ಕಲಾ ಮಂದಿರದಲ್ಲಿ ರಂಜಾನ್ ಬಸವ ಜಯಂತಿ ಶಾಂತಿ ಸಭೆ

0
21

ಸುರಪುರ: ಸರಕಾರದ ಆದೇಶದಂತೆ ಈ ಬಾರಿಯ ರಂಜಾನ್ ಮತ್ತು ಬಸವ ಜಯಂತಿಯನ್ನು ನಿಮ್ಮ ನಿಮ್ಮ ಮನೆಗಳಲ್ಲಿಯೆ ಆಚರಿಸುವಂತೆ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ತಿಳಿಸಿದರು.

ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಪೊಲೀಸ್ ಇಲಾಖೆ ಹಾಗು ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ,ರಂಜಾನ್ ಹಬ್ಬವೆಂದು ಯಾರು ಕೂಡ ಮೆರವಣಿಗೆ ನಡೆಸುವುದಾಗಲಿ,ಪರಸ್ಪರ ಕೈ ಕುಲುಕುವುದಾಗಲಿ, ಅಪ್ಪಿಕೊಳ್ಳುವುದನ್ನು ಮಾಡದಿರಿ.ಅಲ್ಲದೆ ಬೇರೆಯವರನ್ನು ಮನೆಗೆ ಔತಣಕ್ಕೂ ಕರೆಯಬೇಡಿ,ಯಾಕೆಂದೆರೆ ಕೊರೊನಾ ಸೊಂಕು ತುಂಬಾ ವೇಗವಾಗಿ ಹರಡುತ್ತಿದ್ದು,ಇದರಿಂದ ದೂರ ಉಳಿಯುವುದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

Contact Your\'s Advertisement; 9902492681

ಉದ್ಯೋಗ ಖಾತ್ರಿ ಆರಂಭಿಸಲು ಪ್ರಾಂತ ಕೃಷಿ ಕೂಲಿಕಾರರ ಸಂಘ ಪ್ರತಿಭಟನೆ

ಪಿಐ ಎಸ್.ಎಮ್.ಪಾಟೀಲ್ ಮಾತನಾಡಿ,ಸರಕಾರದ ಆದೇಶವನ್ನು ಎಲ್ಲರೂ ಪಾಲಿಸಬೇಕು ಮುಸ್ಲೀಂ ಬಾಂಧವರು ರಂಜಾನ್ ಹಬ್ಬವನ್ನು ಮನೆಯಲ್ಲಿಯೇ ಆಚರಿಸಿ ಮಜೀದ್‌ಗೆ ಯಾರೂ ಹೋಗಬೇಡಿ,ಇನ್ನು ಬಸವ ಜಯಂತಿಯನ್ನೂ ದೇವಸ್ಥಾನದಲ್ಲಿ ಆಚರಿಸುವಂತಿಲ್ಲ ತಮ್ಮ ತಮ್ಮ ಮನೆಗಳಲ್ಲಿಯೆ ಆಚರಿಸಿ.ದೇವಸ್ಥಾನದಲ್ಲಿ ಕೇವಲ ಅರ್ಚಕರು ಮಾತ್ರ ದೇವರಿಗೆ ಸಾಂಪ್ರದಾಯಿಕವಾಗಿ ಸರಳವಾಗಿ ಪೂಜೆಯನ್ನು ನೆರವೇರಿಸಲು ಮಾತ್ರ ಅವಕಾಶವಿದೆ ಎಂದರು.

ನಂತರ ಮಾಜಿ ನಗರಸಭೆ ಅಧ್ಯಕ್ಷ ಶೇಖ್ ಮಹಿಬೂಬ ಒಂಟಿ ಮಾತನಾಡಿ,ಮಜೀದ್‌ನಲ್ಲಿ ಕೇವಲ ಐದು ಜನರು ಪ್ರಾರ್ಥನೆಗೆ ಅವಕಾಶ ನೀಡುವಂತೆ ಮನವಿ ಮಾಡಿದರು.ನಂತರ ಮುಫ್ತಿ ಎಕ್ಬಾಲ್ ಒಂಟಿ ಮಾತನಾಡಿ,ಸರಕಾರ ನಮ್ಮೆಲ್ಲರ ಒಳಿತಿಗಾಗಿಯೆ ನಿಯಮ ಮಾಡಿದೆ,ಎಲ್ಲರು ಆದೇಶವನ್ನು ಪಾಲಿಸೋಣ ಈ ಬಾರಿಯ ರಂಜಾನ್ ಹಬ್ಬವನ್ನು ಸರಳವಾಗಿ ಮನೆಗಳಲ್ಲಿಯೆ ಆಚರಿಸೋಣ ಎಂದು ಎಲ್ಲರಿಗೂ ತಿಳಿಸಿದರು.

ಪತ್ರಕರ್ತ ಕಾಗಲಕರ್ ನಿಧನಕ್ಕೆ ಶಾಸಕ ಗುತ್ತೇದಾರ ಸಂತಾಪ

ಸಭೆಯಲ್ಲಿ ಮುಖಂಡರಾದ ಅಬ್ದುಲ್ ಗಫೂರ ನಗನೂರಿ ಖಾಜಾ ಖಲೀಲ ಅಹ್ಮದ್ ಅರಕೇರಿ ಖಾಲಿದ್ ಅಹ್ಮದ್ ತಾಳಿಕೋಟಿ ಶರಣು ಕಳ್ಳಿಮನಿ ಲಿಯಾಖತ್ ಹುಸೇನ್ ಉಸ್ತಾದ್ ಉಸ್ತಾದ ವಜಾಹತ್ ಹುಸೇನ್ ಅಬ್ದುಲ್ ಮಜೀದ್ ಸಾಬ್ ಗಫರ್ ಖುರೇಶಿ ಮಹ್ಮದ್ ಮೌಲಾ ಸೌದಾಗರ್ ದಾವೂದ್ ಇಬ್ರಾಹಿಂ ಪಠಾಣ್ ಅಬೀದ್ ಹುಸೇನ್ ಪಗಡಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here