ಕಲಬುರಗಿ: ಆಧುನಿಕ ಮನು, ಶ್ರೇಷ್ಠ ಅರ್ಥಶಾಸ್ತ್ರಜ್ಞ, ಅಖಂಡ ಭಾರತದ ಕನಸು ಕಂಡಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂಸತ್ ಭವನದಲ್ಲಿ ಕಾಂಗ್ರೆಸ್ ಸುಡುವ ಮನೆಯಂತಿದೆ ಎಂದು ಪ್ರಸ್ತಾಪಿಸಿದ್ದರು. ಯಾವ ರೀತಿ ಬ್ರಿಟಿಷರ ಕುಟಿಲ ನೀತಿಯಂತೆ ಒಡೆದು ಆಳುವ ಮನಸ್ಸು ರಾಜರ ಪರಂಪರೆಯಂತೆ ಇರುವುದು ಸ್ವಜನಪಕ್ಷಪಾತದಿಂದ ಕೂಡಿದ ಕಾಂಗ್ರೆಸ್ ಕೂಟ ಇದು ಒಂದು ದಿನ ನಿರ್ಣಾಮವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದರು ಎಂದು ಬಿಜೆಪಿ ಹಿರಿಯ ಮುಖಂಡ ಹಾಗೂ ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶ್ಯಾಮರಾವ್ ಪ್ಯಾಟಿ ಅವರು ತಿಳಿಸಿದ್ದಾರೆ.
ದೇಶದ ಅಭಿವೃದ್ಧಿಗೆ ಯಾವುದೇ ಒಳ್ಳೆಯ ಬುನಾದಿ ಕೆಲಸ ಮಾಡಲು ಆಗಲಿಲ್ಲ. ಗಂಗಾ-ಕಾವೇರಿ, ಸಿಂಧು- ಯಮನಾ ನದಿ ಜೋಡಣೆಯಂತೆ ಕೆಲಸ ಮಾಡಿದರೆ ಭಾರತವು ಪ್ರಪಂಚದಲ್ಲಿ ಶ್ರೀಮಂತ ರಾಷ್ಟ್ರವಾಗಿ ಎಲ್ಲ ರಾಷ್ಟ್ರಗಳಿಗೆ ಆರ್ಥಿಕ ಸಹಾಯ ನೀಡುತ್ತಿತ್ತು ಎಂದು ಅವರು ಹೇಳಿಕೆಯಲ್ಲಿ ಅಂಬೇಡ್ಕರ್ ಅವರ ವಾಣಿಯನ್ನು ಉಲ್ಲೇಖಿಸಿದ್ದಾರೆ.
ಕಾಂಗ್ರೆಸ್ ಹಳೆಯ ವಯಸ್ಸಾದ ಮರ ಇದ್ದ ಹಾಗೆ. ಅದರ ಟೊಂಗೆಗಳು ಒಂದೊಂದೇ ಮುರಿದು ಹೋಗುತ್ತಿವೆ. ಎಲೆಗಳು ಉದುರಿವೆ. ಹೀಗಾಗಿ ಅದು ಬಹಳ ದಿವಸ ಬಾಳಲು ಆಗುವುದಿಲ್ಲ ಎಂಬುದು ಕಾಂಗ್ರೆಸ್ ಪಕ್ಷವು ನಶಿಸುವುದು ನಿಜವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ರೈಲ್ವೆ ವಿಭಾಗೀಯ ಕಚೇರಿ ಸೇರಿದಂತೆ ಕೇಂದ್ರದ ಯೋಜನೆ ತರುವುದಾಗಿ ಸಂಸದ ಜಾಧವ ಸ್ಪಂದನೆ
ನಾವು ಭಾರತೀಯರು. ಸ್ವಾಭಿಮಾನದಿಂದ ಬದುಕುವುದು ಮತ್ತು ಇತರರಿಗೂ ಸ್ವಾಭಿಮಾನದಿಂದ ಬಾಳಲು ಹೇಳುವವರು. ಆದರೆ ಭಿಕ್ಷುಕರಲ್ಲ. ಭಾರತ ದೇಶ ಅಭಿವೃದ್ಧಿಶೀಲ ದೇಶವಾಗಿ ಹೊರಹೊಮ್ಮಬೇಕಾದರೆ ಪ್ರಾಮಾಣಿಕ ರಾಜಕಾರಣಿಗಳು ಇರುವುದು ಬಹಳ ಪ್ರಾಮುಖ್ಯ ಎಂದು ಅವರು ಪ್ರತಿಪಾದಿಸಿದ್ದಾರೆ.
ಅಂದು ಸತ್ಯ ಹರಿಶ್ಚಂದ್ರನು ಸತ್ಯಕ್ಕಾಗಿ ತನ್ನ ಸತಿ, ಸುತರನ್ನು ಮಾರಿಕೊಂಡರೆ, ಇಂದು ನಮ್ಮಲ್ಲಿ ಕೆಲವರು ದುಶ್ಚಟಕ್ಕಾಗಿ, ನೀಚ ರಾಜಕಾರಣಕ್ಕಾಗಿ ಹೆಂಡಿರು, ಮಕ್ಕಳನ್ನು ಮಾರಿಕೊಳ್ಳುತ್ತಿರುವ ಉದಾಹರಣೆಗಳಿವೆ. ನಮ್ಮಲ್ಲಿ ದೇಶಾಭಿಮಾನ ಬೆಳೆಯಬೇಕಾದರೆ ಡಾ. ಬಿ,ಆರ್. ಅಂಬೇಡ್ಕರ್, ಡಾ. ಮದನಮೋಹನ್ ಮಾಳವಿಯಾ, ಡಾ. ಶಾಮ್‌ಪ್ರಸಾದ್ ಮುಖರ್ಜಿ, ಲಾಲ್ ಬಹದ್ದೂರ್ ಶಾಸ್ತ್ರಿ, ಡಾ. ಎ.ಪಿ.ಜೆ. ಅಬ್ದುಲ್ ಕಲಾಂ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್, ಅಟಲ್ ಬಿಹಾರಿ ವಾಜಪೇಯಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಂತಹ ಕನಸು ಹೊಂದಿರಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತದ ಮೊದಲ ಪ್ರಧಾನಿ ಎನಿಸಿಕೊಂಡ ಪಂಡಿತ್ ಜವಾಹರಲಾಲ್ ನೆಹರೂ ಅವರು ಮನಸ್ಸು ಮಾಡಿದ್ದರೆ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಸರ್ವ ರೀತಿಯಲ್ಲಿಯೂ ಉನ್ನತ ಗೌರವ ಸಿಗುತ್ತಿತ್ತು. ಯಾವುದೇ ರೀತಿಯಲ್ಲಿ ಅವರಿಗೆ ಪರಿಗಣಿಸದೇ ನಿರ್ಲಕ್ಷ್ಯ ವಹಿಸಿದರು. ಅದೇ ರೀತಿ ನೆಹರೂ ಅವರ ನಿರ್ಲಕ್ಷ್ಯವನ್ನು ಗಾಂಧಿ ಕುಟುಂಬವು ಡಾ. ಅಂಬೇಡ್ಕರ್ ಅವರಿಗೆ ಮುಂದುವರೆಸಿತು. ಹೀಗಾಗಿ ಅಂಬೇಡ್ಕರ್ ಅವರ ಜನನ ಸ್ಥಳ, ಓದಿನ ಸ್ಥಳ, ಕಾರ್ಯಕ್ಷೇತ್ರ ಮತ್ತು ಇಂಗ್ಲೆಂಡಿನಲ್ಲಿ ಕಳೆದ ದಿನ ಹಾಗೂ ಅಂತಿಮ ಸಂಸ್ಕಾರದ ಸ್ಥಳ ಮುಂತಾದ ಪ್ರದೇಶಗಳನ್ನು ಕಾಂಗ್ರೆಸ್ ಪಕ್ಷವು ಅಭಿವೃದ್ಧಿಪಡಿಸಲಿಲ್ಲ. ಅಲ್ಲದೇ ಭಾರತರತ್ನ ಪ್ರಶಸ್ತಿಯನ್ನೂ ಸಹ ಕೊಡಲಿಲ್ಲ.
ಸಾರಿಗೆ ನೌಕರರ ಮುಷ್ಕರ: ಕಲಬುರಗಿಯಲ್ಲಿ ಸಾರಿಗೆ ಕಚೇರಿ ಬಿಗಿ ಬಂದೋಬಸ್
ಆ ಪ್ರಶಸ್ತಿಯು ಕಾಂಗ್ರೆಸ್ಸೇತರ ವಿ.ಪಿ. ಸಿಂಗ್ ನೇತೃತ್ವದ ಸರ್ಕಾರವು ಭಾರತರತ್ನ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದ್ದು ಒಂದು ಐತಿಹಾಸಿಕ ಸತ್ಯವಾಗಿದೆ. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿ ಅವರು ಅಂಬೇಡ್ಕರ್ ಅವರ ಪಂಚಕ್ಷೇತ್ರಗಳನ್ನು ಅಭಿವೃದ್ಧಿಪಡಿಸುವ ಮೂಲಕ ವಿಶ್ವರತ್ನನಿಗೆ ಕೊಡಬೇಕಾದ ಗೌರವವನ್ನು ನೀಡುವ ಮೂಲಕ ಅಂಬೇಡ್ಕರ್ ಅವರ ಅಭಿಮಾನಿಗಳ ಪಾಲಿಗೆ ಸ್ವಾಭಿಮಾನವನ್ನು ಮೆರೆದಿದ್ದಾರೆ ಎಂದು ಅವರು ಬಣ್ಣಿಸಿದ್ದಾರೆ.
ಕಾಂಗ್ರೆಸ್ ಹಸಿರುಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ದಿ. ಬಾಬು ಜಗಜೀವನರಾಮ್ ಅವರನ್ನು ಸರಿಯಾಗಿ ಬಳಸಿಕೊಂಡು ಕಾರಣವಿಲ್ಲದೇ ಅಂದಿನ ಪ್ರಧಾನಿ ದಿ. ಶ್ರೀಮತಿ ಇಂದಿರಾಗಾಂಧಿ ಅವರು ಪಕ್ಷದಿಂದ ಹೊರ ಹಾಕಿದ್ದು ಒಂದು ತಾಜಾ ಉದಾಹರಣೆಯಾಗಿದೆ ಎಂದು ಅವರು ನಿದರ್ಶನ ನೀಡಿದ್ದಾರೆ.
ರಾಷ್ಟ್ರಪಿತ ಮಹಾತ್ಮಾಗಾಂಧಿ ಅವರು ಸ್ವಾತಂತ್ರ್ಯಕ್ಕಾಗಿ ಹುಟ್ಟುಹಾಕಿದ್ದ ಕಾಂಗ್ರೆಸ್ ಪಕ್ಷವನ್ನು ಸ್ವಾತಂತ್ರ್ಯ ಬಂದ ನಂತರ ಹತ್ತು ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆ ಮಾಡಬೇಕು ಎಂದು ಹೇಳಿದ್ದರು. ಗಾಂಧಿಯವರ ಮಾತನ್ನು ಉಲ್ಲಂಘಿಸಿ ಕಾಂಗ್ರೆಸ್ ಪಕ್ಷವನ್ನು ಒಂದು ರಾಜಕೀಯ ಪಕ್ಷವನ್ನಾಗಿಸಿದ್ದು ಕಾಂಗ್ರೆಸ್ಸಿಗರು ಎಂಬ ಟೀಕೆಗೆ ಒಳಗಾಗಿದೆ.
ಸಾರಿಗೆ ನೌಕರರ ಮುಷ್ಕರ: ಕಲಬುರಗಿಯಲ್ಲಿ ಸಾರಿಗೆ ಕಚೇರಿ ಬಿಗಿ ಬಂದೋಬಸ್
ಅಂದು ಡಾ. ಬಿ.ಆರ್. ಅಂಬೇಡ್ಕರ್ ಅವರು ಹೇಳಿದ್ದು ಸತ್ಯವಾಗಿದೆ. ಕಾಂಗ್ರೆಸ್ ಸುಡುವ ಮನೆಯಿಂದಾಗಿ ಇರುವ ನಾಯಕರು ಆ ಪಕ್ಷವನ್ನು ಬಿಟ್ಟಿದ್ದಾರೆ. ಅದೇ ರೀತಿ ಕಾಂಗ್ರೆಸ್ ಪಕ್ಷವು ನಿರ್ನಾಮವಾಗಬಹುದು ಎಂದಿದ್ದರು. ಹಾಗೆಯೇ ಈಗ ವಿವಿಧ ರಾಜ್ಯಗಳಲ್ಲಿ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಅಲ್ಲದೇ ಲೋಕಸಭೆಯಲ್ಲಿ ವಿರೋಧ ಪಕ್ಷವೂ ಸಹ ಆಗದ ರೀತಿಯಲ್ಲಿ ಹೀನಾಯ ಸೋಲನ್ನು ಅನುಭವಿಸಿದೆ. ಅಂಬೇಡ್ಕರ್ ಅವರ ವಾಣಿ ನೂರಕ್ಕೆ ನೂರರಷ್ಟು ಸತ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…