ಕೋವಿಡ್ ನಿಂದ ತಂದೆ ತಾಯಿ ಇಬ್ಬರನ್ನು ಕಳೆದು ಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ: ಶ್ರೀಗಳು

ಬೀದರ್: ರಾಜ್ಯದಲ್ಲಿ ಮಹಾಮಾರಿಕೊರೊನಾ ಸೋಂಕಿಗೆ ತುತ್ತಾಗಿತಂದೆತಾಯಿಇಬ್ಬರನ್ನು ಕಳೆದುಕೊಂಡು ಅನಾಥಆಗಿರುವ ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ, ಆಶ್ರಯ ನೀಡಲಾಗುವುದುಎಂದು ಭಾಲ್ಕಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್‌ನ ಅಧ್ಯಕ್ಷರಾಗಿರುವ ಡಾ.ಬಸವಲಿಂಗ ಪಟ್ಟದ್ದೇವರು ಅಭಯ ನೀಡಿದ್ದಾರೆ.

ರಾಜ್ಯದಲ್ಲಿಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಇಡೀ ಮನುಕೂಲವೇ ತಲ್ಲಣಗೊಂಡಿದೆ. ಅನೇಕ ಕಡೆಗಳಲ್ಲಿ ಪ್ರತಿದಿನ ಸಾಕಷ್ಟು ಸಾವು ನೋವು ಸಂಭವಿಸುತ್ತಿದ್ದು, ತುರ್ತು ಪರಿಸ್ಥಿತಿ ಎದುರಾಗಿದೆ. ಇಂತಹ ಸಂದರ್ಭದಲ್ಲಿಯಾರನ್ನುದೋಷಿಸುವುದು, ದೂರುವುದು ಸರಿಯಲ್ಲ. ಸರಕಾರ, ಜನಪ್ರತಿನಿಧಿಗಳು ತಮ್ಮ ಪಾಲಿನ ಜವಾಬ್ದಾರಿಅರಿತುಕರ್ತವ್ಯ ನಿಭಾಯಿಸಿ ವ್ಯವಸ್ಥೆಯನ್ನು ಸರಿದಾರಿಗೆತರುವ ಪ್ರಯತ್ನ ಮಾಡುತ್ತಿದ್ದಾರೆ.

ಕೊವಿಡ್-19 ಸೊಂಕಿತರ ತ್ಯಾಜ್ಯ ವಿಲೇವಾರಿಗೆ ಮುಂದಾದ ಶಹಾಬಾದ ನಗರಸಭೆ

ಕೋವಿಡ್ ಹೊಡೆತಕ್ಕೆ ಮನುಕೂಲ ನಡುಗಿ ಹೋಗಿದೆ. ಸೋಂಕು ಚಿಕ್ಕವರುದೊಡ್ಡವರುಎನ್ನದೇಎಲ್ಲರನ್ನುಕಾಡುತ್ತಿದೆ. ವೈರಸ್‌ಗೆ ಲೆಕ್ಕವಿಲ್ಲದಷ್ಟು ಮುಗ್ಧಜೀವಗಳು ಬಲಿಯಾಗುತ್ತಿರುವುದುಆಘಾತ ತರಿಸಿದೆ. ಇದರಿಂದ ಬಚಾವಾಗಲು ಎಲ್ಲರೂ ಮುನ್ನಚರಿಕೆ ವಹಿಸಬೇಕಿದೆ. ಎಲ್ಲವನ್ನು ಸರಕಾರ ಮತ್ತುಜನಪ್ರತಿನಿಧಿಗಳಿಂದ ನಿರೀಕ್ಷೆ ಮಾಡುವುದು ಸರಿಯಲ್ಲ. ಸಂಕಷ್ಟದ ಸಮಯದಲ್ಲಿ ಮಠಾಧೀಶರು, ಸಂಘ ಸಂಸ್ಥೆಗಳ ಮುಖಂಡರು, ಉಳ್ಳುವರು ಸೇರಿಕೋವಿಡ್ ಹೊಡೆದೊಡಿಸುವುದರಜತೆಗೆ ಸಂಕಷ್ಟದಲ್ಲಿರುವಜನರ ಸಹಾಯಕ್ಕೆ ನಿಲ್ಲಬೇಕಿದೆ.

ಈ ಹಿನ್ನೆಲೆಯಲ್ಲಿಕೋವಿಡ್ ಸೋಂಕಿನಿಂದರಾಜ್ಯದಲ್ಲಿತಂದೆತಾಯಿಇಬ್ಬರನ್ನು ಕಳೆದು ಕೊಂಡಅನಾಥರಾಗಿಆಶ್ರಯ ವಂಚಿತರಾಗಿರುವ ಮಕ್ಕಳನ್ನು ಭಾಲ್ಕಿ ಶ್ರೀಮಠದ ವತಿಯಿಂದಉನ್ನತ ವ್ಯಾಸಂಗ ಪಡೆದುತಮ್ಮ ಭವಿ? ರೂಪಿಸಿಕೊಳ್ಳುವ ವರೆಗೂಉಚಿತ ಶಿಕ್ಷಣ, ವಸತಿ, ಆಶ್ರಯ ನೀಡಿಉತ್ತಮ ನಾಗರಿಕರನ್ನಾಗಿ ಮಾಡಲಾಗುವುದು.

ಆಕ್ಸಿಜನ್ ಸಿಲಿಂಡರ್ ನೀಡಿ ನೆರವಾದ ಜೆಪಿ ಕಾರ್ಖಾನೆ

ಹೆಚ್ಚಿನ ಮಾಹಿತಿಗಾಗಿ ಪೀಠಾಧಿಪತಿಗುರುಬಸವ ಪಟ್ಟದ್ದೇವರು 9606069333 ಮತ್ತು ಹಿರೇಮಠ ಸಂಸ್ಥಾನ ವಿದ್ಯಾಪೀಠಟ್ರಸ್ಟ್ ಆಡಳಿತಾಧಿಕಾರಿ ಮೋಹನ ರೆಡ್ಡಿ 7353304502 ಅವರನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿಕೋರಿದ್ದಾರೆ.

emedialine

Recent Posts

ಜೀವನದಲ್ಲಿ ಸವಾರ್ಂಗೀಣ ಸ್ವಾಸ್ಥ್ಯ ಸಾಧಿಸಲು ಭಾರತೀಯ ಜ್ಞಾನ ವ್ಯವಸ್ಥೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ

ಕಲಬುರಗಿ; ಪ್ರಾಚೀನ ಭಾರತೀಯ ಜ್ಞಾನ ವ್ಯವಸ್ಥೆಯು ಜೀವನದಲ್ಲಿ ಸವಾರ್ಂಗೀಣ ಆರೋಗ್ಯ ಮತ್ತು ಸ್ವಾಸ್ಥ್ಯವನ್ನು ಸಾಧಿಸಲು ಎಲ್ಲಾ ಸಮಸ್ಯೆಗಳಿಗೆ ಉತ್ತರ ಮತ್ತು…

4 mins ago

ಕಾವ್ಯ ದೊಂಬರಾಟವಲ್ಲ: ಕಾವ್ಯ ಸಂಸ್ಕೃತಿ ಯಾನಕ್ಕೆ ಚಾಲನೆ

ಕಲಬುರಗಿ: 'ಕಾವ್ಯ ದೊಂಬರಾಟವಲ್ಲ. ನಿಜವಾದ ಹಸಿವು ಗುರುತಿಸುವುದು ಕಾವ್ಯ' ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.‌ಬಸವರಾಜ ಸಾದರ ಅಭಿಪ್ರಾಯ…

55 mins ago

ಕೋಲಿ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ತಾಲೂಕು ಕೋಲಿ ಸಮಾಜದ ಅಧ್ಯಕ್ಷರಾಗಿ ಮೂರು ವರ್ಷಗಳ ಅವಧಿ ಪೂರ್ಣಗೊಂಡಿದ್ದರಿಂದ ನೂತನ ಪದಾಧಿಕಾರಿಗಳ ಆಯ್ಕೆಗೆ…

3 hours ago

ನೂತನ ಪದಾಧಿಕಾರಿಗಳ ಪದಗೃಹಣ, ಅಭಿನಂದನಾ ಸಮಾರಂಭ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ: ಪಟ್ಟಣದ ಅಕ್ಕಮಹಾದೇವಿ ಮಂದಿರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಚಿತ್ತಾಪುರ ತಾಲೂಕಿನ…

4 hours ago

ಕೆಬಿಎನ ಆಸ್ಪತ್ರೆಯಲ್ಲಿ ಉಚಿತ ಇಸಿಜಿ ತಪಾಸಣೆ

ಕಲಬುರಗಿ: ವಿಶ್ವ ಹೃದಯದ ದಿನದ ಅಂಗವಾಗಿ ಸ್ಥಳೀಯ ಖಾಜಾ ಬಂದಾನವಾಜ ವಿವಿಯ ಖಾಜಾ ಬಂದಾನವಾಜ ಆಸ್ಪತ್ರೆಯ ಜನರಲ ಮೆಡಿಸಿನ್ ವಿಭಾಗದಲ್ಲಿ…

5 hours ago

ವಿದ್ಯಾರ್ಥಿಗಳ ಕೌಶಲ್ಯ ಉತ್ತೇಜನ ಕಾರ್ಯಕ್ರಮ (Technical event)

ಕಲಬುರಗಿ: ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಅನಿಲ್ ಕಲಾಸ್ಕರ್ ಅವರು "ಸಾಫ್ಟ್‌ವೇರ್ ಇಂಜಿನಿಯರಿಂಗ್ ಮತ್ತು AI" ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.…

6 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420