ಸುರಪುರ: ನಗರದ ರಂಗಂಪೇಟೆಯ ದೊಡ್ಡ ಬಾವಿಯ ಅಂಗನವಾಡಿ ಕೇಂದ್ರದಲ್ಲಿ ಆವರಣದಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಜನ ಜಾಗೃತಿ ಅಭಿಯಾನ ಮತ್ತು ಕರೋನಾ ಲಸಿಕೆ ವಿತರಣೆ ಮತ್ತು ಆರೋಗ್ಯ ತಪಾಸಣೆಯ ಶಿಬರ ನಡೆಸಲಾಯಿತು.
ಶಿಬಿರದಲ್ಲಿ ಭಾಗವಹಿಸಿದ ತಾಲೂಕು ಆಸ್ಪತ್ರೆಯ ವೈದ್ಯರಾದ ಡಾ.ಓಂಪ್ರಕಾಶ ಅಂಬುರೆ ಮಾತನಾಡಿ,ಬಹಳಷ್ಟು ಜನರಿಗೆ ಕರೋನಾ ಲಸಿಕೆಯಿಂದ ಅಡ್ಡ ಪರಿಣಾಮಗಳು ಆಗುತ್ತವೆ ಎಂಬ ತಪ್ಪುಕಲ್ಪನೆಯಲ್ಲಿದ್ದಾರೆ ಇದು ತಪ್ಪುತಿಳುವಳಿಕೆಯಿಂದಾಗಿ ಲಸಿಕೆ ಪಡೆಯುವುದರಲ್ಲಿ ಹಿಂದೇಟು ಹಾಕುತ್ತಿದ್ದಾರೆ ಇದು ಸರಿಯಾದುದಲ್ಲಾ ಕರೋನಾ ಲಸಿಕೆಯನ್ನು ಸಾರ್ವಜನರಿಗೆ ಕೂಡುವ ಮೋದಲೆ ಸಾಕಷ್ಟು ಬಾರಿ ಪರೀಕ್ಷೀಸಿ ಜನರಿಗೆ ನೀಡಲಾಗುತ್ತಿದೆ ಇದರಿಂದಾಗ ಯಾವುದೆ ಅಡ್ಡ ಪರಿಣಾಮ ವಿಲ್ಲಾ ಜನರು ನಿರ್ಭಯದಿಂದ ಈ ಲಸಿಕೆ ಪಡೆಯಬಹುದಾಗಿದೆ ಎಂದು ಹೇಳಿದರು.
ಮಾರ್ಚ್ ನಂತರ ಹತ್ತು ದಿನ ನೀರು ಬಿಡಿ: ಮಾಜಿ ಶಾಸಕ ಆರ್‌ವಿಎನ್ ವಿನಂತಿ
ಜನರ ಆರೋಗ್ಯದ ಬಗ್ಗೆ ಸರ್ಕಾರವು ಬಹಳಷ್ಟು ಜಾಗೃತಿವಹಿಸಿ ಹಲವುಬಾರಿ ಪರೀಕ್ಷಿಸಿ ಈ ಲಸಿಕೆಯನ್ನು ಜನರಿಗೆ ನೀಡಬಹುದೆಂದು ವಿಜ್ಞಾನಿಗಳು ತಿಳಿಸಿದನಂತರವೆ ಜನರಿಗೆ ನೀಡಲಾಗುತ್ತಿದೆ ಇದರ ಬಗ್ಗೆ ಯಾವುದೆ ಕಾರಣಕ್ಕು ಜನರು ತಪ್ಪುಬಾವಿಸಿ ಲಸಿಕೆ ಪಡೆಯದೆ ಉಳಿಯಬಾರದು ಎಂದು ಜನರಲ್ಲಿ ಮನವಿಮಾಡಿದರು.
ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ೧೫೭ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ನಡೆಸಲಾಯಿತು. ಮುಖ್ಯವಾಗಿ ಸಕ್ಕರೆ ಕಾಯಿಲೆ, ರಕ್ತದೊತ್ತಡ ಇನ್ನಿತರ ಕಾಯಿಲೆಗಳ ತಪಾಸಣೆಯನ್ನು ಕೂಡ ನಡೆಸಲಾಯಿತು.
ಹೆದ್ದಾರಿ ತಡೆದು ಪ್ರತಿಭಟನೆ: ಬಸ್ ನಿಲ್ಲಿಸಿ ಕಾಲ್ನಡಿಗೆ ತಪ್ಪಿಸಿ: ವಿದ್ಯಾರ್ಥಿಗಳ ಆಗ್ರಹ
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಮಹ್ಮದ್ ಕಮುರುದ್ದೀನ್, ಡಾ.ಅಲ್ಲಾವುದ್ದೀನ್, ಜೇಜಮ್ಮ, ಸುನೀತಾ, ಸಿದ್ರಾಮ ಎಲಿಗಾರ ವೇದಿಕೆಯಲ್ಲಿದ್ದುರು. ಸಂಗಣ್ಣ ಚಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಉಮಾಶಂಕರ ದೀಕ್ಷಿತ್, ಅಶೋಕ,ಸೈಯದ್, ಸುನೀತಾ ಅಯ್ಯಮ್ಮ, ಬಸವರಾಜ ,ವೆಂಕಟೇಶ ಸೇರಿದಂತೆ ಇನ್ನಿತರರಿದ್ದರು ಹಣಮಂತ ನೀರೋಪಿಸಿ ವಂದಿಸಿದರು.