ಬಿಸಿ ಬಿಸಿ ಸುದ್ದಿ

ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಪಕ್ಷಾತೀತ ಹೋರಾಟಕ್ಕೆ ಕೋರ ಕಮಿಟಿ ಸಭೆ

ಕಲಬುರಗಿ: ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರ ಅಧ್ಯಕ್ಷತೆಯಲ್ಲಿ ಇಂದು ದಿನಾಂಕ : 20.03.2021 ರಂದು ಸಾಯಂಕಾಲ ಹಿಂದಿ ಪ್ರಚಾರ ಸಭಾದ ಸಭಾಂಗಣದಲ್ಲಿ ಸಮಿತಿಯ ಕೋರ್ ಕಮಿಟಿಯ ಸಭೆ ಜರುಗಿತು.

ಈ ಸಭೆಯಲ್ಲಿ ಸಮಿತಿಯ ಮುಖಂಡರುಗಳಾದ ಮನೀಷ್ ಜಾಜು, ಲಿಂಗರಾಜ ಸಿರಗಾಪೂರ, ಸಿದ್ದಾರೆಡ್ಡಿ ಬಲಕಲ್, ಶಿವಲಿಂಗಪ್ಪ ಬಂಡಕ್, ಮಹ್ಮದ ಮಿರಾಜೋದ್ದೀನ್, ಸುನೀಲ್ ಕುಲಕರ್ಣಿ, ಗುರುರಾಜ ಭಂಡಾರಿ, ಇಂದುಧರ ಜಾಧವ, ಆನಂದ ದೇಶಪಾಂಡೆ, ಅಬ್ದುಲ ರಹೀಮ್, ಎಚ್.ಎಂ. ಹಾಜಿ, ಭದ್ರಶೆಟ್ಟಿ, ಅಣ್ಣಾರಾವ ಹೆಬ್ಬಾಳ, ಕಲ್ಯಾಣರಾವ ಪಾಟೀಲ್, ಚಂದ್ರಶೇಖರ ಮೇಕಿನ್, ಅಶೋಕ ಗುರುಜಿ, ಅಸ್ಲಂ ಚೌಂಗೆ, ಜ್ಞಾನ ಮಿತ್ರ ಸ್ಯಾಮ್ಯುವೆಲ್, ಸಂಧ್ಯಾರಾಜ್, ವೀರೇಶ ಪುರಾಣಿಕ್, ಬಸವರಾಜ ಚಿಟಗುಪ್ಪಿ, ಡಾ.ಮಾಜಿದ್ ದಾಗಿ, ಮಲ್ಲಿನಾಥ ಸಂಗಶೆಟ್ಟಿ, ಮಖ್ಬೂಲ್ ಪಟೇಲ್, ಪ್ರಭು ಪಾಟೀಲ್, ಗುರುಲಿಂಗಪ್ಪ ಟೆಂಗಳಿ, ಸಾಜಿದ್ ಅಲಿ ರಂಜೋಲಿ, ಶಾಂತಪ್ಪ ಕಾರಭಾಸಗಿ, ಬಾಬಾ ಫಕ್ರೋದ್ದೀನ್ ಮುಂತಾದವರು ಮಾತನಾಡಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಅಭಿವೃದ್ಧಿ ವಿಷಯದಲ್ಲಿ ಆಗುತ್ತಿರುವ ಮಲತಾಯಿ ಧೋರಣೆ ಮತ್ತು ನಿರ್ಲಕ್ಷತನದ ಬಗ್ಗೆ ಎಲ್ಲರೂ ಖಂಡಿಸಿದರು. ಮುಂದಿನ ಹೋರಾಟ ಪಕ್ಷಾತೀತವಾಗಿ ಏಳು ಜಿಲ್ಲೆಗಳಲ್ಲಿ ಸಂಘಟಿತ ಹೋರಾಟ ನಡೆಸಲು ಮುಂದಿನ ರೂಪ ರೇಷೆಗಳನ್ನು ಹಮ್ಮಿಕೊಳ್ಳಲು ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರಿಗೆ ಸರ್ವಾನುಮತದಿಂದ ಅಧಿಕಾರ ನೀಡಲಾಯಿತು.

ರೈತ ಸಂಘದ ಸುರಪುರ ತಾಲೂಕು ಘಟಕದ ನೂತನ ಪದಾಧಿಕಾರಿಗಳ ನೇಮಕ

ಸಭೆಯ ಅಧ್ಯಕ್ಷತೆ ವಹಿಸಿರುವ ಲಕ್ಷ್ಮಣ ದಸ್ತಿಯವರು ಮಾತನಾಡಿ 1984 ರ ಸರೀನ್ ಕಮಿಟಿ ವರದಿಯ ಶಿಫಾರಸ್ಸಿನಂತೆ ಮಂಜೂರಾದ ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ತಿರಸ್ಕರಿಸಿರುವುದು, ನಂಜುಂಡಪ್ಪ ವರದಿ ಪ್ರಕಾರ ರಾಯಚೂರಿಗೆ ಬರಬೇಕಾದ ಐ.ಐ.ಟಿ. ಹುಬ್ಬಳ್ಳಿ-ಧಾರವಾಡಕ್ಕೆ ಸ್ಥಳಾಂತರ ಮಾಡಿರುವುದು, ನಂಜುಂಡಪ್ಪ ವರದಿಯಂತೆ ಮತ್ತು ಭಾರತ ಸರಕಾರದ 371ನೇ(ಜೆ) ಕಲಂ ಸ್ಥಾನಮಾನ ಪಡೆದಿರುವ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಿಗಬೇಕಾದ ಏಮ್ಸ್ ಹುಬ್ಬಳ್ಳಿ-ಧಾರವಾಡಕ್ಕೆ ಮಂಜೂರು ಮಾಡುತ್ತಿರುವುದು ಕಳೆದ ಅನೇಕ ವರ್ಷಗಳಿಂದ ಕೇಂದ್ರ ಸರಕಾರ ಕಲ್ಯಾಣ ಕರ್ನಾಟಕಕ್ಕೆ ಒಂದೇ ಒಂದು ಉದ್ಯೋಗ ಸೃಷ್ಟಿಯ ಕಾರ್ಖಾನೆ ಹಾಕದೇ ಇರುವುದು ರೈಲ್ವೆ ಕ್ಷೇತ್ರ, ಹೆದ್ದಾರಿ ಕ್ಷೇತ್ರ ಮುಂತಾಗಿ ಕೇಂದ್ರಕ್ಕೆ ಸಂಬಂಧಿಸಿದ ಯಾವುದೇ ಯೋಜನೆಗಳು ಸಹ ಇಲ್ಲಿಗೆ ಬರದೇ ಇರುವುದು ಅದರಂತೆ ರಾಜ್ಯ ಸರಕಾರ ಹೆಸರಿಗೆ ಮಾತ್ರ ನಮ್ಮ ಭಾಗಕ್ಕೆ ಕಲ್ಯಾಣ ಕರ್ನಾಟಕ ನಾಮಕರಣ ಮಾಡಿ ತನ್ನ ಅಧೀನದಲ್ಲಿ ಬರುವ ಪ್ರತ್ಯೇಕ ಮಂತ್ರಾಲಯ ಸ್ಥಾಪನೆ ಸೇರಿದಂತೆ ಕಾಲಮಿತಿಯಲ್ಲಿ ಅಭಿವೃದ್ಧಿ ಯೋಜನೆಗಳು ಪೂರ್ಣ ಗೊಳಿಸದೇ ಇರುವುದು, ರೆಗ್ಯುಲರ್ ಬಜೆಟ್‍ನಲ್ಲಿ ವಿಶೇಷ ಯೋಜನೆಗಳು ಮಂಜೂರು ಮಾಡದೇ ಅದರಂತೆ ಮಂಜೂರಾಗಿರುವ ಯೋಜನೆಗಳು ಅನುಷ್ಠಾನ ಮಾಡದೇ, ಕೆ.ಕೆ.ಆರ್.ಡಿ.ಬಿ.ಯಿಂದ 1500 ಕೋಟಿ ಹಣ ನೀಡಿ ಆದ್ಯತೆ ನೀಡಲಾಗಿದೆ ಎಂಬಂತೆ ಬಿಂಬಿಸುವುದು, ನಮ್ಮ ಮೀಸಲಾತಿಯ ಹಕ್ಕಿನ ಸುಮಾರು ಅಂದರೆ ಕಲ್ಯಾಣ ಕರ್ನಾಟಕದ ಪ್ರದೇಶದ ಮತ್ತು ಕಲ್ಯಾಣ ಕರ್ನಾಟಕೇತರ ಪ್ರದೇಶದ ಒಟ್ಟು ಎಪ್ಪತ್ತು ಸಾವಿರ ಹುದ್ದೆಗಳು ನೇಮಕ ಮಾಡದೇ ಇರುವುದು, ಮಂತ್ರಿ ಮಂಡಲದಲ್ಲಿ ಪ್ರಾತಿನಿಧ್ಯತೆ ಇಲ್ಲದೇ ಇರುವುದು, ಉಸ್ತುವಾರಿ ಸಚಿವರುಗಳು ಮೂರು ತಿಂಗಳಿಗೊಮ್ಮೆಯಾದರೂ ಬರುವದಿಲ್ಲ. ಒಟ್ಟಾರೆ ಹೇಳಬೇಕೆಂದರೆ ಕಲ್ಯಾಣ ಕರ್ನಾಟಕ ಪ್ರದೇಶ ಪ್ರಸ್ತುತ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಘೋರ ಮಲತಾಯಿ ಧೋರಣೆಗೆ ತುತ್ತಾಗಿದೆ.

ಅಂಗನವಾಡಿ ಕೇಂದ್ರ ಆರಂಭಿಸಲು ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಪ್ರಸ್ತುತ ಈಗ ಪಕ್ಷಾತೀತವಾಗಿ ಏಳು ಜಿಲ್ಲೆಗಳಲ್ಲಿ ಸಂಘಟಿತ ಹೋರಾಟ ಅತಿ ಅವಶ್ಯವಾಗಿದೆ. ಇದಕ್ಕೆ ಪೂರಕವಾಗಿ ಸಮಿತಿ ಇಂದಿನ ಸಭೆಯಲ್ಲಿ ತಮಗೆ ನೀಡಿರುವ ಅಧಿಕಾರದಂತೆ ಎಲ್ಲಾ ಪಕ್ಷಗಳ, ಸಂಘ ಸಂಸ್ಥೆಗಳ ಮತ್ತು ಆಯಾ ಕ್ಷೇತ್ರದ ಮುಖಂಡರ ಜೊತೆ ಮತ್ತು ಚಿಂತಕರ, ಬುದ್ಧಿ ಜೀವಿಗಳ ಜೊತೆ ಸಮಾಲೋಚನೆ ನಡೆಸಿ, ಒಂದೆರಡು ದಿನಗಳಲ್ಲಿ ಹೋರಾಟದ ರೂಪರೇಷೆಗಳನ್ನು ಪ್ರಕಟಿಸಲಾಗುವದೆಂದು ಸಭೆಯ ಅಧ್ಯಕ್ಷತೆ ವಹಿಸಿರುವ ಲಕ್ಷ್ಮಣ ದಸ್ತಿಯವರು ತಿಳಿಸಿದರು.

ಕೋರ ಕಮಿಟಿ ಸಭೆಯಲ್ಲಿ ಸಮಿತಿಯ ಇನ್ನೀತರ ಸದಸ್ಯರಾದ ಬಿ.ಬಿ. ಪಾಟೀಲ್, ಅಣ್ಣಾರಾವ ಹೆಬ್ಬಾಳ, ಶಿವರಾಜ ಅಂಡಗಿ, ಬಸವರಾಜ ಕೆ., ಚಂದ್ರಕಾಂತ, ಸುಭಾಸ, ಮಹ್ಮದ ಅಲಿ, ವಿಶಾಲದೇವ, ಶ್ರೀನಿವಾಸ, ಸುನೀಲ್ ಬಿ., ಮೋಹಿಯೊದ್ದೀನ್ ಸೇರಿದಂತೆ ಕೋರ ಕಮಿಟಿಯ ಬಹುತೇಕ ಸದಸ್ಯರು ಹಾಜರಿದ್ದರು.

emedialine

Recent Posts

ತೊಗರಿ ಬೆಳೆ ಹಾನಿ ಪ್ರದೇಶಕ್ಕೆ‌ ಡಿ.ಸಿ ಭೇಟಿ: ಶೀಘ್ರ ಪರಿಹಾರದ ಭರವಸೆ

ಕಲಬುರಗಿ: ನ.28 ಜಿಲ್ಲೆಯಾದ್ಯಂತ ಮಣ್ಣಿನಲ್ಲಿ ತೇವಾಂಶದ ಕೊರತೆ ಹಾಗೂ ಒಣ ಬೇರು ಕೊಳೆ ರೋಗದಿಂದ ತೊಗರಿ ಒಣಗುತ್ತಿರುವ ಹಿನ್ನೆಲೆಯಲ್ಲಿ ಗುರುವಾರ…

6 hours ago

ಕರ್ಜಗಿ: ಹಜರತ್ ಖ್ವಾಜಾ ಸೈಫನ್ ಉರ್ಸ್

ಕರ್ಜಗಿ (ಕಲಬುರಗಿ): ನ.28 ಅಫಜಲಪುರ ತಾಲ್ಲೂಕಿನ ಸುಕ್ಷೇತ್ರ ಕುಬೇರ ಕರಜಗಿ ಗ್ರಾಮದ ಹಜರತ್ ಖ್ವಾಜಾ ಸೈಫನ್ ಮುಲ್ಕ 891 ಜಾತ್ರೆ…

8 hours ago

ಮಹಿಪಾಲರೆಡ್ಡಿ ನಟನೆಯ `ತಮಟೆ’ ಸಿನಿಮಾ ನಾಳೆ ಬಿಡುಗಡೆ

ಕಲಬುರಗಿ, ನ.೨೮ - ಹಿರಿಯ ಚಿತ್ರನಟ ಮದನ್ ಪಟೇಲ್ ಅವರು ನಾಯಕ ನಟರಾಗಿರುವ ಕಾದಂಬರಿ ಆಧಾರಿತ `ತಮಟೆ’ ಸಿನಿಮಾ ನವೆಂಬರ್…

11 hours ago

ಎಂ.ಎಸ್ ಇರಾಣಿ ವಿದ್ಯಾರ್ಥಿಗೆ ದ್ವೀತಿಯ ಸ್ಥಾನ

ಕಲಬುರಗಿ: ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ಸರ್ಕಾರಿ ಪದವಿ ಸ್ವಾಯತ್ತ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಮಹಾನಗರ ಪಾಲಿಕೆ,ಸಮಾಜ ಕಲ್ಯಾಣ ಇಲಾಖೆ, ಕನ್ನಡ…

1 day ago

ವಿದ್ಯಾರ್ಥಿಗಳಿಗೆ ಸಂವಾದ ಕಾರ್ಯಕ್ರಮ

ಕಲಬುರಗಿ: ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರಗಿ ಹಾಗೂ ಸಿ.ಆರ್.ಸಿ ಸ್ನೇಹ ಬಳಗ ಕಲಬುರಗಿ ಮತ್ತು ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ…

1 day ago

ಸ್ಲಂ ಜನಾಂದೋಲನ ಜಿಲ್ಲಾ ಘಟಕದಿಂದ ಹಕ್ಕು ಪತ್ರ ನೊಂದಣಿ ಖಾತ ಪ್ರತಿ ವಿತರಣೆ

ಕಲಬುರಗಿ: ಸುವರ್ಣ ಭವನ (ಕನ್ನಡ ಭವನ)ದಲ್ಲಿ  ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಘಟಕ  ವತಿಯಿಂದ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ…

1 day ago