ಕಲಬುರಗಿ: ಕಳೆದ ಕೆಲವು ದಿನಗಳಿಂದ ಧರಣಿ ಕುಳಿತಿದ್ದ ರಂಗಾಯಣ ಕಲಾವಿದರ ಮನವೊಲಿಸಿದ ಹಿರಿಯ ರಂಗಕಲಾವಿದರು, ಪೋಷಕರು ಧರಣಿಯನ್ನು ಹಿಂದಕ್ಕೆ ಪಡೆಯುವಲ್ಲಿ ಯಶಸ್ವಿಯಾದರು.
ಜೂ 22 ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಕೈಗೊಳ್ಳುತ್ತಿರುವ ನಿರ್ಧಾರ ದಿಂದ ಹಿಂದಕ್ಕೆ ಸರಿಯಬೇಕೆಂಬ ಹಿರಿಯ ರಂಗಕಲಾವಿದರ ಸಲಹೆಗೆ ಒಪ್ಪಿಗೆ ಸೂಚಿಸಿದರು. ಹಿರಿಯರಾದ ಪಿ.ಎಂ.ಮಣ್ಣೂರ, ಮಹಿಪಾಲರೆಡ್ಡಿ ಮುನ್ನೂರ್, ಶಂಕ್ರಯ್ಯ ಘಂಟಿ, ಸಂದೀಪ,ಅಶೋಕ ತೊಟ್ನಳ್ಳಿ, ಪ್ರಭು ಕಿಣಗಿ, ಚಾಮರಾಮ ದೊಡ್ಡಮನಿ, ಬಿ.ಎಚ್.ನಿರಗುಡಿ, ಶಿವು ದೊಡ್ಡಮನಿ, ರಾಜೇಂದ್ರ ರಾಜವಾಳ ಸೇರಿದಂತೆ ಅನೇಕರು ಧರಣಿ ನಿರತ ಕಲಾವಿದರನ್ನು ಮನವೊಲಿಸಿದರು.
ಸಲಹೆ ಮನ್ನಿಸಿ, ಕಬ್ಬಿನ ಹಾಲು ಕುಡಿಯುವ ಮೂಲಕ ಧರಣಿ ಹಿಂದಕ್ಕೆ ಪಡೆದರು. ಮುಂದಿನ ದಿನಗಳಲ್ಲಿ ತೀವ್ರತರವಾದ ಹೋರಾಟ ರೂಪಿಸುವುದಕ್ಕಾಗಿ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಲಾಯಿತು.
ಕಲಬುರಗಿ ರಂಗ ಕಲಾವಿದರ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಧರಣಿಯಲ್ಲಿ ಕಲಾವಿದರಾದ ಭೈರವ ಮತ್ತು ಮೋಹನ ಭಾಗವಹಿಸಿದ್ದರು.