ನುರಿತ ಸಿಬ್ಬಂಧಿಗಳು ಮಹಾವಿದ್ಯಾಲಯಗಳ ಬೆನ್ನೆಲುಬು: ಡಾ. ಎಸ್ಎಸ್ ಹೆಬ್ಬಾಳ

ಕಲಬುರಗಿ: ಪ್ರಸ್ತುತ ತಾಂತ್ರಿಕ ಶಿಕ್ಷಣ ಕ್ಷೇತ್ರಗಳಲ್ಲಿ ನುರಿತ ಸಿಬ್ಬಂಧಿಗಳ ಕೊರತೆಯಿದ್ದು ಇದನ್ನು ನಿವಾರಿಸಲು ತಾಂತ್ರಿಕ ಕಾರ್ಯಾಗಾರಗಳ ಅವಶ್ಯಕತೆಯಿದ್ದು, ಸಿಬ್ಬಂಧಿಗಳು ಇಂತಹ ಕಾರ್ಯಾಗಾರಗಳಲ್ಲಿ ಭಾಗವಹಿಸಿ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಪ್ರಸ್ತುತ ಮಾಹಿತಿ ತಂತ್ರಜ್ಞಾನದ ಯುಗವಾಗಿದ್ದು, ಮಾಹಿತಿಯನ್ನು ಕಲೆಹಾಕುವುದು, ಸಂರಕ್ಷಿಸುವುದು ಹಾಗೂ ಅದನ್ನು ನಮಗೆ ಬೇಕಾಗಿರುವ ರೀತಿಯಲ್ಲಿ ಪ್ರಸ್ತುತ ಪಡಿಸುವದು ಅವಶ್ಯಕವಾಗಿದೆ ಅದಕ್ಕಾತಿ ಬೇಕಾಗಿರುವ ಎಲ್ಲ ರೀತಿಯ ಸಾಫ್ಟ್ ವೇರಗಳನ್ನು ಬಳಸುವುದು ಕಲಿಯಬೇಕು ಎಂದು ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯ ಪ್ರಾಚಾರ್ಯರಾದ ಡಾ. ಎಸ್. ಎಸ್. ಹೆಬ್ಬಾಳ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.  ಅವರು ಇಂದು ಇಲ್ಲಿನ ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ನಡೆಯುವ ಟೆಕ್ವಿಪ್-೩ ಪ್ರಾಯೋಜಿತ ಐದು ದಿನಗಳ “ಡೇಟಾ ಬೇಸ್ ಅಡ್ಮಿನಿಸ್ಟ್ರೇಶನ್ ಮತ್ತು ನೆಟ್ ವರ್ಕ ಮ್ಯಾನೇಜಮೆಂಟ ಕಾರ್ಯಾಗಾರ” ವನ್ನು ಉದ್ಘಾಟಿಸಿ ಮಾತನಾಡಿದರು.

ಉದ್ಘಾಟನಾ ಕಾರ್ಯಕ್ರಮದ ಗೌರವ ಅತಿಥಿಗಳಾಗಿ ಆಗಮಿಸಿದ ಮಹಾವಿದ್ಯಾಲಯದ ಡೀನ ಅಕಾಡೆಮಿಕ ಡಾ. ಎಸ್. ಆರ್. ಪಾಟೀಲ ಅವರು ಮಾತನಾಡಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ನಾವು ಕಾರ್ಯಾಗಾರಗಳಲ್ಲಿ ಭಾಗವಹಿಸುವುದು ಹಾಗೂ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವುದು ಅತಿ ಅವಶ್ಯವಾಗಿದೆ ಹಾಗೂ ಇದರಿಂದಾಗಿ ನಮಗೆ ಪ್ರಸ್ತುತ ಜಗತ್ತಿಗೆ ಬೇಕಾಗಿರುವ ತಾಂತ್ರಿಕ ಜ್ಞಾನದ ಅಗತ್ಯತೆಯ ಅರಿವಾಗುವುದು ಎಂದು ಹೇಳಿದರು.

ಸಾಯಬಣ್ಣಾ ಗುಡುಬಾ ಇವರಿಗೆ ಪಿಎಚ್‍ಡಿ

ಮಹಾವಿದ್ಯಾಲಯದ ಟೆಕ್ವಿಪ್-೩ ರ ಸಂಚಾಲಕರಾದ ಪ್ರೊ. ಶರಣ ಪಡಶೆಟ್ಟಿ ಅವರು ಮಾತನಾಡಿ ಮಾರ್ಚ ೨೨ ರಿಂದ ೨೬ರ ವರೆಗೆ ನಡೆಯುವ ಈ ಕಾರ್ಯಾಗಾರಕ್ಕೆ ತಾಂತ್ರಿಕ ಶಿಕ್ಷಣ ಕ್ಷೇತ್ರದ ಸುಮಾರು ೬೦ ಸಿಬ್ಬಂಧಿಗಳು ಭಾಗವಹಿಸಿದ್ದು ಇದರ ಲಾಭ ಪಡೆಯಲಿದ್ದಾರೆಂದು ತಿಳಿಸಿದರು. ಅದೇ ರೀತಿ ಪಿ.ಡಿ.ಎ. ಕಾಲೇಜಿನ ಇನ್ನೂ ಹಲವಾರು ವಿಭಾಗಗಳಲ್ಲಿ  ಇದೇ ರೀತಿಯ ಕಾರ್ಯಗಾರ ಹಾಗೂ ಉಪನ್ಯಾಸ ಮಾಲಿಕೆಗಳು ನಡೆಯುತ್ತಿದ್ದು ಇದರಿಂದಾಗಿ ಶಿಕ್ಷರಿಗೆ ಹಾಗೂ ಸಿಬ್ಬಂಧಿಗಳಿಗೆ ಅನುಕೂಲವಾಗುವುದು ಎಂದು ಹೇಳಿದರು.

ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥೆ ಮತ್ತು ಕಾರ್ಯಾಗಾರದ ಸಂಯೋಜಕಿಯಾದ ಡಾ. ಭಾರತಿ ಹರಸೂರ ಅವರು ಸರ್ವರಿಗೂ ಸ್ವಾಗತಿಸಿ ಕಾರ್ಯಾಗಾರದಲ್ಲಿ ಭಾಗಹಿಸಿದ ಸಿಬ್ಬಂಧಿಗಳಿಗೆ ಇದರ ಸದುಪಯೋಗ ಪಡೆಯಲು ವಿನಂತಿಸಿಕೊಂಡರು. ಕಾರ್ಯಕ್ರಮದ ಸಂಚಾಲಕರಾದ ಪ್ರೊ. ಅಶೋಕ ಪಾಟೀಲರು, ಕಾರ್ಯಾಗಾರದ ಕುರಿತು ಸಮಗ್ರ ಮಾಹಿತಿ ನೀಡಿದರು. ಪ್ರೊ. ಗುರಪ್ಪ ಕಲ್ಯಾಣಿ ಅವರು ಸಹ ಸಂಚಾಲಕರಾಗಿ ತಮ್ಮ ಕಾರ್ಯ ನಿರ್ವಹಿಸಿದರು. ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರೊ. ಉದಯ ಬಳಗಾರ ಅವರು ವಂದನಾರ್ಪಣೆ ಮಾಡಿದರು. ಕಾರ್ಯಕ್ರಮವನ್ನು ವಿಭಾಗದ ಪ್ರೊ. ಪ್ರಿಯಾಂಕಾ ದೇವಣಿ ಅವರು ನಿರೂಪಿಸಿದರು.

ತೊಗರಿ ಕಣಜ ಸ್ಥಾಪನೆಗೆ ಕನ್ನಡ ಭೂಮಿ ಆಗ್ರಹ

ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಎಸ್.ಎಸ್.ಹೆಬ್ಬಾಳ ಅವರು ಈ ವಿಚಾರ ಸಂಕಿರಣದ ಜನರಲ್ ಚೇರ್ ಅಗಿದ್ದು, ಡಾ.ಭಾರತಿ ಹರಸೂರು, ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥರು ಇವರು ಸಂಯೋಜಕರಾಗಿ ಹಾಗೂ ಅದೇ ವಿಭಾಗದ ಶ್ರೀ. ಅಶೋಕ ಪಾಟೀಲ ಹಾಗೂ ಗುರಪ್ಪ ಕಲ್ಯಾಣಿ ಅವರು ಕಾರ್ಯಾಗಾರದ ಸಂಚಾಲಕರಾಗಿ ತಮ್ಮ ಕಾರ್ಯ ನಿರ್ವಹಿಸಿದರು.

ಉಪ-ಪ್ರಾಚಾರ್ಯರಾದ ಡಾ. ಎಸ್. ಎಸ್. ಕಲಶೇಟ್ಟಿ, ಡೀನ ಅಕಾಡೆಮಿಕ ಡಾ. ಎಸ್. ಆರ್. ಪಾಟೀಲ, ಟೆಕ್ವಿಪ್ ಸಂಚಾಲಯಕರಾದ ಪ್ರೊ. ಶರಣ ಪಡಶೆಟ್ಟಿ, ಹೆಚ್ಚುವರಿ ಡೀನ ಡಾ. ವಿಶ್ವನಾಥ ಬುರಕಪಳ್ಳಿ ಸಲಹೇಗಾರರಾಗಿ ತಮ್ಮ ಕಾರ್ಯನಿರ್ವಹಿಸಿದರು.

ಸಾಯಬಣ್ಣಾ ಗುಡುಬಾ ಇವರಿಗೆ ಪಿಎಚ್‍ಡಿ

ವಿಭಾಗದ ಚಂದ್ರಕಾಂತ ಬೀರಾದಾರ, ನಿತಿನ ಕಟ್ಟಿಶೆಟ್ಟರ, ಗೌರಿ ಪಾಟೀಲ, ಶರಣು ಹುಲಿ, ರಶ್ಮೀ ತಳ್ಳಳಿ, ಅರ್ಚನಾ ಪಾಟೀಲ, ಸುಮಾ, ಮಲ್ಲಿಕಾರ್ಜುನ ರೆಡ್ಡಿ, ಅಂಬಾರಾಯ, ಗಂಗಾ ಧಾರಕ ಗೀತಾ,  ಕವಿತಾ ಮತ್ತು ಸುವರ್ಣಾ ಎಮ್.ಐ. ಅವರು ಕಾರ್ಯಾಗಾರದ ಸಂಘಟಕರಾಗಿ ಕಾರ್ಯನಿರ್ವಹಿಸಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

8 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

18 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

18 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

18 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago