ರೈಲ್ವೆ ವಿಭಾಗೀಯ ಕಚೇರಿ ಸೇರಿದಂತೆ ಕೇಂದ್ರದ ಯೋಜನೆ ತರುವುದಾಗಿ ಸಂಸದ ಜಾಧವ ಸ್ಪಂದನೆ

ಕಲಬುರಗಿ : ಕಲ್ಯಾಣ ಕರ್ನಾಟಕ ಪ್ರದೇಶದ ವಿಭಾಗೀಯ ಕೇಂದ್ರದಲ್ಲಿ ಸುಮಾರು ಮೂರುವರೆ ದಶಕಗಳ ಪೂರ್ವದಲ್ಲಿಯೇ ಸರಿನ್ ಕಮಿಟಿ ವರದಿಯಂತೆ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆಯಾಗಬೇಕಾಗಿತ್ತು. ಆದರೆ, ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಆಗಿಲ್ಲ‌. ಜಿಲ್ಲೆಗೆ ರೈಲ್ವೆ ವಿಭಾಗೀಯ ಕಚೇರಿ ಸೇರಿದಂತೆ ಕೇಂದ್ರದ ಯೋಜನೆಗಳು ಕಲ್ಯಾಣ ಕರ್ನಾಟಕಕ್ಕೆ ತರುವ ನಿಟ್ಟಿನಲ್ಲಿ ಕೆಲಸ‌ ಮಾಡಬೇಕೆಂದು ಕಲಬುರಗಿ ಲೋಕಸಭಾ ಸದಸ್ಯರಾದ ಉಮೇಶ ಜಾಧವಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.

ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿ ಕಲ್ಯಾಣ ಮಾಡಿ ಇಲ್ಲವೇ ಪ್ರತ್ಯೇಕ ರಾಜ್ಯ ಕೊಡಿ ಎಂಬ ಘೋಷಣೆಯಂತೆ ಕಲ್ಯಾಣ ನಡೆ ಜನಪ್ರತಿನಿಧಿಗಳ ಕಡೆ ಅಭಿಯಾನದ ಭಾಗವಾಗಿ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರ ಅಧ್ಯಕ್ಷತೆಯಲ್ಲಿ ಸಂಸದರಿಗೆ ನಿವಾಸದಲ್ಲಿ ಭೇಟಿ ನೀಡಿ ಆಗ್ರಹಿಸಲಾಯಿತು.

ಸಾರಿಗೆ ನೌಕರರ ಮುಷ್ಕರ: ಕಲಬುರಗಿಯಲ್ಲಿ ಸಾರಿಗೆ ಕಚೇರಿ ಬಿಗಿ ಬಂದೋಬಸ್

ಲಕ್ಷ್ಮಣ ದಸ್ತಿ ಈ ಸಂದರ್ಭದಲ್ಲಿ ಮಾತನಾಡಿ ಕೇಂದ್ರ ಸರಕಾರ ನಿರಂತರವಾಗಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮಲತಯಿ ಧೋರಣೆ ಮಾಡುತ್ತಿದೆ, ರೈಲ್ವೆ ವಿಭಾಗಿಯ ಕಚೇರಿಗೆ ತಿರಸ್ಕಾರ, ಏಮ್ಸ್ ಬೇರೆಡೆಗೆ ಸ್ಥಳಾಂತರ ಮಾಡುವುದು, ಕೇಂದ್ರೀಯ ವಿಶ್ವವಿದ್ಯಾಲಯದ ಸೆಂಟರ್ ಫಾರ ಎಕ್ಸಲೆನ್ಸಿಯ ಸ್ಥಳಾಂತರ, ಕೇಂದ್ರದ ವಿಶೇಷ ಯೋಜನೆಗಳಡಿ ಕಲ್ಯಾಣ ಕರ್ನಾಟಕಕ್ಕೆ ನಿರ್ಲಕ್ಷ್ಯ, ಕೇಂದ್ರ ಮಂತ್ರಿ ಮಂಡಲದಲ್ಲಿ ನಿರ್ಲಕ್ಷ್ಯ, ಒಟ್ಟಾರೆ ಕೇಂದ್ರ ಸರಕಾರ ಈ ಭಾಗಕ್ಕೆ ಮಲತಾಯಿ ಧೋರಣೆ ಮಾಡುತ್ತಿರುವುದು ಜನರಿಗೆ ನೋವು ಉಂಟಾಗಿದೆ ಎಂದು ತಿಳಿಸಿದರು.

ಸರಕಾರಿ ಈ ನೀತಿಯಿಂದ ಪ್ರತ್ಯೇಕ ರಾಜ್ಯ ಕೇಳುವ ಹಂತಕ್ಕೆ ತಲುಪಿದೇವೆ ಎಂದು ಸಂಸದರ ಎದುರು ಭಾಗಕ್ಕೆ ಆಗಿರುವ ಮತ್ತು ಆಗುತ್ತಿರುವ ಅನ್ಯಾಯದ ಬಗ್ಗೆ ವಿವರವಾಗಿ ಚರ್ಚಿಸಿದರು.

ಮ್ಯಾಕ್ಸ್ ಲೈಫ್ಇನ್ಶೂರೆನ್ಸ್ – ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಪ್ಪಂದ

ಈ ಸಂದರ್ಭದಲ್ಲಿ ಸಮಿತಿಯ ಮುಖಂಡರುಗಳಾದ ಮನೀಷ ಜಾಜು, ಜ್ಞಾನಮಿತ್ರ, ಸಂಧ್ಯಾರಾಜ ಸ್ಯಾಮ್ಯುವೆಲ್, ಅಸ್ಲಂ ಚೌಂಗೆ, ಶಾಂತಪ್ಪ ಕಾರಭಾಸಗಿ, ಅಬ್ದುಲ ರಹೀಮ್, ಸಾಬಿರ ಅಲಿ, ಡಾ. ಮಾಜಿದ್ ದಾಗಿ, ಬಾಬುರಾವ ಗಂವಾರ್, ಇವರೂ ಸಹ ಮಾನ್ಯ ಸಂಸದರಿಗೆ ಕಲಬುರಗಿ ಜಿಲ್ಲೆಗೆ ರೈಲ್ವೆ ವಿಭಾಗಿಯ ಕಚೇರಿ ನೆನೆಗುದಿಗೆ ಬಿದ್ದಿರುವುದರಿಂದ ಜನರಲ್ಲಿ ಉಂಟಾಗಿರುವ ಅಸಮಧಾನದ ಬಗ್ಗೆ ವಿವರಿಸಿ ಭವಿಷ್ಯದಲ್ಲಿ ಸಂಸದರು ಸರಕಾರದ ಮುಂದೆ ನಮ್ಮ ಹಕ್ಕಿನ ರೈಲ್ವೆ ವಿಭಾಗೀಯ ಕಚೇರಿ ಸೇರಿದಂತೆ, ಏಮ್ಸ, ನೀಮ್ಝ್ ಮುಂತಾದ ಯೋಜನೆಗಳು ಭಾಗಕ್ಕೆ ತರುವ ನಿಟ್ಟಿನಲ್ಲಿ ಸರಕಾರದ ಮುಂದೆ ಸಮರ್ಥವಾಗಿ ಹಕ್ಕು ಮಂಡಿಸಲು ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಸಂಸರದಾರ ಉಮೇಶ ಜಾಧವ ನಾನು ಲೋಕಸಭಾ ಸದಸ್ಯನಾಗಿ ಎರಡು ವರ್ಷಗಳು ಗತಿಸುತ್ತಿವೆ ಇನ್ನೂ ಮುಂದೆ ನಾನು ಸುಮ್ಮನೆ ಕೂಡುವವನಲ್ಲ ನಮ್ಮ ಭಾಗಕ್ಕೆ ಆಗಬೇಕಾದ ಅಭಿವೃದ್ಧಿ ಕೆಲಸಗಳ ಬಗ್ಗೆ ಕೇಂದ್ರದ ಮೇಲೆ ಬಲವಾದ ಒತ್ತಡ ತರುತ್ತೇನೆ ಅದರಂತೆ, ಸಮಿತಿಯು ಹಮ್ಮಿಕೊಂಡ ಅಭಿಯಾನಕ್ಕೆ ಸ್ಪಂದಿಸುತ್ತ ನಾನು ಯಾವುದೇ ಪ್ರತಿಷ್ಠೇಗೆ ಒಳಗಾಗದೆ ನಮ್ಮ ಭಾಗದ ಎಲ್ಲಾ ಸಂಸದರು ಒಗ್ಗಟ್ಟಾಗಿ ಸಂಘಟಿತ ರಾಜಕಿಯ ಇಚ್ಛಾಶಕ್ತಿ ವ್ಯಕ್ತಪಡಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ದಸ್ತಿ ತಿಳಿಸಿದ್ದಾರೆ.

ಬೆತ್ತಲೆ ವಿಡಿಯೋ ಹರಿಬಿಟ್ಟ ವಿವಿ ಗ್ರಂಥಾಲಯ ಅಧೀಕ್ಷಕ

ಅಷ್ಟೇ ಅಲ್ಲದೆ, ಭವಿಷ್ಯದಲ್ಲಿ ಕಲಬುರಗಿಯ ರೈಲ್ವೆ ವಿಭಾಗೀಯ ಕಚೇರಿ ಸೇರಿದಂತೆ ನಮ್ಮ ಭಾಗದ ಯೋಜನೆಗಳು ತರುವುದರ ಬಗ್ಗೆ ಸವಾಲಾಗಿ ಸ್ವೀಕರಿಸಿ ಬದ್ಧತೆ ಪ್ರದರ್ಶಿಸುತ್ತೇನೆಂದು ಎಂದಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅದರಂತೆ ಬರುವ ದಿನಗಳಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಿರುವ ಕಲ್ಯಾಣ ಕರ್ನಾಟಕ ಜನತಾ ಮಹಾ ಅಧಿವೇಶನಕ್ಕೆ ಸಂಪೂರ್ಣ ಸಹಕಾರ ನೀಡುವುದರ ಜೊತೆಗೆ ಕಲ್ಯಾಣ ಕರ್ನಾಟಕದ ಐದು ಜನ ಲೋಕಸಭಾ ಸದಸ್ಯರು ಸಂಸರು ಮತ್ತು ಶಾಸಕರು ಭಾಗವಹಿಸುವಂತೆ ಮನವರಿಕೆ ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಯುವ ಮುಖಂಡರಾದ ಗುರುರಾಜ ಭಂಡಾರಿ, ಹೇಮಂತ ರಾಠೋಡ, ಆಕಾಶ ರಾಠೋಡ, ಶ್ರೀಮಂತ ಪಾಟೀಲ್, ವೀರೇಶ ಪುರಾಣಿಕ್, ಗಿರಿಶ ಚಕ್ರಾ, ಮಹಮ್ಮದ ಇಸ್ಮಾಯಿಲ್, ನಿಂಗಣ್ಣ ಉದನೂರ, ಸಾಯಿಬಣ್ಣ, ಶೈಲೆಂದ್ರ ಕುಲಕರ್ಣಿ, ವಿಶ್ವಾಸ ಕಟಾರೆ ಸೇರಿದಂತೆ ಇತರರು ಇದ್ದರು.

emedialine

Recent Posts

ಕಲಬುರಗಿ: ಹಜರತ್ ಲಾಡ್ಲೆ ಮಶಾಕ(ರ.ಅ) ದರ್ಗಾದ 669ನೇ ಉರುಸ್ 13 ರಿಂದ

ಕಲಬುರಗಿ: ಇಲ್ಲಿನ ಪ್ರಸಿದ್ಧಿ ಸೂಫಿ ಸಂತ ಹಜರತ್ ಖಾಜಾ ಶೇಖ ಮಗದೂಮ್ ಅಲ್ಲಾವುದ್ದೀನ್ ಅನ್ಸಾರಿ ಚಿಸ್ತಿ ಲಾಡ್ಲೆ ಮಶಾಕ ಅನ್ಸಾರಿ…

3 hours ago

ಪತ್ರಕರ್ತ ಮಣೂರರಿಗೆ ಟಿಎಸ್‍ಆರ್ ಪ್ರಶಸ್ತಿ ಪ್ರದಾನ

ಕಲಬುರಗಿ: ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ'ದ ನಿವೃತ್ತ ಕಾರ್ಯನಿರ್ವಾಹಕ ಸಂಪಾದಕ ಶ್ರೀಕಾಂತಾಚಾರ್ಯ ಆರ್. ಮಣೂರ ಅವರಿಗೆ ಬುಧವಾರ ಸಂಜೆ ಬೆಂಗಳೂರಿನಲ್ಲಿ…

4 hours ago

ನವರಾತ್ರಿ ಮಹೋತ್ಸವದ ನಿಮಿತ್ತ ದೇವಿ ಪೂಜಾ ಕಾರ್ಯಕ್ರಮ

ಕಲಬುರಗಿ; ನಗರದ ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಶ್ರೀ ಯಲ್ಲಮ್ಮ ದೇವಸ್ಥಾನದಲ್ಲಿ ಶ್ರೀ ಯಲ್ಲಮ್ಮ ದೇವಸ್ಥಾನ ಟ್ರಸ್ಟ್ ಮತ್ತು ಭಾವಸರ್ ಕ್ಷತ್ರಿಯ…

4 hours ago

ಶ್ರೀ ಭವಾನಿ 1ನೇ ದಿನದ ಪುರಾಣ, ಕಳಸ ರೋಹಣ

ಕಲಬುರಗಿ: ನಗರದ ಕುವೆಂಪು ಕಾಲೋನಿ ಹಾಗೂ ಕಲ್ಯಾಣ ನಗರದದಲ್ಲಿ ಶ್ರೀ ಭವಾನಿ 1ನೇ ದಿನದ ಪುರಾಣ ಕಾರ್ಯಕ್ರಮ ಹಾಗೂ ದೇವಿಯ…

4 hours ago

ಸಿದ್ದರಾಮಯ್ಯನವರು ರಾಜೀನಾಮೆ ನೀಡುವ ಅವಶ್ಯಕತೆಯಿಲ್ಲ: ಮುದ್ದಾ

ಶಹಾಬಾದ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ಕೊಡಬೇಕು ಎಂದು ಹೇಳಲು ಬಿಜೆಪಿಗರಿಗೆ ಯಾವ ನೈತಿಕತೆ ಇಲ್ಲ.ಸಿದ್ದರಾಮಯ್ಯನವರು ರಾಜೀನಾಮೆ ನೀಡುವ…

5 hours ago

ಅಹಿಂಸೆಯ ದಾರಿಯಲ್ಲಿ ನಡೆದಾಗ ವಿಶ್ವದಲ್ಲಿ ಶಾಂತಿ ನೆಲಸಲು ಸಾಧ್ಯ

ಶಹಾಬಾದ: ಇಡಿ ವಿಶ್ವವವು ಗಾಂಧಿಜೀ ಅವರ ಸತ್ಯ ಮತ್ತು ಅಹಿಂಸೆಯ ದಾರಿಯಲ್ಲಿ ನಡೆದಾಗ ಮಾತ್ರ ವಿಶ್ವದಲ್ಲಿ ಶಾಂತಿ ನೆಲಸಲು ಸಾಧ್ಯವೆಂದು…

5 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420