ಕಲಬುರಗಿ: ಆಲ್ ಇಂಡಿಯಾ ಡೆಮಾಕ್ರೆಟಿಕ್ ಆರ್ಗನೈಸೇಶನ್(ಎಐಡಿವೈ ಓ ) ಕಲಬುರ್ಗಿ ಜಿಲ್ಲಾ ಸಮಿತಿ ವತಿಯಿಂದ ನಾಳೆ 23 ರಂದು ಸಾಯಂಕಾಲ 6 ಗಂಟೆಗೆ ನಗರದ ಎಸ್.ವಿ.ಪಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ಮಾರ್ಗವಾಗಿ ಬ್ರಿಟಿಷರ ಎದೆ ನಡುಗಿಸಿದ, ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿ ಗಳಾದ ಶಹೀದ್ ಭಗತ್ ಸಿಂಗ್, ರಾಜಗುರು, ಸುಖದೇವ್ ರವರ 91ನೇ ಹುತಾತ್ಮ ದಿನದ ಅಂಗವಾಗಿ ಪಂಜಿನ ಮೆರವಣಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಹುತಾತ್ಮ ದಿನಾಚರಣೆ ಅಂಗವಾಗಿ ಎ.ಐ.ಡಿ.ವೈ.ಓ ಪಂಜಿನ ಮೆರವಣಿಗೆ ನಾಳೆ
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಸಂಘಟನೆಯ ರಾಜ್ಯ ಸೆಕ್ರೆಟ್ರೀಯೇಟ್ ಸದಸ್ಯರಾದ ಮಹೇಶ್ ನಾಡಗೌಡರು ಮಾತನಾಡುವರು, ಭಾಷಣಕಾರರಾಗಿ ಜಿಲ್ಲಾ ಕಾರ್ಯದರ್ಶಿ ಜಗನ್ನಾಥ ಎಸ್.ಎಚ್. ಹಾಗೂ ಅಧ್ಯಕ್ಷತೆ ಜಿಲ್ಲಾಧ್ಯಕ್ಷ ನಿಂಗಣ್ಣ ಜಂಬಗಿ ವಹಿಸುವರು ಎಂದು ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಭೀಮಾಶಂಕರ್ ಪಾಣೇಗಾಂವ್ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಸರಿಗನ್ನಡ ಬಳಕೆಯಾಗಲಿ : ಟಿಎಸ್ ನಾಗಾಭರಣ
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ- ಯುವಜನರು ಹಾಗೂ ಭಗತ್ ಸಿಂಗ್ ರವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅವರು ಮನವಿ ಮಾಡಿದ್ದಾರೆ.