ಸುರಪುರ: ನಮ್ಮ ಸುರಪುರ ನ್ಯಾಯಾಲಯದಲ್ಲಿನ ಅನೇಕ ಜನ ಹಿರಿಯ ನ್ಯಾಯವಾದಿಗಳ ಅಭಿಪ್ರಾಯದಂತೆ ಈಗ ವಕೀಲರ ಕಲ್ಯಾಣ ಅಭೀವೃಧ್ಧಿ ಸಂಘ ಸುರಪುರ ಅಸ್ತಿತ್ವಕ್ಕೆ ಬಂದಿದೆ ಎಂದು ಹಿರಿಯ ನ್ಯಾಯವಾದಿ ಹಾಗು ಸಂಘದ ಅಧ್ಯಕ್ಷರಾದ ವಿ.ಎಸ್.ಜೋಷಿ ತಿಳಿಸಿದರು.
ಈ ಕುರಿತು ವಿವರಣೆ ನೀಡಿದ ಅವರು,ಈಗಾಗಲೇ ಮಾರ್ಚ್ ೩ನೇ ತಾರೀಖಿನಂದೆ ವಕೀಲರ ಕಲ್ಯಾಣ ಅಭಿವೃಧ್ಧಿ ಸಂಘ ಸುರಪುರ ನೊಂದಣಿಯಾಗಿದ್ದು,ಇದರಲ್ಲಿ ೪೪ ಜನ ವಕೀಲರು ಇರುವುದಾಗಿ ತಿಳಿಸಿದರು.
ವಿದ್ಯಾರ್ಥಿಗಳು ಜೀವನದಲ್ಲಿ ಪಾಠದ ಜೊತೆ ಕೌಶಲ್ಯ ಅಭಿವೃದ್ಧಿಪಡಿಸಿಕೊಳ್ಳಬೇಕು: ಡಾ. ಶಾಸ್ತ್ರಿ
ಅಲ್ಲದೆ ಇಂದು ನಮ್ಮ ಸುರಪುರ ನ್ಯಾಯಾಲಯದ ಎಲ್ಲಾ ನ್ಯಾಯಾಧೀಶರಿಗೆ ಸಂಘ ಅಸ್ತಿತ್ವಕ್ಕೆ ಬಂದಿರುವ ಕುರಿತು ಮಾಹಿತಿಯನ್ನು ನೀಡಿ ನಮ್ಮ ಸಂಘಕ್ಕೆ ಪ್ರತ್ಯೇಕ ಕಾರ್ಯಾಲಯದ ಕೋಣೆ ಮತ್ತಿತರೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮನವಿ ಸಲ್ಲಿಸಲಾಗಿದೆ.ನಮ್ಮ ಮನವಿಯನ್ನು ಜಿಲ್ಲಾ ನ್ಯಾಯಾಧೀಶರಿಗೆ ಕಳುಹಿಸಿ,ಜಿಲ್ಲಾ ನ್ಯಾಯಾಧೀಶರಿಂದ ಮಾರ್ಗದರ್ಶನ ಪಡೆದು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ನಂತರ ನ್ಯಾಯಾಲಯದ ಮುಂದೆ ಹಿರಿಯ ನ್ಯಾಯವಾದಿಗಳಾದ ಎಸ್.ಎಮ್.ಕನಕರಡ್ಡಿ ರಾಮನಗೌಡ ಸುಬೇದಾರ ಅರವಿಂದ ಕುಮಾರ ವಿ.ಸಿ.ಪಾಟೀಲ್ ಎಸ್.ವ್ಯಾಸರಾಜ್ ಬಸವರಾಜ ಅನಸೂರು ಉಪಾಧ್ಯಕ್ಷ ಶಿವಾನಂದ ಆವಂಟಿ ಅಬ್ದುಲ್ ಜಲೀಲ್ ಪ್ರಧಾನ ಕಾರ್ಯದರ್ಶಿ ದೇವಪ್ಪ ಜೋಗಿನ್ ಜಂಟಿ ಶಿವಶರಣ ಟಿ. ಖಜಾಂಚಿ ಮದುಸೂಧನ ಸೇರಿದಂತೆ ಎಲ್ಲಾ ವಕೀಲರು ಒಗ್ಗಟ್ಟಿನ ಸಂಕೇತ ಪ್ರದರ್ಶಿಸಿದರು.