ಸುರಪುರ: ನಗರಸಭೆ ವ್ಯಾಪ್ತಿಯ ವಾರ್ಡ್ ಸಂಖ್ಯೆ ೧೩ರ ದಖನಿ ಮೊಹಲ್ಲಾದಲ್ಲಿ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಡಿ.ಜಿ.ಸಾಗರ ಬಣದ ಮುಖಂಡರು ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು,ವಾರ್ಡ್ ಸಂಖ್ಯೆ ೧೩ರ ದಖನಿ ಮೊಹಲ್ಲಾದಲ್ಲಿ ಅಂಗನವಾಡಿ ಕೇಂದ್ರ ಇಲ್ಲದ ಕಾರಣ ಈ ವಾರ್ಡಿನ ಗರ್ಭೀಣಿ ಸ್ತ್ರೀಯರು ಮತ್ತು ಮಕ್ಕಳು ಸರಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ,ಅನೇಕ ವರ್ಷಗಳಿಂದ ಇಲ್ಲಿಯ ಜನರ ಬೇಡಿಕೆಯಿದ್ದು ಕೂಡಲೇ ದಖನಿ ಮೊಹಲ್ಲಾದಲ್ಲಿ ಅಂಗನವಾಡಿ ಆರಂಭಿಸುವಂತೆ ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಮತ್ತು ಆಶಾ ಕಾರ್ಯಕರ್ತೆಯರನ್ನು ನೇಮಿಸಲು ಆಗ್ರಹಿಸಿದರು.ನಂತರ ಇದೇ ವಿಷಯದ ಕುರಿತು ತಾಲೂಕು ಆರೋಗ್ಯಾಧಿಕಾರಿಗಳಾದ ಡಾ:ಆರ್.ವಿ.ನಾಯಕ ಅವರಿಗೂ ಮನವಿ ಸಲ್ಲಿಸಿದರು.
ಅಸ್ಪ್ರಶ್ಯತೆ ಕುರಿತು ಬೀದಿ ನಾಟಕಕ್ಕೆ ಗ್ರಾಪಂ ಅಧ್ಯಕ್ಷೆ ಸಾಹೇರಾ ಬಾನು ಚಾಲನೆ
ನಂತರ ಶಿಶು ಅಭೀವೃಧ್ಧಿ ಯೋಜನಾಧಿಕಾರಿಗಳಿಗೆ ಬರೆದ ಮನವಿಯನ್ನು ಕಚೇರಿ ಸಿರಸ್ತೆದಾರರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಶಿವಲಿಂಗ ಹಸನಾಪುರ ತಾಲೂಕು ಸಂಚಾಲಕ ವೀರಭದ್ರ ತಳವಾರಗೇರಾ ಅಬ್ದುಲ್ ಮಜೀದ್ ಸಾಬ್ ದೇವಿಂದ್ರಪ್ಪ ಪತ್ತಾರ್ ಎಮ್.ಪಟೇಲ್ ಖಾಜಾ ಅಜ್ಮೀರ್ ಅಬೀದ್ ಹುಸೇನ್ ಪಗಡಿ ಖಾಲಿದ್ ಅಹ್ಮದ್ ತಾಳಿಕೋಟೆ ದಾವೂದ್ ಪಠಾಣ್ ಮಹ್ಮದ್ ಮೌಲಾ ಸೌದಾಗರ್ ರಮೀಜ್ ರಾಜಾ ಗೌಸ್ ಸೇರಿದಂತೆ ಅನೇಕ ಜನರಿದ್ದರು.