ಕಲಬುರಗಿ: ತೊಗರಿ ಕಣಜ ಎಂದೇ ಹೆಸರಾದ ಕಲಬುರ್ಗಿಯಲ್ಲಿ ಉದ್ದೇಶಿತ ತೊಗರಿ ಟೆಕ್ನಾಲಜಿ ಪಾರ್ಕ್ ಕೈ ಬಿಟ್ಟು ರಾಜ್ಯ ಸರಕಾರ ರೈತರಿಗೆ ಅನ್ಯಾಯ ಮಾಡಲು ಹೋರಟಿದೆ ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಆರೋಪಿಸಿದ್ದಾರೆ.
ಮಾಜಿ ಸೈನಿಕನ ಮೇಲಿನ ಹಲ್ಲೆಗೆ ಸಿಡಿದೆದ್ದ ಸೈನಿಕರು
ಇತ್ತೀಚೆಗೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ ವಿಧಾನ ಪರಿಷತ್ ನಲ್ಲಿ ಈ ಯೋಜನೆ ಕೈಬಿಡಲಾಗಿದೆ ಎಂದು ಹೇಳಿರುವುದು ಖಂಡನೀಯ.ಭೂಸ್ವಾಧಿನದ ನೆಪವೊಡ್ಡಿ ತೊಗರಿ ಪಾರ್ಕ್ ನಿರ್ಮಾಣಕ್ಕೆ ಹಿಂದೇಟು ಹಾಕುತ್ತಿದ್ದಾರೆ.ತೊಗರಿ ಉತ್ಪನ್ನಕ್ಕೆ ಸಮಗ್ರ ಮಾರುಕಟ್ಟೆ ಸೌಲಭ್ಯ ಕಲ್ಪಿಸಲು ಹಾಗೂ ತೊಗರಿ ಬೆಳೆಗಾರರಿಗೆ ಒಂದೆ ಸೂರಿನಡಿ ಎಲ್ಲ ರೀತಿಯ ಅನುಕೂಲ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಳೆದ ವರ್ಷ ಬಜೆಟ್ ನಲ್ಲಿ ಕಲಬುರ್ಗಿಯಲ್ಲಿ ತೊಗರಿ ಟೆಕ್ನಾಲಜಿ ಪಾರ್ಕ್ ಸ್ಥಾಪಿಸಲಾಗುವುದು ಎಂದು ಹೇಳಿ ಈಗ ಏಕಾಏಕಿ ಕೈ ಬೀಡಲು ಹೋರಟಿರುವುದು ರೈತರಿಗೆ ಅನ್ಯಾಯ ಮಾಡಿದಂತಾಗುತ್ತದೆ.ಈ ಪಾರ್ಕ್ ನಲ್ಲಿ ಉಗ್ರಾಣ ಕೇಂದ್ರ,ಆಮದು ರಫ್ತು ಕೇಂದ್ರ, ಆನ್ ಲೈನ್ ಮಾರಾಟ ಕೇಂದ್ರ, ಪ್ಯಾಕಿಂಗ್ ಘಟಕ, ಮಾರುಕಟ್ಟೆ ಸಂಶೋಧನಾ ಕೇಂದ್ರ.ಜೋತೆಗೆ ವರ್ತಕರಿಗೆ ಹೆಚ್ಚಿನ ಸಹಾಯವಾಗುತ್ತದೆ.
ಲಯನ್ಸ್ ಕ್ಲಬ್ ವತಿಯಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ
ಇದರಿಂದ ಅನೇಕ ಅನುಕೂಲವೂ ಸಾಕಷ್ಟಿವೆ.ಈಗೀರುವ ಜಿಲ್ಲೆಯ ಬಹುತೇಕ ದಾಲ್ ಮಿಲ್ ಗಳಲ್ಲಿ ನೂತನ ತಂತ್ರಜ್ಞಾನ ಇಲ್ಲ.ಮಾರುಕಟ್ಟೆಯಲ್ಲಿ ಹೆಚ್ಚು ವಹಿವಾಟು ಇರುವುದರಿಂದ ಸ್ಥಳಾವಕಾಶದ ಅಭಾವವಿದೆ.ಕೃಷಿ ಉತ್ಪನ್ನಗಳು ಸಾಗಣೆ ಮಾಡಲು ತೊಂದರೆಯಾಗುತ್ತಿದ್ದು, ರೈತರಿಗೆ ಬೆಲೆ ಸಿಗುತ್ತಿಲ್ಲ.ಪಾರ್ಕ ನಿರ್ಮಾಣ ವಾದರೆ ತೊಗರಿ ಬೆಳೆಗಾರರಿಗೆ ಹೆಚ್ಚು ಅನುಕೂಲವಾಗುತ್ತದೆ.ಜಿಲ್ಲೆಯಲ್ಲಿ ಕೈಗಾರಿಕಾ ಪ್ರದೇಶದಲ್ಲಿ ಬೇಕಾದಷ್ಟು ಜಾಗವಿದೆ.ಕೂಡಲೇ ಸರಕಾರ ತೊಗರಿ ಟೆಕ್ನಾಲಜಿ ಪಾರ್ಕ್ ನಿರ್ಮಾಣ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.