ಬಿಸಿ ಬಿಸಿ ಸುದ್ದಿ

ಕಲಬುರಗಿಗೆ ಸರಕಾರದಿಂದ ಮಲತಾಯಿ ಧೋರಣೆ: ಸಮಿತಿ ಆಕ್ರೋಶ

ಕಲಬುರಗಿ: ೧೯೮೪ ರಲ್ಲಿ ಸರೀನ್ ಕಮಿಟಿ ವರದಿ ರೈಲ್ವೆ ಡಿವಿಜನ್ ಕಲಬುರಗಿಗೆ ನೀಡಲು ಶಿಫಾರಸ್ಸು ಮಾಡಿದರೂ ಸಹ ನಿರ್ಲಕ್ಷ ಮಾಡುತ್ತಾ ಬರಲಾಗುತ್ತಿದೆ.  ಮಲ್ಲಿಕಾರ್ಜುನ ಖರ್ಗೆಯವರು ರೈಲ್ವೆ ಮಂತ್ರಿಯಿದ್ದಾಗ  ರೈಲ್ವೆ ವಿಭಾಗೀಯ ಕಚೇರಿ ಸುಸೂತ್ರವಾಗಿ ಆಗುವ ವಾತವರಣ ಇದ್ದರೂ ಸಹ ಆಗಲಿಲ್ಲ. ಪ್ರಸ್ತುತ ಮೋದಿ ಸರಕಾರ ಕಲ್ಯಾಣ ಕರ್ನಾಟಕ ಭಾರತ ದೇಶದಲ್ಲಿಯೇ ಇದೆಯೋ ಇಲ್ಲವೋ ಎಂಬಂತೆ ನಮ್ಮ ಪ್ರದೇಶಕ್ಕೆ ಮಲತಾಯಿ ಧೋರಣೆ ಮಾಡುತ್ತಿರುವುದು ಕಲ್ಯಾಣ ಕರ್ನಾಟಕ ಜನಮಾನಸಕ್ಕೆ ಅತೀವ ನೋವುಂಟಾಗಿದೆ ಎಂದು ಹೈದ್ರಾಬಾದ್ ಕರ್ನಾಟಕ ಸಂಘರ್ಷ ಸಮಿತಿ ಸಂಸ್ಥಾಪಕ ಅಧ್ಯಕ್ಷರಾದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

೨೦೨೧ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಕಲಬುರಗಿಗೆ ರೈಲ್ವೆ ವಿಭಾಗೀಯ ಕಚೇರಿ ನೀಡುವ ಬಗ್ಗೆ ಪ್ರಸ್ತುತ ಕೇಂದ್ರ ಸರಕಾರದ ಮುಂದೆ  ಯಾವುದೇ ಪ್ರಸ್ತಾವನೆ ಇಲ್ಲ ಎಂದು ರೈಲ್ವೆ ಮಂತ್ರಿಗಳು ನಮ್ಮ ಬಹುದಿನಗಳ ಕನಸಿಗೆ ಪರೋಕ್ಷವಾಗಿ ತಿರಸ್ಕರಿಸಿದ್ದಾರೆ. ಅದರಂತೆ ಇಂದು ಕೇಂದ್ರ ಆರೋಗ್ಯ ಸಚಿವರು  ಪ್ರಶ್ನೋತ್ತರ ವೇಳೆಯಲ್ಲಿ ಕರ್ನಾಟಕಕ್ಕೆ ಮಂಜೂರು ಮಾಡಲಾದ ಏಮ್ಸ್ ರಾಜ್ಯ ಸರಕಾರ ಶಿಫಾರಸ್ಸು ಮಾಡಿರುವಂತೆ ಹುಬ್ಬಳ್ಳಿ-ಧಾರವಾಡಕ್ಕೆ ನೀಡುವ ಬಗ್ಗೆ ಉತ್ತರ ನೀಡಿರುವುದು ನಮ್ಮ ಭಾಗದ ಬಿ.ಜೆ.ಪಿ. ಮತ್ತು ಕಾಂಗ್ರೆಸ್ ನಾಯಕರಿಗೆ ಮುಖಭಂಗದ ವಿಷಯವಲ್ಲದೆ ಇವರಿಗೆ ಮುಖಂಡರನ್ನಾಗಿ ಮಾಡಿ ಸಂಸತ್ತಿಗೆ ಕಳಿಸಿರುವ ಮತದಾರರಿಗೆ ಭರಿಸಲಾರದ ನೋವುಂಟಾಗಿದೆ ಎಂದು ತಿಳಿಸಿದ್ದಾರೆ.

ವಕೀಲರ ಕಲ್ಯಾಣ ಅಭೀವೃಧ್ಧಿ ಸಂಘ ಸುರಪುರ ಅಸ್ತಿತ್ವಕ್ಕೆ

ಅಷ್ಟೇ ಅಲ್ಲದೆ ಈ ವಿಷಯಗಳನ್ನು ತೆಗೆದುಕೊಂಡು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಹೋರಾಟ ಮಾಡುತ್ತಿರುವ ಸಾಮಾಜಿಕ ಹೋರಾಟಗಾರರಿಗೆ ಅತೀವ ದುಃಖವಾಗಿದೆ. ಸದರಿ ಗಂಭೀರ ವಿಷಯಗಳ ಬಗ್ಗೆ ಈಗಾಗಲೇ ಆಡಳಿತರೂಢ ಬಿ.ಜೆ.ಪಿ. ಪಕ್ಷ ಮುಖ್ಯಮಂತ್ರಿಗಳಲ್ಲಿ ಸರ್ವ ಪಕ್ಷಗಳ ನಿಯೋಗ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಇದಕ್ಕೆ ಗಂಭೀರವಾದ ವಿಷಯವಾಗಿ ಪರಿಗಣಿಸಲು ಸರ್ವ ಪಕ್ಷ ನಾಯಕರಲ್ಲಿ ಮತ್ತು ಏಳು ಜಿಲ್ಲೆಗಳ ಸಂಸದರು, ಶಾಸಕರಲ್ಲಿ ಸಮಿತಿ ಒತ್ತಾಯಿಸುತ್ತದೆ.

ರಾಜ್ಯ ಸರಕಾರ ನೋವಿಗೆ ಸಕರಾತ್ಮಕವಾಗಿ ಸ್ಪಂದಿಸದಿದ್ದರೆ, ಮುಂದಿನ ದಿನಗಳಲ್ಲಿ ಯಾವ ಗತ್ಯಂತರವಿಲ್ಲದೆ ಕಲ್ಯಾಣ ಕರ್ನಾಟಕದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಸಮಿತಿ ಪರವಾಗಿ ಎಚ್ಚರಿಕೆ ನೀಡಿದ್ದಾರೆ.

emedialine

Recent Posts

ಕೆ. ನೀಲಾ ಸಿಪಿಐ(ಎಂ) ಪಕ್ಷದ ಕಲಬುರಗಿ ಕಾರ್ಯದರ್ಶಿಯಾಗಿ ಪುನರಾಯ್ಕೆ

ಕಲಬುರಗಿ: ಸಿಪಿಐ(ಎಂ) ಪಕ್ಷವು ನವೆಂಬರ್ 24,25 ನವೆಂಬರ್ ರಂದು ಎರಡು ದಿನಗಳ ಕಾಲ ಜಿಲ್ಲಾ ಸಮ್ಮೇಳನ ನಡೆದು ಜಿಲ್ಲಾ ಕಾರ್ಯದರ್ಶಿಯಾಗಿ…

1 min ago

3 ಲಕ್ಷ ವೆಚ್ಚದ ಉದ್ಯಾನವನ ಅಭಿವೃದ್ಧಿ ಕಾಮಗಾರಿಗೆ ಪಾಲಿಕೆ ಸದಸ್ಯ ವೀರಣ್ಣ ಹೊನ್ನಳ್ಳಿ ಚಾಲನೆ

ಕಲಬುರಗಿ: ಜಯನಗರ ಬಡಾವಣೆಯ ಹಳೆ ಸಾರ್ವಜನಿಕ ಉದ್ಯಾನವನ ಅಭಿವೃದ್ಧಿಗಾಗಿ ಕಲಬುರಗಿ ಬೀದರ ಜಿಲ್ಲೆಯ ವಿಧಾನ ಪರಿಷತ್ ಸದಸ್ಯರಾದ ಡಾ.ಬಿ.ಜಿ.ಪಾಟೀಲ ಇವರ…

5 mins ago

ಬಿಜೆಪಿ ಕಚೇರಿಯಲ್ಲಿ ಸಂವಿಧಾನ ದಿನ ಆಚರಣೆ

ಕಲಬುರಗಿ: ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಸಂವಿಧಾನ ದಿನ ಆಚರಣೆ ಕಾರ್ಯಕ್ರಮ ವನ್ನು ಸವಿಧಾನ ಪ್ರತಿಯನ್ನು ಓದುವ ಮೂಲಕ ಸವಿಧಾನ ಶಿಲ್ಪಿ…

9 mins ago

ಸೇಡಂ ಮತಕ್ಷೇತ್ರದಲ್ಲಿ ನಡೆದ 4 ಗ್ರಾ.ಪಂ ಉಪಚುನಾವಣೆ ಬಿಜೆಪಿ ಗೆಲುವು

ಕಲಬುರಗಿ : ಸೇಡಂ ಮತಕ್ಷೇತ್ರದ ವ್ಯಾಪ್ತಿಯ ಕರ್ಚಖೇಡ, ಕಾನಗಡ್ಡ,ಮದನ, ಮುಧೋಳ ಗ್ರಾ.ಪಂ‌‌ನ ಉಪ ಚುನಾಚುನಾವಣೆಯಲ್ಲಿ ಬಿ.ಜೆ.ಪಿ ಬೆಂಬಲಿತ ಅಭ್ಯರ್ಥಿಗಳು‌ ಜಯ…

15 mins ago

ವಾಡಿ: ಬಿಜೆಪಿ ಕಛೇರಿಯಲ್ಲಿ 75 ನೇ ಸಂವಿಧಾನ ಸಮರ್ಪಣಾ ದಿನಾಚರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ 75ನೇ ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್…

19 mins ago

ನಿಧನ ವಾರ್ತೆ: ಅಲ್ ಹಜ್ ಶಮಶೋದ್ದಿನ ಬೀರಗಿ ಪಟೇಲ್

ಚಿಂಚೋಳಿ: ತಾಲೂಕಿನ‌ ಸಾಲೆಬೀರನಳ್ಳಿ ಗ್ರಾಮದ ನೀವೃತ ಮುಖ್ಯಗುರುಗಳಾದ ಅಲ್ ಹಜ್ ಶಮಶೋದ್ದಿನ ಬೀರಗಿ ಪಟೇಲ್ (86) ಮಂಗಳವಾರ ನಿಧನರಾದರು. ಅವರಿಗೆ…

22 mins ago