ಪ್ರಖರ ವೈಚಾರಿಕತೆಯ ಶರಣಜೇಡರ ದಾಸಿಮಯ್ಯ

0
16

ಕಲಬುರಗಿ: ಶರಣರು ಈ ಭವಕ್ಕೆ ಶರಣಾಗದೆ, ಶಿವನಿಗೆ ಶರಣಾದರು, ಅಂತಯೇ ಶಿವಶರಣರೆನಿಸಿದರು.ಸತ್ಯಶುದ್ಧವಾದಕಾಯಕ, ಭಕ್ತಿದಾಸೋಹ, ನಿತ್ಯ ಲಿಂಗಾರ್ಚನೆ, ಶಿವಯೋಗ.ಶಿವಾನುಭವದ ನೆಲೆಯಲ್ಲಿತಮ್ಮ ಬದುಕನ್ನುಅತ್ಯಂತ ಸುಂದರಗೊಳಿಸಿಕೊಂಡು ಇತರರಿಗೂ ಮಾದರಿಯಾದವರು.

ಬಸವ ಸಮಿತಿಯಅನುಭವ ಮಂಟಪದಲ್ಲಿ ಲಿಂ. ಶ್ರೀ ವೀರಪ್ಪ ಗುರುಸಿದ್ದಪ್ಪ ಅನಂತಪುರ ಹಾಗೂ ಶ್ರೀಮತಿ ದಾನಮ್ಮ ವೀರಪ್ಪಅನಂತಪುರ ಸ್ಮರಣಾರ್ಥಅರಿವಿನ ಮನೆ ೬೬೫ ನೆಯದತ್ತಿಕಾರ್ಯಕ್ರಮದಲ್ಲಿಜೇಡರ ದಾಸಿಮಯ್ಯನವರ ವೈಚಾರಿಕತೆಕುರಿತು ಮಾತನಾಡಿದ ಹುನ್ನೂರು ಮಧುರಖಂಡಿಯ ಶರಣಪೂಜ್ಯಡಾ.ಈಶ್ವರ ಮಂಟೂರಅವರು ಶರಣರಿಗೆ ಭೌತಿಕ ಸಂಪತ್ತಿಗಿಂತಲೂಆಧ್ಯಾತ್ಮಿಕ ಸಂಪತ್ತು ಬಹುದೊಡ್ಡದಾಗಿತ್ತು.ಅಂತಹ ಶರಣ ಚಳುವಳಿಯ ಬಹು ದೊಡ್ಡ ವ್ಯಕ್ತಿತ್ವ ವಿಶ್ವ ಮಾನ್ಯ ಶರಣ ವಚನಕಾರ, ಜೇಡರ ದಾಸೀಮಯ್ಯನವರದು.ತನ್ನ ಪತ್ನಿ ದುಗ್ಗಳೆಯೊಂದಿಗೆ, ವಸ್ತ್ರವನ್ನು ನೇಯವುದರಮೂಲಕ. ಧರ್ಮದ, ಬದುಕಿನ, ಆಧ್ಯಾತ್ಮದ ಬಟ್ಟೆಯನ್ನೇ ಹೆಣೆದಿರುವಅಪರೂಪದ ಶರಣಜೇಡರ ದಾಸಿಮಯ್ಯ. ಸಂಸಾರತ್ಯಾಜ್ಯವಲ್ಲ.

Contact Your\'s Advertisement; 9902492681

ಸಿಟಿ ರವಿಗೆ ಪ್ರದೇಶ ಬಂಜಾರ ಸೇವಾ ಸಂಘದಿಂದ ಸನ್ಮಾನ

ಸನ್ಯಾಸ ಶ್ರೇಷ್ಠವಲ್ಲ .ಅರಿವುಆಚಾರಅನುಭಾವವನ್ನು ಅಳವಡಿಸಿಕೊಂಡ ಎಂಥವನೂ ಶರಣನಾಗಬಲ್ಲ ಎಂಬುದನ್ನುತನ್ನಕಾಯಕ ಮುಖಾಂತರ ಸಾಬೀತು ಪಡಿಸಿದ ಶರಣನೆಂದರೆಜೇಡರ ದಾಸಿಮಯ್ಯ ಅಂಗ ಲಿಂಗದ ಒಳೆಗೆ ಲಿಂಗ ಕಂಗಳ ಬೆಳಕು’ ಪರಮ ಪವಿತ್ರವಾದ ನಿನ್ನ ಆಂತರ್ಯದೊಳಗೆ ಆ ಪರಶಿವನ ದಿವ್ಯಚೇತನದಕಿರಣ ನಿನ್ನೊಳಗೆ ಇರುವಾಗ, ರೂಹಿಲ್ಲದ, ಸೀಮೆಯಿಲ್ಲದ, ಕುಲವಿಲ್ಲದ ಆ ನಿಸ್ಸೀಮ ಶಕ್ತಿ ನಿನ್ನಅಂತರಂಗದಲ್ಲಿದೆ. ಅವನನ್ನು ಹುಡುಕುವುದಕ್ಕಾಗಿ ನೀನು ಬೇರೆ ಬೇರೆ ಕ್ಷೇತ್ರಗಳಿಗೆ ತಿರುಗುವಅವಶ್ಯಕತೆಯಿಲ್ಲ. ಇಂದುವಿನ ಬೆಳಗಿಂದ ಇಂದುವಕಾಂಬಂತೆ, ಸೂರ್ಯನ ಬೆಳಕಿಂದ ಸೂರ‍್ಯನಕಾಂಬಂತೆ, ದೀಪದ ಬೆಳಕಿಂದ ದೀಪವ ಕಾಂಬಂತೆ, ತನ್ನ ಬೆಳಕಿನಿಂದ ತನ್ನನೇಕಾಣಬಾರದೆ ಎಂಬ ಚಂದಿಮರಸನ ವಿಚಾರದಂತೆತನ್ನಲ್ಲಿ ಹುದುಗಿರುವ ದಿವ್ಯಚೇತನವನ್ನುಕಾಣಲು ಪ್ರಯತ್ನಸಬೇಕು. ತನ್ನತಾನರಿದರೆತಾನೇದೇವನೋಡುಎಂದು ಬಸವಣ್ಣನವರು ಹೇಳುತ್ತಾರೆ.

ಕಲ್ಯಾಣದಅನುಭವ ಮಂಟಪದಲ್ಲಿ ನಡೆದು-ನುಡಿದ ಸೂಳ್ನುಡಿಗಳೇ ವಚನಗಳು ಅದಕ್ಕೆಂದೇ ಜೇಡರದಾಸಿಮಯ್ಯ ನಿಮ್ಮ ಶರಣರ ಸುಳ್ನುಡಿಗಳ ಒಂದರಘಳಿಗೆ ಇತ್ತೆಯಾದಡೆ.ನಿಮ್ಮನಿತ್ತಂತೆಕಾಣಾರಾಮನಾಥಎನ್ನುತ್ತಾರೆ.ನಮ್ಮನ್ನುಕತ್ತಲೆಯಿಂದ ಬೆಳಕಿನ ಕಡೆಗೆಅಸತ್ಯದಿಂದ ಸತ್ಯದಕಡೆಗೆ, ಅಂಧಶ್ರದ್ಧೆ.ಮೌಢ್ಯತೆಗಳನ್ನುಬಿಡಿಸಿ.ಅಂತರಂಗದಅನುಭಾವದ ನುಡಿಗಡಣವನ್ನು ನಮಗೆ ನೀಡುತ್ತಾರೆ ಇಳೆ ನಿಮ್ಮದಾನ, ಬೆಳೆ ನಿಮ್ಮದಾನ ಸುಳಿದು ಸೂಸುವ ಗಾಳಿ ನಿಮ್ಮದಾನಎಂದುಜೇಡರ ದಾಸಿಮಯ್ಯನವರು ಒಂದೆಡೆ ಹೇಳುತ್ತಾ ಮನುಷ್ಯರಅಹಮ್ಮಿಕೆಯ ಭ್ರಮನಿರಸನ ಮಾಡುತ್ತಾರೆ.ನಿಮ್ಮದಾನವನುಂಡುಅನ್ಯರನು ಹೊಗಳುವ ಕುನ್ನಿಗಳನೇನೆಂಬೆ ರಾಮನಾಥಎಂದು ಮಾನವನಅಹಂಕಾರಕ್ಕೆಕೊಡಲಿ ಪೆಟ್ಟುಕೊಡುತ್ತಾರೆ.

ರಂಜಾನ್ ವ್ರತಾಚರಣೆ ಮಾಡುವ ವಿದ್ಯಾರ್ಥಿಗಳಿಗೆ ಇಲಾಖೆಯಿಂದ ವಿಶೇಷ ಸುತ್ತೋಲೆ

ಇಂದಿಂಗೆ ನಾಳಿಂಗೆ ಚಿಂತಿಸಲೇಕತಂದಿಕ್ಕುವ ಶಿವಂಗೆ ಬಡತನವುಂಟೆ?ಬೆದರದೆ ಬೆಚ್ಚದೆಇದ್ದರೆಕರವಿಡಿದೆತ್ತಿಕೊಂಬ ನಮ್ಮರಾಮನಾಥಎಂದು ದಾಸಿಮಯ್ಯನವರು ಸಾಧಕನಿಗೆಆತ್ಮ ಸ್ಥೈರ್ಯವನ್ನುತುಂಬುತ್ತಾರೆ.ಅನುಭಾವವಿಲ್ಲದ ಭಕ್ತಿ ಬಲು ಶಟಗನ ಭಕ್ತಿ ದಿಟವೆಂದು ನಂಬಲು ಬೇಡಎಂದು ಹೇಳಿ ನಮ್ಮ ಮನವು ಘನವಾಗಬೇಕಾದರೆಅನುಭಾವವು ಗಟ್ಟಿಗೊಳ್ಳಬೇಕೆಂದು ಹೇಳುತ್ತಾರೆ.

ಕಾರ್ಯಕ್ರಮದಲ್ಲಿ ಕಲಬುರಗಿ ಬಸವ ಸಮಿತಿಯಅಧ್ಯಕ್ಷರಾದಡಾ. ವಿಲಾಸವತಿ ಖೂಬಾ, ಡಾ.ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಕೇಂದ್ರದ ನಿರ್ದೇಶಕರಾದಡಾ.ವೀರಣ್ಣದಂಡೆ, ಕಾರ್ಯದರ್ಶಿ ಡಾ.ಆನಂದ ಸಿದ್ಧಾಮಣಿ, ಸಹ ಕಾರ್ಯದರ್ಶಿ ಶ್ರೀ ವೀರಬಸವಂತ ಮತ್ತುದತ್ತಿ ದಾಸೋಹಿಗಳಾದ ಶ್ರೀ ಸಿದ್ದೇಶ್ವರ ಅನಂತಪುರ ಉಪಸ್ಥಿತ್ತರಿದ್ದರು.ಶ್ರೀ ಹೆಚ್.ಕೆ.ಉದ್ದಂಡಯ್ಯ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here