ನವದೆಹಲಿ: ಐದು ರಾಜ್ಯಗಳಲ್ಲಿ ನಡೆಯಲಿರುವ ವಿಧಾನ ಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಹಿತರಕ್ಷಣೆ ಹಿನ್ನೆಯಲ್ಲಿ ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ರಾಷ್ಟ್ರೀಯ ಸಮಿತಿ ಆರು ಸದಸ್ಯರ ಸಮಿತಿ ರಚಿಸಿದ್ದು, ಅದರಲ್ಲಿ ಕೌನ್ಸಿಲ್ ಸಮಿತಿಯ ಉತ್ತರ ಕರ್ನಾಟಕ ಕಾರ್ಯದರ್ಶಿಯಾಗಿರುವ ಡಾ. ಮೊಹ್ಮದ್ ಅಜಗರ್ ಚುಲಬುಲ್ ಅವರಿಗೆ ಆರು ರಾಜ್ಯಗಳ ಸಂಚಾಲಕರಾಗಿ ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ ಡಾ. ಮಂಜೂರ್ ಆಲಂ ಅವರು ನೇಮಕ ಮಾಡಿ ಆದೇಶ ಹೋರಡಿಸಿದ್ದಾರೆ.
ವೈದ್ಯಾಧಿಕಾರಿ ಅಮಾನತ್ತಿಗೆ ಆಗ್ರಹಿಸಿ ಪ್ರತಿಭಟನೆ
ಪಚ್ಛಿಮ್ ಬಂಗಾಲ್, ಆಸ್ಸಾಂ, ತಮಿಳ ನಾಡು,ಕೇರಳ ಹಾಗೂ ಪುದುಚರಿ ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಯ ಕುರಿತು ವಿಸ್ತಾರವಾದ ಸಿದ್ಧ ಪಡಿಸಿ ಕೇಂದ್ರ ಸಮಿತಿಗೆ ವರದಿ ಸಲ್ಲಿಸಿ, ರಾಜ್ಯಗಳಲ್ಲಿ ಜಾತ್ಯಾತೀತ ರಾಜಕೀಯ ಪಕ್ಷಗಳ ಜೊತೆ ಹೊಂದಾಣಿಕೆ ಅಲ್ಪಸಂಖ್ಯಾತರ ಸಮಸ್ಯೆ ಹಾಗೂ ಇನ್ನೀತರ ವಿಷಯ ಬಗ್ಗೆ ಕಾಳಜಿ ವಹಿಸಿ, ಬಿಜೆಪಿ ಹಾಗೂ ಬೆಂಬಲಿತ ಪಕ್ಷ ಅಧಿಕಾರ ಬರದ ರೀತಿಯಲ್ಲಿ ನೋಡಿಕೊಳಲ್ಲು ಸೂಚಿಸಿರುವುದಾಗಿ ಅವರು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.
ಕರ್ತವ್ಯಲೋಪ ಇಬ್ಬರು ಅಧಿಕಾರಿಗಳು ಅಮಾನತು
ಯಾಸೀನ್ ಅಲಿ ಉಸ್ಮಾನ್ , ಅನೀಸರ ರಹೇಮಾನ್ ಖಾಸ್ಮಿ ಬಿಹಾರ, ಮೊಹಮ್ಮದ್ ಜಾವಿದ್ ಇಕ್ಬಾಲ್ ಪಟೇಲ್ ಪಟನಾ, ಶೇಖ್ ನಿಜಾಮದ್ದೀನ್, ಹಾಗೂ ಬೆಂಗಳೂರಿನ ಸೈಯದ್ ಶಾಹಿದ್ ಅಹ್ಮದ್ ಸಮಿತಿಗೆ ನೇಮಕ ಮಾಡಿ ಪ್ರಕಟಣೆ ನೀಡಿದ್ದಾರೆ.