ಎಲ್ಲೆ ಹೋದರೂ ಶಹಾಬಾದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ-ವೆಂಕನಗೌಡ ಪಾಟೀಲ್

0
187

ಶಹಾಬಾದ:ನಗರದ ಡಿವಾಯ್‌ಎಸ್‌ಪಿ ವೆಂಕನಗೌಡ ಪಾಟೀಲ ಅವರು ವರ್ಗಾವಣೆಗೊಂಡ ಪ್ರಯುಕ್ತ ಸೋಮವಾರ ಡಿವಾಯ್‌ಎಸ್‌ಪಿ ಕಚೇರಿ ಹಾಗೂ ಸಾರ್ವಜನಿಕರಿಂದ ಆಯೋಜಿಸಲಾದ ಬಿಳ್ಕೋಡುಗೆ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಿ ಬಿಳ್ಕೋಡಲಾಯಿತು.

ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿಕೊಂಡು ಮಾತನಾಡಿದ ಡಿವಾಯ್‌ಎಸ್‌ಪಿ ವೆಂಕನಗೌಡ ಪಾಟೀಲ, ಸಾರ್ವಜನಿಕರ ಸೇವೆ ಮಾಡಲು ಪೊಲೀಸ್ ಇಲಾಖೆ ನಮಗೆ ನೀಡಿರುವ ದೊಡ್ಡ ಅವಕಾಶವನ್ನು ನಾವು ಸಮಪರ್ಕವಾಗಿ ಮಾಡುವುದು ನಮ್ಮ ಕರ್ತವ್ಯ. ನಗರದಲ್ಲಿ ಸಿಕ್ಕಂತಹ ಜನರ ಸಹಕಾರ ಹಾಗೂ ಇಲಾಖೆಯ ಮೇಲಾಧಿಕಾರಿಗಳ ಮಾರ್ಗದರ್ಶನ, ಸಿಬ್ಬಂದಿಯ ಸಹಕಾರದಿಂದ ಒಳ್ಳೆಯ ಕೆಲಸ ಮಾಡಿದ್ದೆನೆ ಎಂಬ ತೃಪ್ತಿ ಭಾವನೆ ನನಗಿದೆ. ಅದರಲ್ಲೂ ಸಾರ್ವಜನಿಕರ ಸಹಾಯ ಸಹಕಾರದಿಂದ ಶಹಾಬಾದ ನಗರದಲ್ಲಿ ಉತ್ತಮ ಸೇವೆ ಸಲ್ಲಿಸಲು ಸಹಕಾರಿಯಾಗಿದೆ.ನಾನು ಎಲ್ಲೆ ಹೋದರೂ ಶಹಾಬಾದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.

Contact Your\'s Advertisement; 9902492681

ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ ಮಾತನಾಡಿ, ಸುಮಾರು ಒಂದು ವರ್ಷಗಳ ಕಾಲ ಅಲ್ಪ ಅವಧಿಯಲ್ಲಿ ತಮ್ಮ ಅಮೋಘ ಸೇವೆಯ ಮೂಲಕ ದಕ್ಷ ಅಧಿಕಾರಿ ಹಾಗೂ ಸಾರ್ವಜನಿಕರೊಂದಿಗೆ ಬೆರೆಯುವ ಸರಳ ಸಜ್ಜನಿಕೆ ವ್ಯಕ್ತಿಯಾಗಿದ್ದರು.
ನೂತನ ಶಹಾಬಾದ ಡಿವಾಯ್‌ಎಸ್‌ಪಿ ಉಮೇಶ ಚಿಕ್ಕಮಠ, ಚಿತ್ತಾಪೂರ ಪಿಐ ಕೃಷ್ಣಪ್ಪ ಕಲ್ಲದೇವರು, ಡಾ.ಗುಂಡಣ್ಣ ಬಾಳಿ, ಅರುಣ ಪಟ್ಟಣಕರ್, ಮೃತ್ಯುಂಜಯ್ ಹಿರೇಮಠ, ಈರಣ್ಣ ಕಾರ್ಗಿಲ್, ಸಿದ್ಧಲಿಂಗ ಬಾಳಿ ಅನಿಸಿಕೆ ವ್ಯಕ್ತಪಡಿಸಿದರು.

ಡಿವಾಯ್‌ಎಸ್‌ಪಿ ಕೆ.ಬಸವರಾಜ, ಕಾಳಗಿ ಪಿಐ ವಿನಾಯಕ,ಕರ್ನಾಟಕ ತೊಗರಿ ಮಂಡಳಿ ಅಧ್ಯಕ್ಷ ಲಿಂಗಾರಡ್ಡಿ ಪಾಟೀಲ ವೇದಿಕೆಯ ಮೇಲಿದ್ದರು.

ಚಿತ್ತಾಪೂರ ಪಿಎಸ್‌ಐ ಮಂಜುನಾಥ ರೆಡ್ಡಿ, ಶಹಾಬಾದ ಪಿಎಸ್‌ಐ ತಿರುಮಲೇಶ, ಕಾಳಗಿ ಪಿಎಸ್‌ಐ ದಿವ್ಯ,ವಾಡಿ ಪಿಎಸ್‌ಐ ಶ್ರೀಶೈಲ ಅಂಭಾಟಿ, ಮಾಡಬೂಳ ಪಿಎಸ್‌ಐ ವಿಜಯಕುಮಾರ, ಗುಂಡಪ್ಪ ಕೋಗನೂರ, ನಾಗೇಂದ್ರ ತಳವಾರ,ಹಣಮಂತ ಅಷ್ಟಗಿ, ಯಾದವ ರಾಠೋಡ, ಮಹಾನಂದ,ಅಮರೇಶ, ಸತೀಶ ಪೂಜಾರಿ,ಸಿದ್ರಾಮ ಹಿರೊಳ್ಳಿ, ಸೇರಿದಂತೆ ನಗರದ ಸಾರ್ವಜನಿಕರು ಇದ್ದರು.

ಡಿವಾಯ್‌ಎಸ್‌ಪಿ ವೆಂಕನಗೌಡ ಪಾಟೀಲ ಅವರು ವರ್ಗಾವಣೆಗೊಂಡ ಪ್ರಯುಕ್ತ ಸೋಮವಾರ ಡಿವಾಯ್‌ಎಸ್‌ಪಿ ಕಚೇರಿ ಹಾಗೂ ಸಾರ್ವಜನಿಕರಿಂದ ಆಯೋಜಿಸಲಾದ ಬಿಳ್ಕೋಡುಗೆ ಸಮಾರಂಭದಲ್ಲಿ ನೂತನ ಶಹಾಬಾದ ಡಿವಾಯ್‌ಎಸ್‌ಪಿ ಉಮೇಶ ಚಿಕ್ಕಮಠ ಮಾತನಾಡಿದರು.

ಸನ್ಮಾನ ಸ್ವೀಕರಿಸಿಕೊಂಡು  ಡಿವಾಯ್‌ಎಸ್‌ಪಿ ವೆಂಕನಗೌಡ ಪಾಟೀಲ ಮಾತನಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here