯಣದ‌ ಕಲಾವಿದರಿಗೂ ಅಜಗಜಾಂತರದ ವ್ಯತ್ಯಾಸವಿದೆ ಎಂದು ಹೇಳಿ ತಳ ಸಮುದಾಯದ ಸಂಸ್ಕೃತಿ ಬಗ್ಗೆ ಮಾತಾಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ  ಜಾನಪದ ಕಲಾವಿದೆ ಶಿಲ್ಪಾ ಮುಡಬಿ ಅವರು ಮಾತನಾಡಿ, ಜಾನಪದ  ಎನ್ನುವುದು ಸಮಕಾಲಿನ ಸಂಸ್ಕೃತಿಯ ಪ್ರತೀಕ ಎಂದರು.

ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಸಚಿವರಿಗೆ ಮನವಿ

ರಂಗಾಯಣದ ನಿರ್ದೇಶಕ‌ ಪ್ರಭಾಕರ ಜೋಷಿ ಅವರ ಅಧ್ಯಕ್ಷತೆ‌ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಯುವ ಸಾಹಿತಿ ಎಚ್.ಎಸ್.ಬೇನಾಳ, ಹಿರಿಯ ಚಿತ್ರಕಲಾವಿದ ಬಸವರಾಜ ಎಲ್. ಜಾನೆ, ರಂಗಾಯಣದ ಆಡಳಿತಾಧಿಕಾರಿ ದತ್ತಪ್ಪ ಸಾಗನೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here