ಕನ್ನಡದ ಕಂಪನ್ನು ಪಸರಿಸಿದ ಮಹಾನ್ ಚೇತನ ಡಾ.ರಾಜಕುಮಾರ: ಪಾಟೀಲ

1
215

ಶಹಾಬಾದ: ಡಾ.ರಾಜ್‌ಕುಮಾರ್ ಅವರು ಭೂಮಿಗೆ ಬೀಜವಾಗಿ ಬಿದ್ದು ವೃಕ್ಷವಾಗಿ ಬೆಳೆದ ಅಪ್ಪಟ ಕಲಾವಿದ. ಕನ್ನಡ ಜನತೆಗೆ ಕನ್ನಡದ ಕಂಪನ್ನು ಪಸರಿಸಿದ ಮಹಾನ್ ಚೇತನ ಎಂದು ಕಸಾಪ ಕಲಬುರಗಿ ಗ್ರಾಮೀಣ ಅಧ್ಯಕ್ಷ ಶರಣಗೌಡ ಪಾಟೀಲ ಹೇಳಿದರು.

ಅವರು ನಗರದ ಸಮುದಾಯ ಆರೋಗ್ಯ ಕೇಂದ್ರದ ಪಕ್ಕದಲ್ಲಿ ಡಾ.ರಾಜಕುಮಾರ ಮಾರ್ಗದಲ್ಲಿ ವರನಟ ಡಾ. ರಾಜಕುಮಾರ ಅವರ ಜನ್ಮದಿನದ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾಡಿನಲ್ಲಿ ರಾಜಕುಮಾರ ಅವರನ್ನು ಗೊತ್ತಿಲ್ಲದವರು ಯಾರು ಇಲ್ಲ.ಅವರು ಎಷ್ಟೋ ಕಲಾವಿದರನ್ನು ಮಿಂಚುವಂತೆ ಮಾಡಿರುವುದು ಮಾತ್ರ ಸತ್ಯ. ಅವರ ಸರಳ ವ್ಯಕ್ತಿತ್ವದಿಂದಿರುವುದರಿಂದಲೇ ಅವರಿಗೆ ಯಾರು ಶತ್ರುಗಳಿರಲಿಲ್ಲ.ಅವರ ವ್ಯಕ್ತಿತ್ವ ಕಂಡು ಕಾಡುಗಳ್ಳ ವೀರಪ್ಪನ ಅವರನ್ನು ಬಿಟ್ಟಿರುವುದು ನಮಗೆಲ್ಲ ಗೊತ್ತಿರುವ ವಿಚಾರ.ಸಮಾಜವನ್ನು ಪ್ರತಿಸುವುದರ ಜತೆಗೆ ಕನ್ನಡ ಚಳುವಳಿಯಲ್ಲಿ ಭಾಗವಹಿಸುತ್ತಿದ್ದರು. ಅಲ್ಲದೇ ಗೋಕಾಕ ವರದಿ ಜಾರಿಯಾಗಲು ರಾಜಕುಮಾರ ಅವರೇ ಕಾರಣರಾಗಿದ್ದಾರೆ ಎಂದು ಮರೆಯಬಾರದೆಂದು ಹೇಳಿದರು.

Contact Your\'s Advertisement; 9902492681

ರಾಜಾ ಕುಮಾರ ನಾಯಕ ಜನುಮ ದಿನ:ರೋಗಿಗಳಿಗೆ ಹಾಲು ಹಣ್ಣು ವಿತರಣೆ

ಗುರುರೇವಣಸಿದ್ಧ ಪೂಜಾರಿ ಮಾತನಾಡಿ, ಡಾ.ರಾಜಕುಮಾರ ಅವರು ಅಭಿಮಾನಿಗಳನ್ನು ’ಅಭಿಮಾನಿ ದೇವರು’ ಎಂದು ಸಂಬೋಧಿಸಿದ ಮಹಾನ್ ವ್ಯಕ್ತಿ. ಅವರು ನಿಧನರಾಗಿ ಸುಮಾರು ವ? ಕಳೆದರೂ ಇಂದಿನ ಮಕ್ಕಳ ಬಾಯಿಯಲ್ಲಿ ಅವರ ಹೆಸರು ಅಜರಾಮರವಾಗಿ ಉಳಿದಿದೆ ಎಂದು ಹೇಳಿದರು.

ಕಸಾಪ ನಗರಾಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ ಮಾತನಾಡಿ, ಡಾ.ರಾಜ್‌ಕುಮಾರ್ ಅವರು ಎಲ್ಲರಿಗೂ ಚಿರಪರಿಚಿತರು. ಅವರು ನಟಿಸುತ್ತಿದ್ದ ಚಿತ್ರಗಳು ಕೌಟುಂಬಿಕ ಹಿನ್ನೆಲೆಯ ಕಥಾಹಂದರ ಹೊಂದಿದ್ದವು ಹಾಗೂ ಮನೆ ಮಂದಿಯೆಲ್ಲಾ ಒಟ್ಟಿಗೆ ಕುಳಿತು ನೋಡುವಂತಹ ಉತ್ತಮ ಭಾವನೆಯ ಚಿತ್ರಗಳಾಗಿದ್ದವು.ಅವರಿಲ್ಲದೇ ಇಂದು ಅಂತಹ ಕೌಟುಂಬಿಕ ಹಾಗೂ ಮೌಲ್ಯಗಳನ್ನು ಬಿತ್ತುವ ಚಲನಚಿತ್ರಗಳು ಮಾಯವಾಗಿವೆ ಎಂದು ಹೇಳಿದರು.

ಶಿಕ್ಷಕ ಚಂದುಲಾಲ ಬಸೂದೆ,ಸಂತೋಷ ದೊಡ್ಡಮನಿ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here