ಸುರಪುರ: ಲಕ್ನೋನ ವ್ಯಕ್ತಿ ವಾಸಿಂ ರಿಜ್ವಿ ಎನ್ನುವವರು ಪ್ರವಾದಿ ಮಹ್ಮದರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಖಂಡಿಸಿ ನಗರದ ತಹಸೀಲ್ ಕಚೇರಿ ಮುಂದೆ ಮುಸ್ಲೀಂ ಚಿಂತಕರ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅನೇಕ ಮುಖಂಡರು ಮಾತನಾಡಿ,ಪ್ರವಾದಿ ಮಹ್ಮದರು ಇಡೀ ಮಾನವ ಜನಾಂಗಕ್ಕೆ ಉತ್ತಮ ಸಂದೇಶವನ್ನು ನೀಡಿದವರು.ಅಲ್ಲದೆ ಅವರ ಸಂದೇಶವನ್ನು ಇಡೀ ಮಾನವ ಜನಾಂಗವೂ ಒಪ್ಪಿದೆ,ಅವರು ನೀಡಿದ ಶಾಂತಿಯ ಸಂದೇಶ ಜಗತ್ತಿನ ಅಭಿವೃಧ್ಧಿಗೆ ಪೂರಕವಾಗಿದೆ.ಇಂತಹ ಮಹಾವ್ ಧೂತರಾದ ಪ್ರವಾದಿ ಮಹ್ಮದರ ಕುರಿತು ಲಕ್ನೋ ಮಾಜಿ ವಕ್ಫ್ ಬೋರ್ಡ್ ಅಧ್ಯಕ್ಷ ವಾಸೀಂ ರಿಜ್ವಿ ಅವಹೇಳನಕಾರಿಯಾಗಿ ಮಾತನಾಡಿದ್ದು ಖಂಡನೀಯವಾಗಿದೆ.ಸರಕಾರ ಕೂಡಲೇ ಈ ವಾಸೀಂ ರಿಜ್ವೀ ವಿರುಧ್ಧ ಕಠಿಣ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ದೇಶಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಅಸ್ಪ್ರಶ್ಯತೆ ಕುರಿತು ಬೀದಿ ನಾಟಕಕ್ಕೆ ಗ್ರಾಪಂ ಅಧ್ಯಕ್ಷೆ ಸಾಹೇರಾ ಬಾನು ಚಾಲನೆ
ನಂತರ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ತಹಸೀಲ್ ಸಿಬ್ಬಂದಿಗಳ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಮಹ್ಮದ್ ಇಕ್ಬಾಲ್ ಮುಫ್ತಿ ಒಂಟಿ ಅಬ್ದುಲ್ ಗಫೂರ್ ನಗನೂರಿ ಖಾಜಾ ಖಲೀಲ್ ಅಹ್ಮದ ಅರಕೇರಿ ಅಬ್ದುಲ್ ಮಜೀದ್ ಸಾಬ್ ಅಬ್ದುಲ್ ಅಲೀಂ ಗೋಗಿ ಅಹ್ಮದ್ ಪಠಾಣ್ ದೇವಿಂದ್ರಪ್ಪ ಪತ್ತಾರ್ ಮಹಿಬೂಬ ಒಂಟಿ ಖಾಲಿದ್ ಅಹ್ಮದ ತಾಳಿಕೋಟೆ ಎ.ಆರ್.ಪಾಶಾ ಮಹ್ಮದ್ ಮೌಲಾ ಸೌದಾಗರ್ ಶಿವಲಿಂಗ ಹಸನಾಪುರ ದಾವೂದ್ ಪಠಾಣ್ ಖಾಜಾ ಅಜ್ಮೀರ್ ಎಮ್.ಪಟೇಲ್ ಅಬೀದ್ ಹುಸೇನ್ ಪಗಡಿ ಮಹ್ಮದ್ ಶಕೀಲ್ ರಮೀಜ್ ರಾಜಾ ಅಮ್ಜದ್ ಬೇಗ್ ಇಮ್ರಾನ್ ಬೇಗ್ ಮಹ್ಮದ್ ಮುಸ್ತಫಾ ಖುರೇಶಿ ಮಹ್ಮದ್ ವಾಸೀಂ ಇತರರಿದ್ದರು.