ಕಲಬುರಗಿ: ಇಂದು ರಾಜ್ಯಾದ್ಯಂತ ಸಾರಿಗೆ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಅನಿರ್ದಿಷ್ಟ ಅವಧಿ ಹೋರಾಟಕ್ಕೆ ಜಿಲ್ಲಾ ಸಾರಿಗೆ ನೌಕರರು ಅಭೂತಪೂರ್ವ ಬೆಂಬಲ ನೀಡಿದ್ದಾರೆ.
ಬೆಳ್ಳಗೆಯಿಂದ ಸಾರಿಗೆ ಬಸ್ ರೋಡಿಗೆ ಇಳಿಯಲಿಲ್ಲ. ಇನ್ನೊಂದೆಡೆ ಪ್ರಯಾಣಿಕರು ಬಸ್ ಗಾಗಿ ಪರದಾಡುವಂತ ಸ್ಥಿತಿ ಸಹ ನಿರ್ಮಾಣವಾಗಿದೆ. ಖಾಸಗಿ ವಾಹನ ಚಾಲಕರು ಇದನ್ನೇ ಬಂಡವಾಳವಾಗಿ ಮಾಡಿಕೊಂಡು ಎರಡು ಪಟ್ಟು ಹೆಚ್ಚು ಮೊತ್ತವನ್ನು ಪಡೆದು ಪ್ರಯಾಣಿಕರಿಗೆ ದೋಚುವಂತಹ ಘಟನೆಗಳು ಕಲಬುರಗಿ ಶಹಾಪುರ, ಕಲಬುರಗಿ ಚಿತ್ತಾಪುರ ಹಾಗೂ ಚಿಂಚೋಳಿ ರಸ್ತೆಗಳಲ್ಲಿ ಕಂಡು ಬಂತು.
ಜಿಪಂ ಕ್ಷೇತ್ರ ವಿಂಗಡಣೆಗೆ ಭಾರಿ ವಿರೋಧ: ಅವಕಾಶ ನೀಡದಿದ್ದರೆ ಕೋರ್ಟ್ ಮೊರೆ
ಸಾರಿಗೆ ನೌಕರರ ಈ ಮುಷ್ಕರದಲ್ಲಿ ಇಲಾಖೆಗೆ ಯಾವುದೇ ರೀತಿ ಹಾನಿ ಉದ್ವಿಗ್ನ ಸಂಭವಿಸದಂತೆ ತಡೆಯಲು ಇಲ್ಲಿನ ಕೇಂದ್ರ ಸಾರಿಗೆ ಕಚೇರಿಯ ಮುಂದೆ ಪೊಲೀಸ್ ಬಿಗಿ ಬಂದೋಬಸ್ತ್ ಕಂಡುಬಂತು.