ಸುರಪುರ: ನಗರದ ಐತಿಹಾಸಿಕ ಸೂಗುರೇಶ್ವರ ದೇವಸ್ಥಾನದಲ್ಲಿ ಗಾನಯೋಗಿ ಡಾ: ಪಂಡೀತ ಪುಟ್ಟರಾಜ ಗವಾಯಿಗಳ ೧೦೭ನೇ ಜನುಮ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಪಂಡೀತ ಪುಟ್ಟರಾಜ ಗವಾಯಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು.ನಂತರ ದೇವಸ್ಥಾನದ ಶಿವಶರಣಯ್ಯ ಸ್ವಾಮಿ ಬಳ್ಳೂಂಡಗಿಮಠ ಮಾತನಾಡಿ,ಭಾರತದ ಸಂಗೀತ ಲೋಕದಲ್ಲಿ ತಮ್ಮದೆ ಆದ ಛಾಪು ಮೂಡಿಸಿದ ಗವಾಯಿಗಳು ಅಂಧ ಅನಾಥರ ಬಾಳಿಗೆ ಬೆಳಕಾಗಿ ಅನ್ನ ಅರಿವು ಮತ್ತು ಸಂಗೀತ ದಾಸೋಹಿಗಳಾಗಿ ಚಿರವಾಗಿದ್ದಾರೆ ಎಂದರು.
ನಂತರ ಅನೇಕ ಕಲಾವಿದರಿಂದ ಸಂಗೀತ ಕಾರ್ಯಕ್ರಮವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಕಲಾವಿದರಾದ ಶಿವಶರಣಯ್ಯಸ್ವಾಮಿ ಸಿದ್ದಯ್ಯಸ್ವಾಮಿ ಮೋಹನ ಮಾಳದಕರ್ ಪ್ರಾಣೇಶ ಕುಲಕರ್ಣಿ ಚಂದ್ರಹಾಸ ಮಿಠ್ಠಾ ಉಮೇಶ ಯಾದವ್ ಸುರೇಶ ಅಂಬುರೆ ಮಹಾಂತೇಶ ಶಹಾಪುರಕರ್, ಪೊಲೀಸ್ ಶರಣು ಮಾಲಗತ್ತಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.ರಮೇಶ ಕುಲ್ಕರ್ಣಿ ನಿರೂಪಿಸಿದರು,ಚಂದ್ರಹಾಸ ಮಿಠ್ಠಾ ವಂದಿಸಿದರು.