ಸೋಲು ಗೆಲುವು ಮುಖ್ಯವಲ್ಲ, ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ: ಸ್ನೇಹಲ್ ಜಾಯಿ

0
57

ಶಹಾಬಾದ: ಸೋಲು ಗೆಲುವುಗಳು ಮುಖ್ಯವಲ್ಲ ನಾವು ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ಭೀಮ ಬೆಳಕು ಕಾಂಗ್ರೆಸ್ ಯುವ ಮುಖಂಡ ಸ್ನೇಹಲ್ ಜಾಯಿ ಹೇಳಿದರು.

ಅವರು ಹಳೆಶಹಾಬಾದನಲ್ಲಿ ಭೀಮ ಬೆಳಕು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ನಿಮಿತ್ತವಾಗಿ ಆಯೋಜಿಸಲಾದ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ಭೀಮ ಬೆಳಕು ಸಮಾಜ ಸೇವಾ ಟ್ರಸ್ಟ್  ಕ್ರೀಡೆ, ಕಲೆ, ಸಂಸ್ಕೃತಿಯನ್ನ ಉಳಿಸಬೇಕು ಎನ್ನುವ ಉದ್ದೇಶದಿಂದ

Contact Your\'s Advertisement; 9902492681

ವಾಲಿಬಾಲ್ ಪಂದ್ಯಾವಳಿಯನ್ನ ಅದ್ಧೂರಿಯಾಗಿ ಆಯೋಜಿಸಿಕೊಂಡು ಬರುತ್ತಿದ್ದಾರೆ. ಕ್ರೀಡೆಯಲ್ಲಿ ಭಾಗವಹಿಸುವಂತಹ ಸಂದರ್ಭದಲ್ಲಿ ಕ್ರೀಡಾಪಟುಗಳು ಕ್ರೀಡಾ ಮನೋಭಾವನೆಯಿಂದ ಆಡಬೇಕು ಸೋಲು ಗೆಲುವುಗಳು ಮುಖ್ಯವಲ್ಲ ನಾವು ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ. ಒಂದು ಕ್ರೀಡೆ ನಡೆಸುವುದು ಬಹಳ ಸುಲಭ, ಆದರೆ ಅವರ ಒಂದು ಸಂಘಟನೆಯ ಪದಾಧಿಕಾರಿಗಳನ್ನ, ಸದಸ್ಯರನ್ನ ಒಗ್ಗೂಡಿಸಿಕೊಂಡು ಕಾರ್ಯಕ್ರಮ ಆಯೋಜನೆ ಮಾಡುವುದು ಬಹಳ ಕ? ಸಾಧ್ಯ ಎಂದರು.

ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಹಂಪಣ್ಣ ಪೋತನಕರ್ ಮಾತನಾಡಿ, ಕ್ರೀಡೆಯು ದೈಹಿಕ, ಮಾನಸಿಕ, ಹಾಗೂ ಆರೋಗ್ಯಕ್ಕೆ ತುಂಬಾ ಸಹಕಾರಿಯಾಗುತ್ತದೆ ಎಂದರಲ್ಲದೆ ಕ್ರೀಡಾಪಟುಗಳು ಹೆಚ್ಚಾಗಿ ಕ್ರೀಡೆಯಲ್ಲಿ ತೊಡಗಿಕೊಂಡು ಉನ್ನತ  ಮಟ್ಟಕ್ಕೆ ಬೆಳೆದು ಉತ್ತಮ ಕ್ರೀಡಾಪಟುಗಳಾಗಿ ಹೊರಹೊಮ್ಮಿ. ಕ್ರೀಡೆಯು ಹಲವಾರು ಖಾಯಿಲೆಗಳನ್ನು ವಾಸಿ  ಮಾಡುವಂತಹ ಶಕ್ತಿಯನ್ನು ಹೊಂದಿದ್ದು ಜತೆಗೆ ಮಾನಸಿಕ ಶಕ್ತಿಯು ಕೂಡ ಬೆಳೆಸಿಕೊಳ್ಳಬಹುದು ಎಂದು ಹೇಳಿದರು.

ಕ್ರೀಡಾ ಸಂಯೋಜಕ ಪ್ರೇಮ ಸಾಗರ,ಮೋಹನ ಪೋತನಕರ್,ರಾಹುಲ ಪೋತನಕರ್, ಸುನೀಲ ಮೆಂಗನ, ಪ್ರವೀಣ ಪೋತನಕರ್, ಸಾತವಿಕ್ ಪಂಚಿ,ಕೌಶಿಕ ಜಾಯಿ, ವಿಶ್ವ ಜಾಯಿ,ರವಿ ಮೆಂಗನ,ಅಝಿಲ ಮೆಂಗನ, ಬಸ್ಸು, ಪವನ ಪೋತನಕರ್, ನಾಗೇಶ ಮೆಂಗನ, ಕಾರ್ತಿಕ ಜಾಯಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here