ಕಲಬುರಗಿ: ನಗರದ ಅಪ್ಪಾ ಪಬ್ಲಿಕ್ ಶಾಲೆ ಆವರಣದ ಶರಣಬಸವ ಸೆಂಟೆನೆರಿ ಹಾಲ್‌ನಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಣ ಸಂಘ ಜಿಲ್ಲಾ ಘಟಕ, ಉಪ ನಿರ್ದೇಶಕರ ಕಚೇರಿ, ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ ಕಾರ್ಯಕ್ರಮವನ್ನು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ್ ಸೇಡಂ ಉದ್ಘಾಟಿಸಿದರು. ವಿಧಾನ ಪರಿಷತ್ ಸದಸ್ಯ ಶಶೀಲ ಜಿ. ನಮೋಶಿ, ಅರುಣ ಶಹಾಪುರ, ಅಮರನಾಥ ಪಾಟೀಲ, ಶಿವಾನಂದ ಸಿಂಧನಕೇರಾ, ಸಂದೀಪ ಬೂಧಿಹಾಳ, ಎನ್.ಎಸ್.ದೇವರಕಲ್, ಮಹೇಶ ಬಸರಕೋಡ, ಸಂಜೀವಕುಮಾರ ಪಾಟೀಲ ಇದ್ದರು.