ಶಹಾಬಾದ: ಕರೊನಾ ಎರಡನೇ ಅಲೆಯ ಸಂಕಷ್ಟ ಸಮಯದಲ್ಲಿ ್ಲ ಜೀವ ರಕ್ಷಕ ಆಕ್ಸಿಜನ್ ಕೊರತೆಯಿಂದ ರೋಗಿಗಳು ತೊದರೆಯಾಗಬಾರದೆಂದು ನಗರದ ಜೆಪಿ ಕಾರ್ಖಾನೆ ತಾಲೂಕಾಡಳಿತಕ್ಕೆ ಸುಮಾರು 25 ಜಂಬೋ ಆಕ್ಸಿಜನ್ ಸಿಲಿಂಡರ್ ನೀಡಿ ಸಹಾಯಕ್ಕೆ ನೆರವಾಗಿದೆ.
ನಗರದಲ್ಲಿ ಕರೊನಾ ಎರಡನೇ ಅಲೆಯ ಅಬ್ಬರ ಹೆಚ್ಚಾಗುತ್ತಿದೆ.ಇದರಿಂದ ತಾಲೂಕಿನಲ್ಲಿ ಆತಂಕದ ಮನೆ ಮಾಡಿದೆ.ಸೊಂಕಿತರು ಜಿಲ್ಲಾ ಕೇಂದ್ರದ ಎಲ್ಲಾ ಆಸ್ಪತ್ರೆಗಳಿಗೆ ಅಲೆದಾಟ ಮಾಡಿದರೂ ಆಕ್ಸಿಜನ್ ಹಾಗೂ ಬೆಡ್ ಕೂಡ ಸಿಗುತ್ತಿಲ್ಲ.ಆದ್ದರಿಂದ ಆಕ್ಸಿಜನ್ ಕೊರತೆಯಿಂದ ಸಾವಿನ ಸಂಖ್ಯೆಯೇ ಹೆಚ್ಚಾಗುತ್ತಿದರುವುದನ್ನು ಮನಗಂಡು, ತಹಸೀಲ್ದಾರ ಸುರೇಶ ವರ್ಮಾ ಅವರು ಕನಿಷ್ಠ ಪಕ್ಷ ಆಕ್ಸಿಜನ್ ಕೊರತೆಯನ್ನು ರೋಗಿಗೆ ನೀಗಿಸಿದರೇ ಪ್ರಾಣಾಪಾಯದಿಂದ ಉಳಿಯಬಹುದೆಂಬ ಆಲೋಚನೆ ಮಾಡಿ ನಗರದ ಜೆಪಿ ಮುಖ್ಯಸ್ಥ ಮಂಜುನಾಥ ಪ್ರಭು ಸಂಪರ್ಕಿಸಿ ಆಕ್ಸಿಜನ್ ಸಿಲಿಂಡರ್ ನೀಡಲು ಸಹಾಯ ಹಸ್ತ ಚಾಚಿದ್ದಾರೆ.
ಅದಕ್ಕೆ ಮಂಜುನಾಥ ಪ್ರಭು ಅವರು ಉದಾರ ಮನಸ್ಸಿನಿಂದ ಸುಮಾರು 25 ಜಂಬೋ ಆಕ್ಸಿಜನ್ ಸಿಲಿಂಡರ್ ನೀಡಿ ಸಹಾಯಕ್ಕೆ ನೆರವಾಗಿದ್ದಾರೆ.ಕಂದಾಯ ಇಲಾಖೆಯ ಗ್ರೇಡ್-2 ತಹಸೀಲ್ದಾರ ವೆಂಕನಗೌಡ ಪಾಟೀಲ, ಕಂದಾಯ ನಿರೀಕ್ಷಕ ವೀರಭದ್ರಪ್ಪ, ಗ್ರಾಮ ಲೆಕ್ಕಿಗ ಶ್ರೀಮಂತ ಅವರು ಕಾರ್ಖಾನೆಗೆ ಬೇಟಿ ನೀಡಿ ಸಿಲಿಂಡರ್‍ಗಳನ್ನು ತೆಗೆದುಕೊಂಡು ಸಮುದಾಯ ಆರೋಗ್ಯ ಕೇಂದ್ರಕ್ಕೆ ಒಪ್ಪಿಸಿದ್ದಾರೆ.ಇದರಲ್ಲಿ ಮೂರು ಜಂಬೋ ಸಿಲಿಂಡರ್‍ಗಳಲ್ಲಿ ನ್ಯೂನತೆ ಕಂಡು ಬಂದಿದ್ದು, ವಾಶಿಯರ್ ಹಾಕಿ ಸರಿಪಡಿಸಲಾಗುತ್ತದೆ ಎಂದು ತಿಲಿಸಿದ್ದಾರೆ.
ಈ ಸಂದರ್ಭದಲ್ಲಿ ಜೆಪಿ ಕಾರ್ಖಾನೆಯ ಜೆಇ ರಾಗವೇಂದ್ರ, ಅಕ್ಬರ್ ಚಿಟ್, ಮಹ್ಮದ್ ಅಜರ್, ಮಾಜಿ ನಗರಸಭೆಯ ಅಧ್ಯಕ್ಷ ಗಿರೀಶ ಕಂಬಾನೂರ ಸೇರಿದಂತೆ ಅನೇಕರು ಇದ್ದರು.